ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್‌ನಲ್ಲಿ ಮಹಿಳೆ ಪ್ರಾಧಿಕಾರ ಗರಂ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ರಿಯಾದ್‌: ಇಲ್ಲಿಯ ಜಿಮ್‌ ಒಂದರಲ್ಲಿ ‘ಮಹಿಳೆಯೊಬ್ಬರು ತಲೆಗವಸು ಧರಿಸದೇ, ಬಿಗಿ ಉಡುಪು ಧರಿಸಿ, ಪಂಚಿಂಗ್‌ ಬ್ಯಾಗ್‌ಗೆ ಗುದ್ದುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೊ ನೋಡಿದ ಸೌದಿ ಅರೇಬಿಯಾದ ಕ್ರೀಡಾಪ್ರಾಧಿಕಾರ ಗರಂ ಆಗಿದ್ದು ಫಿಟ್‌ನೆಸ್‌ ಕೇಂದ್ರವನ್ನೇ ಮುಚ್ಚಿಸಿದೆ!

‘ಇಂತಹ ನಡೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಟ್ವೀಟ್‌ ಮಾಡಿರುವ ಪ್ರಾಧಿಕಾರದ ಮುಖ್ಯಸ್ಥ ಟುರ್ಕಿ ಶೇಖ್‌, ಕೇಂದ್ರದ ಪರವಾನಗಿಯನ್ನು ತಕ್ಷಣಕ್ಕೆ ಹಿಂದಕ್ಕೆ ಪಡೆಯುವಂತೆ ಸೂಚಿಸಿದ್ದಾರೆ.

ಇಲ್ಲಿಯ ಕಾನೂನಿನ ಪ್ರಕಾರ, ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ತಲೆಗವಸು, ಬುರ್ಖಾ ಧರಿಸಿರಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT