ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಬ್ಸ್‌ ಪಟ್ಟಿಯಲ್ಲಿ ಪಿ.ವಿ.ಸಿಂಧು

Last Updated 22 ಆಗಸ್ಟ್ 2018, 19:08 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆಪಿ.ವಿ. ಸಿಂಧು ಇದೇ ಮೊದಲ ಬಾರಿಗೆ ಫೋಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಮಂಗಳವಾರ ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ, ಹೆಚ್ಚು ಆದಾಯ ಪಡೆಯುತ್ತಿರುವ ಆಟಗಾರ್ತಿಯರ ಪಟ್ಟಿಯಲ್ಲಿ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ಸತತ ಮೂರನೇ ಬಾರಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಪಟ್ಟಿಯಲ್ಲಿ ಬಹುತೇಕ ಟೆನಿಸ್‌ ಕ್ರೀಡಾಪಟುಗಳೇ ಇದ್ದು, ಅಗ್ರ ಹತ್ತು ಆಟಗಾರ್ತಿಯರಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಏಳನೇ ಸ್ಥಾನ ಗಳಿಸಿರುವುದು ವಿಶೇಷ. ಇನ್ನು ರೇಸ್ ಕಾರ್ ಡ್ರೈವರ್ ಡೆನಿಕಾ ಪ್ಯಾಟ್ರಿಕ್‌ 9ನೇ ಸ್ಥಾನದಲ್ಲಿದ್ದಾರೆ.

23 ವರ್ಷದ ಸಿಂಧು ಅವರು ಸುಮಾರು ₹59 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಬ್ಡಿಡ್ಜ್‌ ಸ್ಟೋನ್, ಗ್ಯಾಟೊರೇಡ್‌, ನೊಕಿಯಾ, ಪ್ಯಾನಾಸೋನಿಕ್‌ ರೆಕಿಟ್‌ ಬೆನ್ಸಿಸ್ಕರ್‌ನಂತಹ ಆರಕ್ಕೂ ಹೆಚ್ಚು ಸಂಸ್ಥೆಗಳ ಪ್ರಚಾರ ರಾಯಭಾರಿಯಾಗಿ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಫೋಬ್ಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT