ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ರಿಲೇ ತಂಡದ ರಾಷ್ಟ್ರೀಯ ದಾಖಲೆ

Last Updated 22 ಆಗಸ್ಟ್ 2018, 20:13 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಈಜುಪಟುಗಳು ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಬುಧವಾರ ನಿರಾಸೆ ಅನುಭವಿಸಿದರು. ಆದರೆ 4X100 ಮೀಟರ್ಸ್‌ ರಿಲೇಯಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಬೆಳಗಿದರು. ಕ್ರೀಡಾಕೂಟದಲ್ಲಿ ಭಾರತದ ರಿಲೇ ತಂಡ ಒಟ್ಟಾರೆ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇಲ್ಲಿನ ಜಿಬಿಕೆ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಆ್ಯರನ್‌ ಡಿ ಸೋಜಾ, ಅನ್ಶುಲ್‌ ಕೊಠಾರಿ, ಸಾಜನ್‌ ಪ್ರಕಾಶ್‌ ಮತ್ತು ವೀರ್‌ಧವಳ್‌ ಖಾಡೆ ಅವರನ್ನು ಒಳಗೊಂಡ ರಿಲೇ ತಂಡ 3:25.17 ನಿಮಿಷಗಳಲ್ಲಿ ಗುರಿ ಮುಟ್ಟಿತು.

ಈ ಮೂಲಕ 2009ರ ದಾಖಲೆಯನ್ನು (3:25.35 ನಿಮಿಷ) ಅಳಿಸಿ ಹಾಕಿತು.

ಜಪಾನ್‌ (3:12.68 ನಿ) ಚಿನ್ನ ಗೆದ್ದರೆ ಚೀನಾ (3:13.69 ನಿ) ಬೆಳ್ಳಿ ಮತ್ತು ಸಿಂಗಪುರ (3:17.22 ನಿ) ಕಂಚಿನ ಪದಕ ಗೆದ್ದಿತು.

ವೈಯಕ್ತಿಕ ವಿಭಾಗಗಳಲ್ಲಿ ಭಾರತದ ಈಜುಪಟುಗಳು ಪದಕ ಗೆಲ್ಲುವಲ್ಲಿ ವಿಫಲರಾದರು. ಸಾಜನ್‌ ಪ್ರಕಾಶ್‌ 100 ಮೀಟರ್ಸ್ ಬಟರ್‌ಫ್ಲೈ ವಿಭಾಗದ ಹೀಟ್ಸ್‌ನಲ್ಲಿ 54.06 ಸೆಕೆಂಡುಗಳ‌ಲ್ಲಿ ಗುರಿ ಮುಟ್ಟಿದರು. ಆದರೆ ಒಟ್ಟಾರೆ 12ನೇ ಸ್ಥಾನ ಗಳಿಸಿ ಫೈನಲ್‌ ಪ್ರವೇಶಿಸಲು ವಿಫಲರಾದರು. 200 ಮೀಟರ್ಸ್ ಬಟರ್‌ಫ್ಲೈ ವಿಭಾಗದ ಫೈನಲ್‌ನಲ್ಲಿ ಅವರಿಗೆ ಲಭಿಸಿದ್ದು ಐದನೇ ಸ್ಥಾನ. ಆದರೆ 53.83 ಸೆಕೆಂಡುಗಳಲ್ಲಿ ಗುರಿ ಸೇರಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT