ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿನ ಬೆನ್ನುಹತ್ತಿ ಜೀವತೆತ್ತ ಯುವಕ

ಚಿತ್ರದುರ್ಗ ರಾ.ಹೆ 4ರಲ್ಲಿ ಸಾವಿಗೆ ಆಹ್ವಾನಿಸುವ ಅಪಘಾತ ವಲಯಗಳು
Last Updated 21 ಏಪ್ರಿಲ್ 2018, 6:57 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹಿರಿಯೂರಿನಿಂದ ಚಿತ್ರದುರ್ಗ ವ್ಯಾಪ್ತಿಯಲ್ಲಿ, ಹೆದ್ದಾರಿ ಪೊಲೀಸರೇ ಗುರುತಿಸಿರುವಂತೆ ಬುರುಜಿನರೊಪ್ಪ ದೇವಸ್ಥಾನ, ಬೂತಪ್ಪನಗುಡಿ (ಗುಯಿಲಾಳು ಚೆಕ್ ಪೋಸ್ಟ್) ಹಾಗೂ ಗಿಡ್ಡೋಬನಹಳ್ಳಿ ಅಪಘಾತವಲಯಗಳಿವೆ. ಅಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.

ಪಾಲವ್ವನಹಳ್ಳದ ಬಳಿ ಬುಧವಾರ ಬೆಳಗಿನ ಜಾವ ಮತ್ತೊಂದು ಅಪಘಾತ ಸಂಭವಿಸಿತು. ಮೋಟರ್ ಬೈಕ್‌ನಲ್ಲಿ ಇಪ್ಪತ್ತೆರಡು ಗಂಟೆಗಳಲ್ಲಿ ಸಾವಿರದ ಐನೂರು ಕಿ.ಮೀ ದೂರ ಪೂರೈಸುವ ಸವಾಲಿನ ಬೆನ್ನುಹತ್ತಿದ ಕೇರಳದ ಪಾಲಕ್ಕಾಡ್ ಸಮೀಪದ ಪಾಂಬಡಿ ಜಿಲ್ಲೆಯ ಅಂತಿಮ ಪದವಿ ವಿದ್ಯಾರ್ಥಿ ಮಿಥುನ್‌ ಘೋಷ್‌ (21) ಮೃತರು.

‘ಮಿಥುನ್‌ಗೆ ವೇಗವಾಗಿ ಬೈಕ್ ಓಡಿಸುವ ಹವ್ಯಾಸವಿತ್ತು. ಈ ಹಿನ್ನೆಲೆಯಲ್ಲಿ 22 ಗಂಟೆಗಳಲ್ಲಿ 1500 ಕಿ.ಮೀ ಕ್ರಮಿಸುವ ಸವಾಲನ್ನು ಸ್ವೀಕರಿಸಿದ್ದ. ಅಮೆರಿಕದ ಕಂಪನಿಯೊಂದು ಇಂಥ ಸ್ಪರ್ಧೆಯನ್ನು ಆಯೋಜಿಸಿತ್ತು. ಮಂಗಳವಾರ ಬೈಕ್‌ನಲ್ಲಿ ಊರು ಬಿಟ್ಟಿದ್ದ ಮಿಥುನ್, ಹೊರಡುವ ಮುನ್ನ ತನ್ನ ತಾಯಿಗೆ ಕೊಯಮತ್ತೂರಿಗೆ ಹೋಗಿ ಬರುವುದಾಗಿ ತಿಳಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ತಿದ್ದುಪಡಿ

12.04.2018ರ ಸಂಚಿಕೆಯಲ್ಲಿ, ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿ ‘ಮತ ಎಣಿಕೆ ತಡೆ ಆದೇಶ ಮುಂದುವರಿಕೆ’ ಎಂಬ ಶೀರ್ಷಿಕೆ ಅಡಿ ಪ್ರಕಟವಾದ ವರದಿಯಲ್ಲಿ ‘ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿರುವ ದುರ್ಗಾಪ್ರಸಾದ್ ಹಾಗೂ ಎಚ್‌.ಸಿ.ಶಿವರಾಮು ಈ ಅರ್ಜಿ ಸಲ್ಲಿಸಿದ್ದಾರೆ’ ಎಂದಿದೆ. ಇದು ತಪ್ಪು ಮಾಹಿತಿ. ಸ್ಪರ್ಧಿಗಳಾದ ದುರ್ಗಾಪ್ರಸಾದ್ ಹಾಗೂ ಎಚ್‌.ಸಿ.ಶಿವರಾಮು ಈ ಅರ್ಜಿ
ಸಲ್ಲಿಸಿದ್ದಾರೆ ಎಂದಾಗಬೇಕಿತ್ತು. ಮತ ಎಣಿಕೆ ಇನ್ನೂ ನಡೆದಿಲ್ಲ.

ಬೆಂಗಳೂರು: ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣವನ್ನು ಹೈಕೋರ್ಟ್‌ ವಿಚಾರಣೆಗೆ ಅಂಗೀಕರಿಸಿರುವುದರಿಂದ ಶಿವಮೊಗ್ಗ ವಕೀಲ ವಿನೋದ್‌ ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ ಮತ್ತೊಂದು ದೂರು ನೀಡಿದ್ದಾರೆ.ದೂರಿನ ಜೊತೆ ಪೂರಕ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈಶ್ವರಪ್ಪನವರ ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿನ ವಹಿವಾಟು ಕುರಿತು ಸಮಗ್ರ ತನಿಖೆ ನಡೆಸುವಂತೆ ಇ.ಡಿ ಅಧಿಕಾರಿಗಳಿಗೆ ವಿನೋದ್‌ ಮನವಿ ಮಾಡಿದ್ದಾರೆ. ದೂರಿನ ಮೇಲೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT