ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲಿನ ದೌರ್ಜನ್ಯ ತಡೆಯಿರಿ

ಅಂಗನವಾಡಿ ಮೇಲ್ವಿಚಾರಕರ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ರಂದೀಪ್
Last Updated 21 ಏಪ್ರಿಲ್ 2018, 8:41 IST
ಅಕ್ಷರ ಗಾತ್ರ

ಹಾಸನ : ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಸಮಗ್ರ ಮಕ್ಕಳ ಘಟಕದ ಆಶ್ರಯದಲ್ಲಿ ಅಂಗನವಾಡಿ ಹಾಗೂ ಸಾಂತ್ವನ ಕೇಂದ್ರ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾನೂನಿನಿಂದ ಎಲ್ಲವನ್ನೂ ನಿಯಂತ್ರಿಸುವುದು ಕಷ್ಟ. ಇದಕ್ಕೆ ಸಾರ್ವಜನಿಕರು, ಸಂಘ, ಸಂಸ್ಥೆಗಳ ಸಹಕಾರ ಅಗತ್ಯ. ದೌರ್ಜನ್ಯ ಪ್ರಕರಣಗಳು ನಡೆಯುವ ವೇಳೆ ಅಥವಾ ನಡೆಯುವ ಸಂಭವದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪೊಕ್ಸೊ ಕಾಯ್ದೆಯಡಿ ಕಠಿಣ ಶಿಕ್ಷೆ ಇದೆ. ಆದರೆ, ತಪ್ಪಿತಸ್ಥರನ್ನು ಗುರುತಿಸುವ, ಬಂಧಿಸುವ, ಶಿಕ್ಷಿಸುವ ಕೆಲಸವಾಗಬೇಕು ಎಂದು ಹೇಳಿದರು.

ದೌರ್ಜನ್ಯಕ್ಕೊಳಗಾದ ಮಕ್ಕ ಳಿಗೆ ವಿಶೇಷ ರಕ್ಷಣೆ ಅಗತ್ಯ. ಅವರಿಗೆ ಪುನರ್ವಸತಿ ಕಲ್ಪಿಸುವ ಸಂದರ್ಭ ದಲ್ಲಿ ಉತ್ತಮ ವಾತಾವರಣ ಸೃಷ್ಟಿಸಿ ಕೊಡಬೇಕಿದೆ. ಬಾಲಕ, ಬಾಲಕಿಯರ ರಕ್ಷಣಾ ಘಟಕಗಳಿಗೆ ಮೂಲ ಸೌಲಭ್ಯಗಳ ಬಗ್ಗೆ ನಿಗಾ ವಹಿಸಬೇಕು. ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಟದ ತಡೆಗೆ ಎಲ್ಲರ ಕಡೆಯಿಂದಲೂ ಪ್ರಾಮಾಣಿಕ ಯತ್ನ ಆಗಬೇಕು ಎಂದು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ, ಶಿಕ್ಷಣದ ಮಟ್ಟ ಎಷ್ಟೇ ಹೆಚ್ಚಿದರೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ಪ್ರಸ್ತುತ ಮಕ್ಕಳು ಪರಿಸ್ಥಿತಿ ಅರ್ಥೈಸಿಕೊಂಡು ಜಾಗೃತರಾದಲ್ಲಿ ಅನೇಕ ದೌರ್ಜನ್ಯ ತಡೆಯಬಹುದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರಾಧಾ, ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಸಿ. ದೇವರಾಜೇಗೌಡ ಇದ್ದರು. ಶೇ 100 ಮತದಾನವಾಗಲಿ: ಕಾರ್ಯ ಕ್ರಮದಲ್ಲಿ ಸ್ವೀಪ್‌ ಸಮಿತಿ ಅಧ್ಯಕ್ಷೆ ಕೆ.ಎಂ.ಜಾನಕಿ ಮತದಾನದ ಕುರಿತು ಮಾಹಿತಿ ನೀಡಿದರು.

ಮೇ 12ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಜಿಲ್ಲೆ ಯಲ್ಲಿ ಶೇಕಡಾ 100ರಷ್ಟು ಮತದಾನ ವಾಗಬೇಕು. ಮತದಾನದ ದಿನಾಂಕದ ವರೆಗೂ ನೈತಿಕ ಮತದಾನ, ಕಡ್ಡಾಯ ಮತದಾನ, ವಿದ್ಯುನ್ಮಾನ ಮತಯಂತ್ರಗಳ ಬಳಕೆ, ನೋಟಾ ಹಾಗೂ ವಿ.ವಿ.ಪ್ಯಾಟ್‌ಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಶೇ 100 ಮತದಾನವಾಗಲಿ
ಕಾರ್ಯಕ್ರಮದಲ್ಲಿ ಸ್ವೀಪ್‌ ಸಮಿತಿ ಅಧ್ಯಕ್ಷೆ ಕೆ.ಎಂ.ಜಾನಕಿ ಮತದಾನದ ಕುರಿತು ಮಾಹಿತಿ ನೀಡಿದರು. ಮೇ 12ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಜಿಲ್ಲೆಯಲ್ಲಿ ಶೇಕಡಾ 100ರಷ್ಟು ಮತದಾನವಾಗಬೇಕು. ಮತದಾನದ ದಿನಾಂಕದವರೆಗೂ ನೈತಿಕ ಮತದಾನ, ಕಡ್ಡಾಯ ಮತದಾನ, ವಿದ್ಯುನ್ಮಾನ ಮತಯಂತ್ರಗಳ ಬಳಕೆ, ನೋಟಾ ಹಾಗೂ ವಿ.ವಿ.ಪ್ಯಾಟ್‌ಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸುವಂತೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT