ಬಸವಕಲ್ಯಾಣ

ಎಎಪಿ ಅಭ್ಯರ್ಥಿ ದೀಪಕ ನಾಮಪತ್ರ ಸಲ್ಲಿಕೆ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ದೀಪಕ ಮಾಲಗಾರ ಶನಿವಾರ ವಿಧಾನಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದರು.

ಬಸವಕಲ್ಯಾಣ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ದೀಪಕ ಮಾಲಗಾರ ಶನಿವಾರ ವಿಧಾನಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದರು. ಬಸವೇಶ್ವರ ದೇವಸ್ಥಾನದಿಂದ ಮಹಾತ್ಮಗಾಂಧಿ ವೃತ್ತದ ಮೂಲಕ ಡಾ.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಉಪ ವಿಭಾಗಾಧಿಕಾರಿ ಪ್ರೀತಂ ನಸ್ಲಾಪುರೆ ಅವರಿಗೆ ನಾಮಪತ್ರ ಸಲ್ಲಿಸಿದರು. ಅನೇಕ ಯುವಕರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

ಕೈಯಲ್ಲಿ ಪಕ್ಷದ ಚಿಹ್ನೆಯಾದ ಪೊರಕೆ ಹಿಡಿದಿದ್ದರು. ತಲೆಮೇಲೆ ಟೊಪ್ಪಿಗೆ ಹಾಕಿಕೊಂಡಿದ್ದರು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಪಕ್ಷದ ಪರ ಜೈಕಾರ ಮಾಡಿದರು. ಜೀತೆಗಾ ಭಾಯಿ ಜೀತೆಗಾ ಎಎಪಿ ಜೀತೇಗಾ ಎಂದು ಘೋಷಣೆಗಳನ್ನು ಕೂಗಲಾಯಿತು. ಅಲ್ಲಲ್ಲಿ ಅವರ ಬೆಂಬಲಿಗರು ಮತ್ತು ಹಿತೈಷಿಗಳು ಅಭ್ಯರ್ಥಿ ದೀಪಕ ಮಾಲಗಾರ ಅವರಿಗೆ ಪುಷ್ಪಮಾಲೆ ಹಾಕಿದರು.

ಪಕ್ಷದ ರಾಜ್ಯ ಘಟಕದ ಉಪ ಸಂಚಾಲಕ ವಿಜಯ ಶರ್ಮಾ, ಕಾರ್ಯದರ್ಶಿ ಅಲೋಕಕುಮಾರ, ಸಂತೋಷ ಮುಜನಾಯಕ್, ಬಾಬುರಾವ್ ಘೋರವಾಡೆ, ಮಹಾದೇವ ಕಾಂಬಳೆ, ಪ್ರಸಾದ ಪಾಠಕ, ವಿಜಯ ಹೊಸಮನಿ, ಅರವಿಂದ ಧವಳೆ, ವೀರೇಶ ಮಡಿವಾಳ. ಶೋಯೇಬ್ ದೇಶಮುಖ, ಕಾಸಿನಾಥ, ಖೈರುನ್ನೀಸಾ ಬೇಗ, ಅಪ್ರೋಜ್ ಬೆಗಂ ಮುಂತಾದವರು ಪಾಲ್ಗೊಂಡಿದ್ದರು.

ಆಸ್ತಿ ವಿವರ: ದೀಪಕ ಮಾಲಗಾರ ಅವರು ತನ್ನ ಹಾಗೂ ಪತ್ನಿಯ ಹೆಸರಲ್ಲಿನ ಒಟ್ಟು 51.30 ಲಕ್ಷ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿರುವ ಬಗ್ಗೆ ನಾಮಪತ್ರ ಸಲ್ಲಿಸುವ ವೇಳೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ದೀಪಕ ಅವರ ಹತ್ತಿರ ₹ 25 ಸಾವಿರ ನಗದು, ₹ 81 ಸಾವಿರದ 30 ಗ್ರಾಂ ಚಿನ್ನವಿದೆ. ಪತ್ನಿ ಶಾರದಾ ಹೆಸರಲ್ಲಿ ₹ 4.50 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ, ಪುಣೆಯಲ್ಲಿ ₹ 45 ಲಕ್ಷ ಮೌಲ್ಯದ ಅಪಾರ್ಟ್‌ಮೆಂಟ್ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ.

 

Comments
ಈ ವಿಭಾಗದಿಂದ ಇನ್ನಷ್ಟು
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

ಚಿಟಗುಪ್ಪ
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

26 May, 2018

ಬಸವಕಲ್ಯಾಣ
ಹುಲಸೂರ ರಸ್ತೆ ಸುಧಾರಣೆಗೆ ಆಗ್ರಹ

ಬಸವಕಲ್ಯಾಣ– ಹುಲಸೂರ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಶುಕ್ರವಾರ ಇಲ್ಲಿನ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಾಂತಗೌಡ...

26 May, 2018

ಬೀದರ್
ದೇಶದಲ್ಲಿ ಏಳು ಸಾವಿರ ಸೊಳ್ಳೆ ಪ್ರಭೇದ 

‘ವಿಶ್ವದಲ್ಲಿ ಹನ್ನೊಂದು ಸಾವಿರ ಸೊಳ್ಳೆ ಪ್ರಭೇದಗಳಿವೆ. ಭಾರತದಲ್ಲಿ ಏಳು ಸಾವಿರ ಪ್ರಭೇದಗಳು ಕಾಣಸಿಗುತ್ತವೆ. ಅರಣ್ಯ ಪ್ರದೇಶದಲ್ಲಿರುವ ಸೊಳ್ಳೆಗಳಿಗಿಂತ ಜನವಸತಿ ಪ್ರದೇಶ ದಲ್ಲಿರುವ ಸೊಳ್ಳೆಗಳು ಇತ್ತೀಚಿನ...

26 May, 2018
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

ಬಸವಕಲ್ಯಾಣ
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

26 May, 2018
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

ಬಸವಕಲ್ಯಾಣ
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

25 May, 2018