ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಪೂಜಾ ಗಾಂಧಿ ಜೆಡಿಎಸ್‌ ಸೇರ್ಪಡೆ

Last Updated 21 ಏಪ್ರಿಲ್ 2018, 11:33 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರನಟಿ ಪೂಜಾ ಗಾಂಧಿ ಅವರು ಶನಿವಾರ ಜೆಡಿಎಸ್‌ಗೆ ಮರು ಸೇರ್ಪಡೆಗೊಂಡರು.

ಪಕ್ಷದ ಕಚೇರಿಯಲ್ಲಿ ಪೂಜಾ ಗಾಂಧಿ ವರಿಷ್ಠರ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದರು.

2012ರಲ್ಲಿ ಜೆಡಿಎಸ್ ಸೇರಿದ್ದ ಪೂಜಾ ಗಾಂಧಿ ಅದೇ ವರ್ಷ ಈ ಪಕ್ಷವನ್ನು ತೊರೆದಿದ್ದರು. ಬಳಿಕ, ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರಿದ್ದ ಪೂಜಾ, ಅದನ್ನೂ ತೊರೆದು ಬಿಎಸ್‌ಆರ್ ಕಾಂಗ್ರೆಸ್ ಸೇರಿದ್ದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ರಾಯಚೂರು ನಗರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಪೂಜಾ ಗಾಂಧಿ ಬಿರು ಬಿಸಿಲಿನಲ್ಲೂ ಪ್ರಚಾರ ನಡೆಸಿದ್ದರು. 

ಈ ವೇಳೆ ಪೂಜಾ ಗಾಂಧಿ, ಅನುಮತಿಯಿಲ್ಲದೆ ವಾಹನ ಬಳಸಿದ್ದಾರೆ ಎಂದು ಸದರ್‌ ಬಜಾರ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT