ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಗಾಳಿ ಮಳೆ: ತೋಟಗಳಿಗೆ ಹಾನಿ

Last Updated 21 ಏಪ್ರಿಲ್ 2018, 6:49 IST
ಅಕ್ಷರ ಗಾತ್ರ

ಕಳಸ: ಹೋಬಳಿಯಾದ್ಯಂತ ಗುರುವಾರ ಮಧ್ಯಾಹ್ನ ಮತ್ತು ನಡುರಾತ್ರಿ ಭಾರಿ ಗಾಳಿಯ ಜತೆಗೆ ಸುರಿದ ಮಳೆಯಿಂದಾಗಿ ತೋಟಗಳಲ್ಲಿ ಹಾನಿ ಸಂಭವಿಸಿದೆ.
ಗುರುವಾರ ಮಧ್ಯಾಹ್ನ ಬಿರುಸಾಗಿ ಸುರಿದು ವಿರಾಮ ಪಡೆದಿದ್ದ ಮಳೆಯು ಮತ್ತೆ ರಾತ್ರಿ ಆರಂಭವಾಯಿತು. ವೇಗವಾಗಿ ಬೀಸುತ್ತಿದ್ದ ಗಾಳಿಯ ಜೊತೆ ಮಳೆಯೂ ಕೂಡಿಕೊಂಡು ಅನೇಕ ಮರಗಳನ್ನು ನೆಲಕ್ಕೆ ಉರುಳಿಸಿದವು. ಕೆಲ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಕಳಸ ಹೋಬಳಿಯಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆಯವರೆಗೂ ವಿದ್ಯುತ್ ಕಡಿತ ಉಂಟಾಗಿತ್ತು. ಕಾಫಿ ತೋಟಗಳಲ್ಲಿನ ನೆರಳಿನ ಮರಗಳು ಬಿದ್ದು ಕಾಫಿ ಗಿಡಗಳಿಗೆ ಮತ್ತು ಮುಂದಿನ ಫಸಲಿಗೆ ಹಾನಿ ಉಂಟಾಯಿತು. ಬಲವಾಗಿ ಬೀಸುತ್ತಿದ್ದ ಗಾಳಿಯು ಬಹುತೇಕ ತೋಟಗಳಲ್ಲಿ ಅನೇಕ ಅಡಿಕೆ ಮರಗಳನ್ನೂ ಬಲಿ ತೆಗೆದುಕೊಂಡಿತು.

ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ಸ್ಥಳೀಯರು ಕಡಿದು ರಸ್ತೆ ತೆರವು ಮಾಡಿಕೊಂಡರು. ಕಳಸದಲ್ಲಿ ಶುಕ್ರವಾರ ಬೆಳಗಿನ ಜಾವದವರೆಗೆ 50 ಮಿ.ಮೀ. ಮಳೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT