ಬಿಜೆಪಿ ಟಿಕೆಟ್ ವಂಚಿತ ಎನ್. ಕೊಟ್ರೇಶ್ ಅಸಮಾಧಾನ l ಟಿಕೆಟ್‌ ನೀಡದಿದ್ದಕ್ಕೆ ಬೆಂಬಲಿಗರ ಆಕ್ರೋಶ

ಹರಪನಹಳ್ಳಿ ಜನರು ಪ್ರಜ್ಞಾವಂತರು

‘ನಾನು ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ. ಸೇವೆ ಮಾಡುವೆ. ಆದರೆ, ಕರುಣಾಕರ ರೆಡ್ಡಿ ಶಾಸಕರಾಗಿ, ಸಚಿವರಾಗಿ ಕೋಟ್ಯಂತರ ಹಣ ಕೊಳ್ಳೆ ಹೊಡೆದಿದ್ದಾರೆ’ ಎಂದು ಬಿಜೆಪಿ ಟಿಕೆಟ್ ವಂಚಿತ ಎನ್. ಕೊಟ್ರೇಶ್ ಆರೋಪಿಸಿದರು.

ಹರಪನಹಳ್ಳಿ: ‘ನಾನು ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ. ಸೇವೆ ಮಾಡುವೆ. ಆದರೆ, ಕರುಣಾಕರ ರೆಡ್ಡಿ ಶಾಸಕರಾಗಿ, ಸಚಿವರಾಗಿ ಕೋಟ್ಯಂತರ ಹಣ ಕೊಳ್ಳೆ ಹೊಡೆದಿದ್ದಾರೆ’ ಎಂದು ಬಿಜೆಪಿ ಟಿಕೆಟ್ ವಂಚಿತ ಎನ್. ಕೊಟ್ರೇಶ್ ಆರೋಪಿಸಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ ಶನಿವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರವನ್ನು ವಲಸಿಗರಿಗೆ ಬಿಟ್ಟು ಕೊಡದೇ ತಾಲ್ಲೂಕಿಗೆ ಆಗಿರುವ ಅನ್ಯಾಯವನ್ನು ಸರಿಮಾಡಬೇಕು. ಕ್ಷೇತ್ರದಲ್ಲಿ ಹಣ, ಹೆಂಡ ಹಂಚಿ ಅಧಿಕಾರ ಹಿಡಿಯಬಹುದು ಎನ್ನುವವರಿಗೆ ಪಾಠ ಕಲಿಸಬೇಕು. ಹರಪನಹಳ್ಳಿ ಜನ ಪ್ರಜ್ಞಾವಂತರು ಎಂಬುದನ್ನು ಸಾಬೀತು ಮಾಡಬೇಕು’ ಎಂದರು.

‘ಸ್ಥಳೀಯನಾಗಿರುವ ನನಗೆ ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗೊತ್ತಿದೆ. ನನಗೆ ಯಾವುದೇ ಜಾತಿ, ಮತ ಗೊತ್ತಿಲ್ಲ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ಸ್ಥಳೀಯ ಚುನಾವಣೆಗಳಲ್ಲಿ ಎಲ್ಲಾ ವರ್ಗದವರ ಗೆಲುವಿಗೆ ಶ್ರಮಿಸಿದ್ದೇನೆ. ಕರುಣಾಕರರೆಡ್ಡಿ ಬಳ್ಳಾರಿಗೆ ಹೋದರೂ ಸಿಗಲ್ಲ. ಸ್ಥಳೀಯನಾದ ನನಗೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ಹಿರಿಯ ಮುಖಂಡ ಪಿ.ಮಹಾಬಲೇಶ್ವರಗೌಡ, ‘ರಾಜಕಾರಣ ದಲ್ಲಿ ಸೇವಾ ಮನೋಭಾವ ಕಾಣೆಯಾಗಿದೆ. ಬಂಡವಾಳಶಾಹಿಗಳ ಕೈಗೆ ಅಧಿಕಾರ ಹೋಗುತ್ತಿದೆ. ಸ್ಥಳೀಯರು ಬಲಿಷ್ಠರಾಗದಿರುವುದರಿಂದ ವಲಸಿಗರು ಬಂದು ಕ್ಷೇತ್ರವನ್ನಾಳುತ್ತಿದ್ದಾರೆ. ಟಿಕೆಟ್ ತಪ್ಪಿರುವುದರಿಂದ ಯಾರನ್ನು ಟೀಕಿಸದೇ ಪ್ರಬುದ್ಧರಾಗಿ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಹಣದ ಜೊತೆಗೆ ಸುಳ್ಳಿನ ಸರಮಾಲೆ, ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಹೊರಗಿನವರಿಗೆ ಪಾಠ ಕಲಿಸಬೇಕು. ಸಮಿತಿ ರಚಿಸಿಕೊಂಡು ಮುಂದಿನ ನಡೆ ನಿರ್ಧರಿಸಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಉತ್ತಂಗಿ ಮಂಜುನಾಥ್, ‘ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಹರಪನಹಳ್ಳಿ ಮಾರ್ಪಾಡು ಹೊಂದಿದಾಗಿನಿಂದಲೂ ವಲಸಿಗರ ಉಪಟಳ ಹೆಚ್ಚಾಗಿದೆ. ಸ್ಥಳೀಯರು ಕಡಿಮೆಯಿಲ್ಲ ಎಂಬುದನ್ನು ತೋರಿಸಬೇಕಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಡಿ. ಸಿದ್ದಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಗಣೇಶ್, ಮುಖಂಡರಾದ ಮೈದೂರು ರಾಮಪ್ಪ, ಪಾಟೀಲ್ ನಾಗನಗೌಡ, ನೇಮ್ಯನಾಯ್ಕ, ಎನ್. ಭೀಮಪ್ಪ, ಗುಂಡಗತ್ತಿ ಕೊಟ್ರಪ್ಪ, ವಕೀಲ ಜಗದಪ್ಪ, ಶಾಂತಕುಮಾರಿ, ಕೃಷ್ಣೇಗೌಡ, ಕಂಚಿಕೇರಿ ಕೆಂಚಪ್ಪ, ಪರಶುರಾಮಪ್ಪ, ಪರುಶುರಾಮ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ವೆಂಕಟೇಶರೆಡ್ಡಿ, ನಾಗರಾಜ ಪಾಟೀಲ್, ಎಚ್.ಎಂ. ಜಗದೀಶ್, ತೆಲಿಗಿ ಮಂಜುನಾಥ್, ಓಂಕಾರಗೌಡ ಅವರೂ ಇದ್ದರು.

ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಕರುಣಾಕರ ರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಮುಖಂಡ ಅರಸೀಕೆರೆ ಎನ್. ಕೊಟ್ರೇಶ್ ಅವರ ಬೆಂಬಲಿಗರು ಶನಿವಾರ ಪಟ್ಟಣದಲ್ಲಿ ವಿವಿಧೆಡೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕಾಶಿಸಂಗಮೇಶ್ವರ ಬಡಾವಣೆಯಲ್ಲಿರುವ ಕೊಟ್ರೇಶ್ ಮನೆ ಬಳಿ ಬೆಳಿಗ್ಗೆ 11 ಗಂಟೆಗೆ ಜಮಾಯಿಸಿದ ಕಾರ್ಯಕರ್ತರು ಹಡಗಲಿ ರಸ್ತೆ ಮೂಲಕ ಐಬಿ ವೃತ್ತಕ್ಕೆ ಬಂದು ಪ್ರತಿಭಟನೆ ನಡೆಸಿದರು. ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು, ಜನಾರ್ದನ ರೆಡ್ಡಿ ವಿರುದ್ದ ಘೋಷಣೆ ಕೂಗಿದರು.

 

Comments
ಈ ವಿಭಾಗದಿಂದ ಇನ್ನಷ್ಟು
ಶ್ರೀಗಳಿಗಿಂತ ಕುಮಾರಸ್ವಾಮಿ ದೊಡ್ಡವರಲ್ಲ

ಹರಿಹರ
ಶ್ರೀಗಳಿಗಿಂತ ಕುಮಾರಸ್ವಾಮಿ ದೊಡ್ಡವರಲ್ಲ

26 May, 2018

ದಾವಣಗೆರೆ
ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರ ಒದಗಿಸಿ

ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳನ್ನು ಸಕಾಲದಲ್ಲಿ ಪೂರೈಸಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ...

26 May, 2018
ಕುಮಾರಸ್ವಾಮಿ ವಿರುದ್ಧ ಭಕ್ತ ಮಂಡಳಿ ಆಕ್ರೋಶ

ದಾವಣಗೆರೆ
ಕುಮಾರಸ್ವಾಮಿ ವಿರುದ್ಧ ಭಕ್ತ ಮಂಡಳಿ ಆಕ್ರೋಶ

25 May, 2018

ದಾವಣಗೆರೆ
ಮತ್ತೆ ತಪ್ಪು ಮಾಡಲ್ಲ, ಈಗ ಕೈಹಿಡಿಯಿರಿ

‘ಮಧ್ಯದಲ್ಲೇ ನಿಮ್ಮನ್ನೆಲ್ಲ ಬಿಟ್ಟು ವಿಧಾನಸಭೆಗೆ ಹೋದೆ; ಈಗ ತಪ್ಪಿನ ಅರಿವು ಆಗಿದೆ. ಎರಡು ವರ್ಷ ನಾನು ಪಟ್ಟ ಯಾತನೆ ಯಾರಿಗೂ ಗೊತ್ತಿಲ್ಲ. ನಾನು ಎಂದಿಗೂ...

25 May, 2018
ಜಿಲ್ಲೆಯ ವಿವಿಧೆಡೆ ಗಾಳಿ ಮಳೆಗೆ ಅಪಾರ ನಷ್ಟ

ಉಚ್ಚಂಗಿದುರ್ಗ
ಜಿಲ್ಲೆಯ ವಿವಿಧೆಡೆ ಗಾಳಿ ಮಳೆಗೆ ಅಪಾರ ನಷ್ಟ

25 May, 2018