ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ಒತ್ತಾಯ

ಚಂದ್ರಬಾಬು ನಾಯ್ಡು ಉಪವಾಸ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ತಮ್ಮ 69ನೇ ಜನ್ಮದಿನವಾದ ಶುಕ್ರವಾರದಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ವಿಜಯವಾಡದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು –ಪಿಟಿಐ ಚಿತ್ರ

ಅಮರಾವತಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ತಮ್ಮ 69ನೇ ಜನ್ಮದಿನವಾದ ಶುಕ್ರವಾರದಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ವಿಜಯವಾಡದ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ 12 ಗಂಟೆಗಳ ’ಧರ್ಮ ಪೋರಾಟ ದೀಕ್ಷಾ’ ಹೆಸರಿನ ಕಾರ್ಯಕ್ರಮಕ್ಕೆ ಪ್ರಾರ್ಥನೆಯೊಂದಿಗೆ ಚಾಲನೆ ನೀಡುವ ಮೂಲಕ ಬೆಳಿಗ್ಗೆ 7ಗಂಟೆಯಿಂದ ನಾಯ್ಡು ಉಪವಾಸ ಆರಂಭಿಸಿದರು. ನಾಯ್ಡು ಅವರ ಪುತ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎನ್‌.ಲೋಕೇಶ್‌ ಹಾಗೂ ಉಪಮುಖ್ಯಮಂತ್ರಿ ರಾಜಪ್ಪ ಅವರು ಸಹ ಉಪವಾಸ ಕೈಗೊಂಡರು.

ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ 250ಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಜತೆಗೆ ವೇದಿಕೆ ಮುಂಭಾಗ 10 ಸಾವಿರ ಜನರಿಗೆ ಕುಳಿತುಕೊಳ್ಳಲು ಬೃಹತ್‌ ಪೆಂಡಾಲ್‌ ಹಾಕಲಾಗಿತ್ತು. ರಾಜ್ಯಕ್ಕೆ ಕೇಂದ್ರ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಚಂದ್ರಬಾಬು ನಾಯ್ಡು ಒತ್ತಾಯಿಸಿದರು. ಆಂಧ್ರಪ್ರದೇಶದ ಎಲ್ಲ ಜಿಲ್ಲೆಗಳಲ್ಲೂ ಸಚಿವರ ನೇತೃತ್ವದಲ್ಲಿ ಹಾಗೂ ವಿಧಾನಸಭೆ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

ತೆಲಂಗಾಣ
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

26 May, 2018
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

‘ಪೋಷಕರು ಒತ್ತಡ ಹಾಕಿರಲಿಲ್ಲ’
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

26 May, 2018
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

ಏಕವಚನದಲ್ಲೇ ನಿಂದನೆ
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

26 May, 2018
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

ಎನ್‌ಡಿಎ ಸರ್ಕಾರಕ್ಕೆ 4 ವರ್ಷ
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

26 May, 2018
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

ಬೆಂಗಳೂರು
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

26 May, 2018