ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

43 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಆರ್‌.ಸೌಮ್ಯಾ, ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾರೆಡ್ಡಿ ಸೇರಿದಂತೆ ಒಟ್ಟು 43 ಮಂದಿ ಶನಿವಾರ ನಾಮಪತ್ರ ಸಲ್ಲಿಸಿದರು.

ಶಿವಾಜಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆಮ್‌ ಆದ್ಮಿ ಪಕ್ಷದ ಆಯೂಬ್‌ ಖಾನ್‌, ಶಾಂತಿನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಂಥೋನಿ ರಾಜ್‌, ರಾಜಾಜಿನಗರ ಕ್ಷೇತ್ರದಿಂದ ರಾಷ್ಟ್ರೀಯ ಮಾನವ ವಿಕಾಸ ಪಕ್ಷದ ಇ.ಆನಂದ್‌, ಜನ ಸಾಮಾನ್ಯರ ಪಾರ್ಟಿಯ ಎಸ್‌.ಪ್ರಸಾದ್‌, ಸ್ವತಂತ್ರ ಅಭ್ಯರ್ಥಿಯಾಗಿ ವಿ.ಎನ್‌.ಶಾಲಿನಿ ನಾಮಪತ್ರ ಸಲ್ಲಿಸಿದರು.

ಚಿಕ್ಕಪೇಟೆ ಕ್ಷೇತ್ರದಿಂದ ಜೆಡಿಎಸ್‌ನ ಡಾ.ಡಿ.ಹೇಮಚಂದ್ರ ಸಾಗರ್‌, ಸ್ವತಂತ್ರ ಅಭ್ಯರ್ಥಿಗಳಾಗಿ ರಾಕೇಶ್‌ ಕುಮಾರ್‌ ಶುಕ್ಲ, ಚಾಂದ್‌ ಪಾಷ ಹಾಗೂ ಸಿ.ನಂಜುಂಡಪ್ಪ, ಕೆ.ಆರ್‌.ಪುರದಿಂದ ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಲಕ್ಷ್ಮಿರಾಮಯ್ಯ ಶೆಟ್ಟಿ, ಆಮ್‌ ಆದ್ಮಿ ಪಕ್ಷದ ಪಿ.ವಿ.ಎನ್‌.ಕೆ.ಲಿಂಗರಾಜ್‌ ಅರಸ್‌, ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಚ್‌.ಎಸ್‌.ಮಂಜುನಾಥ, ಪಕ್ಷೇತರ ಅಭ್ಯರ್ಥಿಯಾಗಿ ಮನೋಹರ ಎಚ್‌.ಅಯ್ಯಣ್ಣವರ, ಹೆಬ್ಬಾಳ ಕ್ಷೇತ್ರದಿಂದ ಆಲ್‌ ಇಂಡಿಯಾ ಹಿಂದೂಸ್ತಾನ್‌ ಕಾಂಗ್ರೆಸ್‌ ಪಾರ್ಟಿಯ ಎಸ್‌.ಅಜಯ್‌ ಕುಮಾರ್‌ ಗೌಡ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಉಮಾದೇವಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಪುಲಕೇಶಿನಗರ ಕ್ಷೇತ್ರದಿಂದ ಗರೀಬ್‌ ಆದ್ಮಿ ಪಾರ್ಟಿಯ ಡಿ.ಜಯರಾಮ್‌, ಸರ್ವಜ್ಞನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮೋದಿ ಸೈಫುಲ್ಲಾ, ಸಿ.ವಿ.ರಾಮನ್‌ನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಐ.ವೆಂಕಟೇಶ್‌, ಗೋವಿಂದರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಿಯಕೃಷ್ಣ, ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾದ ಡಾ.ಕೆ.ಎಸ್‌.ಗಂಗಾಧರ್‌, ಬಸವನಗುಡಿಯಿಂದ ಪಕ್ಷೇತರ ಅಭ್ಯರ್ಥಿ ಎಂ.ಶರಣು, ಪದ್ಮನಾಭನಗರದಿಂದ ಪಕ್ಷೇತರ ಅಭ್ಯರ್ಥಿ ಮೀರಾ ರಾಘವೇಂದ್ರ, ಬಿ.ಟಿ.ಎಂ ಬಡಾವಣೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರದೀಪ್‌ ಮೆಂಡೋನ್ಸ ನಾಮಪತ್ರ ಸಲ್ಲಿಸಿದ್ದಾರೆ.

ಜಯನಗರದಿಂದ ಕಾಂಗ್ರೆಸ್‌ನ ಆರ್‌.ಸೌಮ್ಯಾ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಎನ್‌.ಎಸ್‌.ಬೋಜಣ್ಣ, ಸ್ವತಂತ್ರ ಅಭ್ಯರ್ಥಿಗಳಾಗಿ ರವಿಕೃಷ್ಣಾರೆಡ್ಡಿ, ಮೊಹಮ್ಮದ್‌ ಇಬ್ರಾಹಿಂ, ಯಲಹಂಕ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಗಳಾಗಿ ಡಾ.ಕೆ.ಎಸ್‌.ಸ್ವಾಮಿ, ಎನ್‌.ರಾಮಕೃಷ್ಣಪ್ಪ ಹಾಗೂ ಜಿ.ಮಲ್ಲಿಕಾ, ಬ್ಯಾಟರಾಯನಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ರವಿ ಪಡಸಲಗಿ, ಯಶವಂತಪುರ ಕ್ಷೇತ್ರದಿಂದ ರಾಣಿ ಚೆನ್ನಮ್ಮ ಪಕ್ಷದ ಸರಸ್ವತಿ, ಪಕ್ಷೇತರ ಅಭ್ಯರ್ಥಿ ಬೀರೇಶ್‌, ಟಿ.ದಾಸರಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ಎಲ್‌.ಆರ್‌.ತಿಮ್ಮನಂಜಯ್ಯ, ಕನ್ನಡ ಪಕ್ಷದ ಡೊಮಿನಿಕ್‌ ಸಾವಿಯೋ ಜಿ., ಪಕ್ಷೇತರ ಅಭ್ಯರ್ಥಿ ಅಮ್ಜದ್‌, ಮಹದೇವಪುರದಿಂದ ಪಕ್ಷೇತರ ಅಭ್ಯರ್ಥಿ ಜೆ.ಉದಯ್‌ ಕುಮಾರ್‌, ಬೆಂಗಳೂರು ದಕ್ಷಿಣದಿಂದ ಆರಕ್ಷಣ ವಿರೋಧಿ ಪಾರ್ಟಿಯ ಕೆ.ಅಭಿಷೇಕ್‌, ಸ್ವತಂತ್ರ ಅಭ್ಯರ್ಥಿಗಳಾಗಿ ಡಿ.ಸಿ.ರಾಜಾರೆಡ್ಡಿ ಹಾಗೂ ಅನ್ಬು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಅಭ್ಯರ್ಥಿಗಳ ಆಸ್ತಿ ವಿವರ

ಅಭ್ಯರ್ಥಿ; ಎಂ.ಕೃಷ್ಣಪ್ಪ

ಕ್ಷೇತ್ರ: ವಿಜಯನಗರ, ಪಕ್ಷ; ಕಾಂಗ್ರೆಸ್‌

ಕೈಯಲ್ಲಿರುವ ನಗದು;₹37.62 ಲಕ್ಷ

ಪತ್ನಿ ಬಳಿ ಇರುವ ನಗದು;₹3.13 ಲಕ್ಷ

ಚರಾಸ್ತಿ ಮೌಲ್ಯ;₹48.75 ಕೋಟಿ

ಪತ್ನಿ ಚರಾಸ್ತಿ ಮೌಲ್ಯ;₹24.08 ಕೋಟಿ

ಸ್ಥಿರಾಸ್ತಿ ಮೌಲ್ಯ;₹77.41 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ;₹85.92 ಕೋಟಿ

ಸಾಲ;₹28.93 ಕೋಟಿ

ಪತ್ನಿಯ ಸಾಲ;₹37.51 ಕೋಟಿ

ಅಭ್ಯರ್ಥಿ; ವಿ.ನಾರಾಯಣಸ್ವಾಮಿ

ಕ್ಷೇತ್ರ; ಗಾಂಧಿನಗರ, ಪಕ್ಷ: ಜೆಡಿಎಸ್‌

ಕೈಯಲ್ಲಿರುವ ನಗದು;₹1.5 ಲಕ್ಷ

ಪತ್ನಿ ಬಳಿ ಇರುವ ನಗದು;₹1.80 ಲಕ್ಷ

ಚರಾಸ್ತಿ ಮೌಲ್ಯ;₹2.63 ಕೋಟಿ

ಪತ್ನಿ ಚರಾಸ್ತಿ ಮೌಲ್ಯ;₹1.91 ಕೋಟಿ

ಸ್ಥಿರಾಸ್ತಿ ಮೌಲ್ಯ;₹21.93 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ;₹17.37 ಕೋಟಿ

ಸಾಲ;₹1.73 ಕೋಟಿ

ಪತ್ನಿಯ ಸಾಲ;₹6 ಲಕ್ಷ

ಅಭ್ಯರ್ಥಿ; ಕೆ.ವಾಸುದೇವಮೂರ್ತಿ

ಕ್ಷೇತ್ರ/ಪಕ್ಷ;ಶಾಂತಿನಗರ/ಬಿಜೆಪಿ

ವಿದ್ಯಾರ್ಹತೆ;ಎಲ್‌ಎಲ್‌ಬಿ

ಕೈಯಲ್ಲಿರುವ ನಗದು;₹3 ಲಕ್ಷ

ಚರಾಸ್ತಿ ಮೌಲ್ಯ;₹35.45 ಲಕ್ಷ

ಪತ್ನಿ ಚರಾಸ್ತಿ ಮೌಲ್ಯ;₹18 ಲಕ್ಷ

ಸ್ಥಿರಾಸ್ತಿ ಮೌಲ್ಯ;₹26 ಕೋಟಿ

ಸಾಲ;₹7 ಲಕ್ಷ‌

ಅಭ್ಯರ್ಥಿ;ಉದಯ್‌ ಬಿ.ಗರುಡಾಚಾರ್

ಕ್ಷೇತ್ರ: ಚಿಕ್ಕಪೇಟೆ, ಪಕ್ಷ; ಬಿಜೆಪಿ

ವಿದ್ಯಾರ್ಹತೆ;ಬಿಇ

ಆಭರಣದ ಮೌಲ್ಯ;₹4.99 ಕೋಟಿ‌

ಚರಾಸ್ತಿ ಮೌಲ್ಯ;₹105.63 ಕೋಟಿ

ಪತ್ನಿ ಚರಾಸ್ತಿ ಮೌಲ್ಯ;₹29.55 ಕೋಟಿ

ಸ್ಥಿರಾಸ್ತಿ ಮೌಲ್ಯ;₹58.79 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ;₹2.10 ಕೋಟಿ

ಸಾಲ;₹56.64 ಕೋಟಿ

ಪತ್ನಿಯ ಸಾಲ;₹2.63 ಕೋಟಿ

ಅಭ್ಯರ್ಥಿ; ಡಾ.ಡಿ.ಹೇಮಚಂದ್ರ ಸಾಗರ್

ಕ್ಷೇತ್ರ; ಚಿಕ್ಕಪೇಟೆ, ಪಕ್ಷ: ಜೆಡಿಎಸ್

ವಿದ್ಯಾರ್ಹತೆ;ಎಂಬಿಬಿಎಸ್

ಆಭರಣದ ಮೌಲ್ಯ;₹2 ಕೋಟಿ‌

‌ಚರಾಸ್ತಿ;₹19.90 ಕೋಟಿ

ಪತ್ನಿ ಚರಾಸ್ತಿ ಮೌಲ್ಯ;₹16.9 ಕೋಟಿ

ಅವಿಭಕ್ತ ಕುಟುಂಬದ ಆಸ್ತಿ (ಎಚ್‌ಯುಎಫ್‌);₹14.53 ಕೋಟಿ

ಸ್ಥಿರಾಸ್ತಿ;₹43.32 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ;₹10 ಕೋಟಿ

ಎಚ್‌ಯುಎಫ್‌;₹86.77 ಕೋಟಿ

ಅಭ್ಯರ್ಥಿ;ಶರತ್‌ ಕುಮಾರ್‌ ಬಚ್ಚೇಗೌಡ

ಕ್ಷೇತ್ರ: ಹೊಸಕೋಟೆ, ಪಕ್ಷ: ಬಿಜೆಪಿ

ಶಿಕ್ಷಣ;ಮಾಸ್ಟರ್‌ ಆ‍ಫ್‌ ಸೈನ್ಸ್‌(ಅಮೆರಿಕ)

ಕೈಯಲ್ಲಿರುವ ನಗದು;₹10 ಲಕ್ಷ

ಪತ್ನಿ ಬಳಿ ಇರುವ ನಗದು;₹8 ಲಕ್ಷ

ಚರಾಸ್ತಿ ಮೌಲ್ಯ;₹23.11 ಕೋಟಿ

ಪತ್ನಿಯ ಚರಾಸ್ತಿ ಮೌಲ್ಯ;₹9.8 ಕೋಟಿ

ಸ್ಥಿರಾಸ್ತಿ ಮೌಲ್ಯ;₹79.50 ಕೋಟಿ

ಪತ್ನಿಯ ಸ್ಥಿರಾಸ್ತಿ;₹2 ಕೋಟಿ

ಆಭರಣ;450 ಗ್ರಾಂ ಚಿನ್ನ, 3 ಕೆ.ಜಿ ಬೆಳ್ಳಿ

ಪತ್ನಿಯ ಆಭರಣ;950 ಗ್ರಾಂ ಚಿನ್ನ, 5 ಕೆ.ಜಿ ಬೆಳ್ಳಿ

ಸಾಲ;₹1.87 ಕೋಟಿ

ಪತ್ನಿಯ ಸಾಲ;₹28.17 ಲಕ್ಷ

ಅಭ್ಯರ್ಥಿ;ಎಚ್‌.ಎಸ್‌.ಮಂಜುನಾಥ್‌

ಕ್ಷೇತ್ರ: ಮಹಾಲಕ್ಷ್ಮಿ ಬಡಾವಣೆ, ಪಕ್ಷ; ಕಾಂಗ್ರೆಸ್‌

ಕೈಯಲ್ಲಿರುವ ನಗದು;₹16,500

ತಂದೆ ಬಳಿ ಇರುವ ನಗದು;₹9,850

ತಾಯಿ ಬಳಿ ಇರುವ ನಗದು;₹2,800

ಚರಾಸ್ತಿ ಮೌಲ್ಯ;₹10.18 ಲಕ್ಷ

ತಂದೆ ಚರಾಸ್ತಿ ಮೌಲ್ಯ;₹25,894

ತಾಯಿ ಚರಾಸ್ತಿ ಮೌಲ್ಯ;₹3.69 ಲಕ್ಷ

ತಂದೆಯ ಸ್ಥಿರಾಸ್ತಿ ಮೌಲ್ಯ;₹11.25 ಲಕ್ಷ

ಸಾಲ;₹4.82 ಲಕ್ಷ

ಅಭ್ಯರ್ಥಿ;ಆರ್‌.ಸೌಮ್ಯಾ

ಕ್ಷೇತ್ರ; ಜಯನಗರ, ಪಕ್ಷ: ಕಾಂಗ್ರೆಸ್‌

ಕೈಯಲ್ಲಿರುವ ನಗದು;₹10,136

ಚರಾಸ್ತಿ ಮೌಲ್ಯ;₹47.64 ಲಕ್ಷ

ಗಂಡನ ಚರಾಸ್ತಿ ಮೌಲ್ಯ;₹7.24 ಲಕ್ಷ

ಸಾಲ;₹4.6 ಲಕ್ಷ

ಗಂಡನ ಸಾಲ;₹1 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT