ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಸಂಸ್ಥಾನ ಮಠ: ಧಾರ್ಮಿಕ ಕಾರ್ಯಕ್ರಮ ಇಂದಿನಿಂದ

ಬೃಹತ್ ಮೆರವಣಿಗೆ, ಏ.22ರಂದು ಯಾಗ ಕಂಕಣಧಾರಣೆ, ಏ 23ರಂದು ಹೋಮಹವನ
Last Updated 21 ಏಪ್ರಿಲ್ 2018, 12:23 IST
ಅಕ್ಷರ ಗಾತ್ರ

ಯಾದಗಿರಿ:ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ಧಸಂಸ್ಥಾನ ಮಠದಲ್ಲಿ ಏ.21ರಿಂದ ಏ.27ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

151ಕೆ.ಜಿ ತೂಕದ ಬೆಳ್ಳಿಯ ಶ್ರೀ ವಿಶ್ವಾರಾಧ್ಯರ ಮೂರ್ತಿಯನ್ನು ಒಳಗೊಂಡ ಮಹಾಮಂಟಪದ ಮೆರವಣಿಗೆ ಏ. 21ರಂದು ಬೆಳಿಗ್ಗೆ 9ಕ್ಕೆ ನಗರದ ಹಳೇಬಸ್ ನಿಲ್ದಾಣದಿಂದ ಪ್ರಾರಂಭಗೊಳ್ಳಲಿದೆ. ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ವಿಶ್ವಾರಾಧ್ಯರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಹಲಗೆ, ಬಾಜಾಭಜಂತ್ರಿ, ಡೊಳ್ಳು, ವೀರಗಾಸೆ ಸೇರಿದಂತೆ ಅನೇಕ ಪ್ರಕಾರದ ಜನಪದ ಕಲಾತಂಡಗಳೊಂದಿಗೆ ಅಸಂಖ್ಯಾತ ಭಕ್ತರ ಮಧ್ಯೆ ಮೆರವಣಿಗೆ ಸುಭಾಷ್ ಚೌಕ್, ಶಾಸ್ತ್ರಿಚೌಕ್, ಹೊಸ ಬಸ್ ನಿಲ್ದಾಣ, ಗಂಜ್ ಮಾರ್ಗವಾಗಿ ಮೈಲಾಪುರ ಬೇಸ್, ಚಕ್ರಕಟ್ಟಾ, ಗಾಂಧಿಚೌಕ್, ವೀರಶೈವ ಕಲ್ಯಾಣ ಮಂಟಪ, ನಗರಸಭೆ, ಅಂಬೇಡ್ಕರ್ ಚೌಕ್, ಕೋರ್ಟ್, ಬಸವೇಶ್ವರ ಕಲ್ಯಾಣ ಮಂಟಪ, ಕಾಡ್ಲೂರ ಪೆಟ್ರೋಲ್ ಪಂಪ್, ಸರ್ಕಾರಿ ಪದವಿ ಕಾಲೇಜು ಮಾರ್ಗವಾಗಿ ಅಬ್ಬೆತುಮಕೂರು ತಲುಪಲಿದೆ.

ಏ.22ರಂದು ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಅಬ್ಬೆತುಮಕೂರಿನ ಭೀಮಾನದಿಯಲ್ಲಿ ಗಂಗಾಸ್ನಾನ ಮಾಡಿದ ನಂತರ ಯಾಗ ಕಂಕಣಧಾರಣೆ ಕಾರ್ಯಕ್ರಮ ನಡೆಯಲಿದೆ. ಏ. 23ರಿಂದ ಏ.27ರವರೆಗೆ ಐದು ದಿನಗಳ ಕಾಲ ಹೋಮ, ಹವನ, ಇತ್ಯಾದಿ ಕಾರ್ಯ ಕ್ರಮಗಳು ಜರುಗಲಿವೆ. ಶ್ರೀಶೈಲ ಮತ್ತು ತಿರುಪತಿ ಯಿಂದ ಬಂದಿರುವ 51ಜನ ಋತ್ವಿಜರು ಹೋಮ ಸೇರಿದಂತೆ ವಿವಿಧ
ಪೂಜಾ ಕಾರ್ಯಗಳನ್ನು ನಡೆಸಿಕೊಡಲಿದ್ದಾರೆ.

ಏ.27ರಂದು ಬೃಹತ್ ಪ್ರಮಾಣದ ಧಾರ್ಮಿಕ ಸಮಾವೇಶ ಜರುಗಲಿದ್ದು, ಕಾಶೀ ಜಗದ್ಗುರುಗಳನ್ನೊಳಗೊಂಡಂತೆ ಪಂಚಪೀಠಾಧಿಶರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಮಠದಲ್ಲಿ ನಿರಂತರವಾಗಿ ಬರುವ ಲಕ್ಷಾಂತರ ಭಕ್ತರಿಗೆ ಕರಿಗಡಬು, ತುಪ್ಪ, ಅನ್ನಸಾರು, ಮುಂತಾದ ಖಾದ್ಯಗಳ ದಾಸೋಹ ವ್ಯವಸ್ಥೆಯನ್ನು ವಿಶೇಷವಾಗಿ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT