ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಇಲಾಖೆಗೆ ನಾಲ್ವರು ಸಿ.ಇಗಳು ವಾಪಸ್‌

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ನಿಯಮ 32ರಡಿ ಮುಖ್ಯ ಎಂಜಿನಿಯರ್‌ ವೃಂದದಲ್ಲಿ ಸ್ವತಂತ್ರ ಪ್ರಭಾರದಡಿ ಕೆಲಸ ಮಾಡುತ್ತಿದ್ದ ನಾಲ್ವರು ಹಿರಿಯ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್‌ ಕಳುಹಿಸಲಾಗಿದೆ.

ಸುಪ್ರೀಂ ಕೋರ್ಟ್‌, ಬಿ.ಕೆ. ಪವಿತ್ರ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಅನ್ವಯ ಪರಿಷ್ಕರಿಸಲಾದ ಮುಖ್ಯ ಎಂಜಿನಿಯರ್‌ ಹಾಗೂ ಅಧೀಕ್ಷಕ ಎಂಜಿನಿಯರ್‌ ವೃಂದದ ಜ್ಯೇಷ್ಠತಾ ಪಟ್ಟಿಯಲ್ಲಿ ಈ ಅಧಿಕಾರಿಗಳಿಗೆ ಬಡ್ತಿ ಯಾವಾಗ ನೀಡಬೇಕು ಎಂಬ ದಿನಾಂಕಗಳು ಲಭ್ಯವಿರುವುದಿಲ್ಲ.

ಇದರಿಂದ ನಾಲ್ವರು ಅಧಿಕಾರಿಗಳನ್ನು ಮುಖ್ಯ ಎಂಜಿನಿಯರ್‌ ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿ ಮುಂದುವರಿಸಲು ಸಾಧ್ಯವಿಲ್ಲದ್ದರಿಂದ ಮೂಲ ಇಲಾಖೆಗೆ ವಾಪಸ್‌ ಕಳುಹಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದ ಇಲಾಖೆ

* ಚನ್ನಪ್ಪ ನಾಯಕ್‌ ಪಿ.–ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಎತ್ತಿನಹೊಳೆ ಯೋಜನಾ ವಲಯ, ತುಮಕೂರು

* ಕ್ಷೇತ್ರಪಾಲ್ ಎನ್‌.–ಮಲಪ್ರಭಾ ಮತ್ತು ಘಟಪ್ರಭಾ ಯೋಜನಾ ವಲಯ,ಕರ್ನಾಟಕ ನೀರಾವರಿ ನಿಗಮ, (ಕೆಎನ್‌ಎನ್‌ಎಲ್‌) ಧಾರವಾಡ

* ಕೆ.ಎಫ್‌. ಹುಲಕುಂದ– ಕೆಎನ್‌ಎನ್‌ಎಲ್‌, ಉತ್ತರ ವಲಯ, ಬೆಳಗಾವಿ

* ಉದಯ ಶಂಕರ್‌ ಡಿ.– ಕರ್ನಾಟಕ ಆರೋಗ್ಯ ಅಭಿವೃದ್ಧಿ ಸಂಸ್ಥೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT