ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್ ಬಿರುಗಾಳಿ: ₹ 70 ಸಾವಿರ ಹಾನಿ

Last Updated 21 ಏಪ್ರಿಲ್ 2018, 5:47 IST
ಅಕ್ಷರ ಗಾತ್ರ

ಪಾಲಬಾವಿ: ಮನೆ ಕಟ್ಟಡ ಕಾರ್ಯ ಮುಗಿದು ಮನೆ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಬಿರುಗಾಳಿಗೆ ಚಾವಣಿ ಕಿತ್ತು ಹಾರಿಹೋದ ಘಟನೆ ಗ್ರಾಮದಲ್ಲಿ ಕಳೆದ ಬುಧವಾರ ನಡೆದಿದೆ.

ಗ್ರಾಮದ ಸುಶೀಲಾ ಮಹಾದೇವ ಕರೋಶಿ ಅವರ ಹೊಸ ಮನೆಗೆ ಈ ಹಾನಿ ಸಂಭವಿಸಿದೆ. ಬುಧವಾರ ಮಧ್ಯಾಹ್ನ ಬೀಸಿದ ಗಾಳಿ ಮತ್ತು ಮಳೆಗೆ ಮನೆಯ ಮೇಲಿನ ಚಾವಣಿ, ಪತ್ರೆಗಳೆಲ್ಲ ದೂರದ ಹೊಲದಲ್ಲಿ ಬಿದ್ದಿವೆ.

ಅವರು ಬಸವ ವಸತಿ ಯೋಜನೆಯಡಿ ಈ ಮನೆ ನಿರ್ಮಿಸಿಕೊಂಡಿದ್ದರು. ದಿಢೀರ್ ಬೀಸಿದ ಬಿರುಗಾಳಿಯಿಂದ ಈ ಗಟನೆ ನಡೆದಿದ್ದು, ಸುಮಾರು ₹ 70 ಸಾವಿರ ಹಾನಿಯಾಗಿದೆ ಎಂದು ಮಹಾದೇವ ಕರೋಶಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯ್ತಿಯವರು, ಪಂಚಾಯ್ತಿ ಸದಸ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಬಂದು ಪರಿಶೀಲಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT