ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ವಸ್ತ್ರ, ಕ್ಷಿಪಣಿ ಪರೀಕ್ಷೆ ಅಂತ್ಯ: ಉತ್ತರ ಕೊರಿಯಾ

Last Updated 21 ಏಪ್ರಿಲ್ 2018, 5:57 IST
ಅಕ್ಷರ ಗಾತ್ರ

ಸೋಲ್‌: ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಕೊನೆಗೊಳಿಸಿರುವುದಾಗಿ ಉತ್ತರ ಕೊರಿಯಾ ಶನಿವಾರ ಪ್ರಕಟಿಸಿದೆ.

ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಸಂಬಂಧ ಪ್ಯೋಂಗ್ಯಾಂಗ್‌, ಸೋಲ್‌ ಹಾಗೂ ವಾಷಿಂಗ್ಟನ್‌ ನಡುವೆ ನಡೆಯಲಿರುವ ಮಾತುಕತೆಗೂ ಮುನ್ನವೇ ಉತ್ತರ ಕೊರಿಯಾ ಈ ನಿರ್ಧಾರ ಪ್ರಕಟಿಸಿದೆ. ಪರಮಾಣು ಪರೀಕ್ಷಾ ವಲಯಗಳನ್ನೂ ಮುಚ್ಚುವ ಯೋಚನೆಯನ್ನೂ ವ್ಯಕ್ತಪಡಿಸಿದೆ.   

ಅಮೆರಿಕ ಸೇರಿ ಹಲವು ರಾಷ್ಟ್ರಗಳ ವಿರೋಧ ಮತ್ತು ಎಚ್ಚರಿಕೆ ನಡುವೆಯೂ ಸಾಲಾಗಿ ಪರಮಾಣು ಕ್ಷಿಪಣಿ ಹಾಗೂ ಮೂರು ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸಿತ್ತು. ನವೆಂಬರ್‌ನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಂಗ್‌ ಉನ್‌ ಪರಮಾಣು ಶಕ್ತಿ ಪರೀಕ್ಷೆ ಸಂಪೂರ್ಣ ಎಂದು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT