ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಆರ್‌ನಲ್ಲಿ ಭೂಮಿದಿನ ರಿಕಿ ಕೇಜ್‌ ಗಾಯನ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಭೂಮಿದಿನದ ಅಂಗವಾಗಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹದೇವಪುರದ ವಿಆರ್‌ ಬೆಂಗಳೂರು ಮಾಲ್‌ನ ಸ್ಕೈಡೆಕ್‌ನಲ್ಲಿ ಶನಿವಾರ ಮತ್ತು ಭಾನುವಾರ ಗ್ರ್ಯಾಮಿ ಪ್ರಶಸ್ತಿ ವಿಜೇತ, ಪರಿಸರವಾದಿ ರಿಕಿ ಕೇಜ್‌ ಹಾಗೂ ಅವರ ತಂಡದಿಂದ ಸಂಗೀತ ಕಾರ್ಯ ಕ್ರಮ ನಡೆಯಲಿದೆ.

‘ಈ ವರ್ಷದ ಭೂಮಿದಿನದ ವಿಷಯ ಭೂಮಿಯನ್ನು ಪ್ಲಾಸ್ಟಿಕ್ ಮಾಲಿನ್ಯ ಮುಕ್ತಗೊಳಿಸುವುದು. ಇಲ್ಲಿ ಹಸಿರು, ಪ್ರಕೃತಿ, ಪ್ಲಾಸ್ಟಿಕ್‌ ಬಳಕೆ ಹಾನಿ ಹಾಗೂ ಪರಿಸರ ಜಾಗೃತಿ ಕುರಿತಾದ 12 ಹಾಡುಗಳನ್ನು ರಿಕಿ ಕೇಜ್‌ ಹಾಗೂ ತಂಡ ಪ್ರಸ್ತುತಪಡಿಸಲಿದೆ. ಈ ಸಂಗೀತ ಹಬ್ಬವು ಪ್ಲಾಸ್ಟಿಕ್‌ ಮರುಬಳಕೆ ಬಗ್ಗೆ ಜಾಗೃತಿ, ಪ್ಲಾಸ್ಟಿಕ್‌ಗಳಿಂದ ಬೇರೆ ಬೇರೆ ರೂಪಗಳಿಂದ ಆಗುವ ಅಪಾಯಗಳ ಬಗ್ಗೆ ಜನರನ್ನು ಎಚ್ಚರಿಸುತ್ತದೆ’ ಎನ್ನುತ್ತಾರೆ ಅರ್ಥ್‌ ಡೇ ನೆಟ್‌ವರ್ಕ್‌ ಸೌತ್‌ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಕರುಣಾ ಸಿಂಗ್‌.

ಏಪ್ರಿಲ್‌ 22ರಂದು ಭೂಮಿ ದಿನವನ್ನಾಗಿ 1970ರಿಂದ ಆಚರಿಸ ಲಾಗುತ್ತಿದೆ. ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸಲು ವಿಶೇಷವಾಗಿ ‘ಅರ್ಥ್‌ ಡೇ ನೆಟ್‌ವರ್ಕ್‌’ ವಿಶ್ವದಾದ್ಯಂತ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು ಈವರೆಗೆ ಸುಮಾರು 3 ಕೋಟಿ ಜನರಲ್ಲಿ ಜಾಗೃತಿ ಮೂಡಿಸಿದೆ.

‘ಪ್ಲಾಸ್ಟಿಕ್‌ ನಮ್ಮ ಜೀವನದಲ್ಲಿ ಅಗತ್ಯ ವಸ್ತು ಎಂಬಂತಾಗಿದೆ. ಇದು ಭೂಮಿಯಲ್ಲಿ ಕರಗುವುದಿಲ್ಲ. ಭೂಮಿ ಹಾಗೂ ಸಮುದ್ರದ ಆಳ ದಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್‌ ಇದೆ. 2050ರ ಹೊತ್ತಿಗೆ ಸಮುದ್ರದಲ್ಲಿ ಜಲಚರಗಳಿಗಿಂತ ಪ್ಲಾಸ್ಟಿಕ್‌ ವಸ್ತುವೇ ಜಾಸ್ತಿ ಆಗಲಿದೆ. ಆಹಾರದ ಮೂಲಕವೂ ಪ್ಲಾಸ್ಟಿಕ್‌ ಅಂಶ ದೇಹ ಸೇರುತ್ತಿದೆ. ಇದು ವಿಷಕಾರಿ. ಮಾನವನಿಗೆ ಕ್ಯಾನ್ಸರ್‌ ತರಬಲ್ಲದು. ಹೀಗಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಲೇಬೇಕಾಗಿದೆ. ಜನರು ಎಚ್ಚೆತ್ತುಕೊಳ್ಳಬೇಕು. ಇದಕ್ಕಾಗಿ ಈ ಪ್ರಯತ್ನ’ ಎನ್ನುತ್ತಾರೆ ಕರುಣಾ.

‘ರಿಕಿ ಕೇಜ್‌ ಖ್ಯಾತ ಗಾಯಕ. ತಮ್ಮ ಸುಮಧುರ ಕಂಠ ಹಾಗೂ ಸಂಗೀತದ ಮೂಲಕ ಪರಿಸರದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಮುಂಬೈ, ಅಮೃತಸರದ ಗುರುದ್ವಾರದಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ರಿಕ್ಕಿ ಭಾಗವಹಿಸಿ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಅವರು ಪ್ರಕೃತಿ, ಪರಿಸರ ಹಾಗೂ ಪ್ಲಾಸ್ಟಿಕ್‌ ಬಳಕೆ ಬಗ್ಗೆ 12 ಹಾಡುಗಳನ್ನು ಬರೆದಿದ್ದಾರೆ. ಈ ಹಾಡುಗಳನ್ನೇ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಇದರಲ್ಲಿ ಒಂದು ಹಾಡು ವಿಶೇಷವಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಯಾಕೆ ಕಡಿಮೆ ಮಾಡಬೇಕು ಎಂಬ ಕುರಿತಾಗಿಯೇ ಇದೆ. ಇವುಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಬಲ್ಲದು’ ಎಂದು ವಿವರಿಸುತ್ತಾರೆ.

ಇದೇ ಸಂದರ್ಭ ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವ ಕುರಿತು ಹಿರಿಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಕಾರ್ಯಾಗಾರಗಳೂ ನಡೆಯಲಿವೆ. ಮಕ್ಕಳಿಗೆ ಚಿತ್ರಕಲೆ, ಪ್ಲಾಸ್ಟಿಕ್‌ ಮರುಬಳಕೆ ಮಾಡಿ ಕರಕುಶಲ ವಸ್ತುಗಳ ತಯಾರಿಕೆ ಪ್ರಾತ್ಯಕ್ಷಿತೆ ಮೊದಲಾದ ಕಾರ್ಯಕ್ರಮಗಳು ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT