ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ನಿಧನ

Last Updated 23 ಆಗಸ್ಟ್ 2018, 17:11 IST
ಅಕ್ಷರ ಗಾತ್ರ

ಬೆಂಗಳೂರು, ನವದೆಹಲಿ:ಗಣ್ಯಪತ್ರಕರ್ತ-ಲೇಖಕ,ಮಾನವ ಹಕ್ಕುಗಳ ಪ್ರತಿಪಾದಕ ಕುಲದೀಪ್ ನಯ್ಯರ್ ಬುಧವಾರ ಮಧ್ಯರಾತ್ರಿ12.30ರ ವೇಳೆಗೆ ದೆಹಲಿಯ ನಿವಾಸದಲ್ಲಿ ನಿಧನರಾದರು.ಅವರಿಗೆ95ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ಉರಿಯೂತದಿಂದ(ನ್ಯುಮೋನಿಯ)ಬಳಲುತ್ತಿದ್ದ ಅವರನ್ನು ಐದು ದಿನಗಳ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.

ಪಾಕಿಸ್ತಾನದ ಸಿಯಾಲ್ ಕೋಟ್‌ನಲ್ಲಿ ಜನಿಸಿದ ನಯ್ಯರ್, ಲಾಹೋರಿನಲ್ಲಿ ಕಾನೂನು ಪದವಿ ಗಳಿಸಿ,ದೇಶ ವಿಭಜನೆಯ ನಂತರ ಭಾರತಕ್ಕೆ ಬಂದರು. 1990ರಲ್ಲಿ ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದ ಅವರು ರಾಜ್ಯಸಭೆಯ ನಾಮಕರಣ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಮೊಮ್ಮಕ್ಕಳು ಇದ್ದಾರೆ.

ದಕ್ಷಿಣ ದೆಹಲಿಯ ಲೋಧಿ ಚಿತಾಗಾರದಲ್ಲಿನಯ್ಯರ್‌ ಅವರ ಅಂತ್ಯಕ್ರಿಯೆ ಗುರುವಾರ ಜರುಗಿತು.ಮಾಜಿ ಪ್ರಧಾನಿ ಮನಮೋಹನಸಿಂಗ್,ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹಿರಿಯ ವಕೀಲ ಸೋಲಿ ಸೊರಾಬ್ಜಿ,ಕಲಾವಿದ ಜತಿನ್ ದಾಸ್,ಸಾಮಾಜಿಕ ಕಾರ್ಯಕರ್ತೆ ಅರುಣಾರಾಯ್,ಸ್ವಾಮಿ ಅಗ್ನಿವೇಶ್ ಮುಂತಾದ ಗಣ್ಯರು ಮತ್ತು ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

ಪಾಕಿಸ್ತಾನದ ಸಿಯಾಲ್‌ಕೋಟ್‌ ಎಂಬಲ್ಲಿ 1923ರ ಆಗಸ್ಟ್‌ 14ರಂದು ಜನಿಸಿದ್ದ ನಯ್ಯರ್‌ ಉರ್ದು ಪತ್ರಿಕೋದ್ಯಮದ ಮೂಲಕ ವೃತ್ತಿ ಆರಂಭಿಸಿದ್ದರು.ಸ್ಟೇಟ್ಸ್ ಮನ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು.

ಇಂಗ್ಲಿಷ್‌ನಲ್ಲಿ ಅವರು ಬರೆಯುತ್ತಿದ್ದ Between the linesಅಂಕಣ ಜನಪ್ರಿಯವಾಗಿತ್ತು.ಇವರ ಅಂಕಣಗಳು14 ಭಾಷೆಗಳಲ್ಲಿದೇಶದ 80 ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು.ಪ್ರಜಾವಾಣಿಗೆ ಬರೆಯುತ್ತಿದ್ದ ‘ಸ್ಕೂಪ್‌’ ಅಂಕಣಹಲವು ವರ್ಷಗಳ ಕಾಲ ಪ್ರಕಟವಾಗುತ್ತಿತ್ತು.

ಕುಲದೀಪ್ ನಯ್ಯರ್ ಅವರ ಆತ್ಮಕಥೆಯನ್ನು ಡಾ.ಆರ್.ಪೂರ್ಣಿಮಾ ಅವರು ‘ಒಂದು ಜೀವನ ಸಾಲದು!’ ಎಂದು ಭಾಷಾಂತರ ಮಾಡಿದ್ದರು. ಈ ಪುಸ್ತಕಒಂದೇ ತಿಂಗಳಲ್ಲಿ ಎರಡನೇ ಮುದ್ರಣ ಕಂಡು ದಾಖಲೆ ಸೃಷ್ಟಿಸಿತ್ತು. ಪುಸ್ತಕದ ಆಯ್ದ ಭಾಗಗಳು ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಕೆಲವು ಕಂತುಗಳಲ್ಲಿ ಪ್ರಕಟಗೊಂಡಿದ್ದವು.

1990ರಲ್ಲಿಇಂಗ್ಲೆಂಡ್‌ಗೆಹೈ ಕಮಿಶನರ್ ಆಗಿ ನೇಮಕಗೊಂಡಿದ್ದ ನಯ್ಯರ್‌,1997ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.

ಶಾಂತಿ ಮತ್ತು ಮಾನವ ಹಕ್ಕುಗಳ ಪರ ನಿಲುವಿನಿಂದ ವಿಶ್ವಖ್ಯಾತಿ ಪಡೆದಿದ್ದರು.70ರ ದಶಕದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು.
**
ಇದನ್ನೂ ಓದಿರಿ..
* ‘ಒಂದು ಜೀವನ ಸಾಲದು’ ಪುಸ್ತಕದ ಒಂದು ಅಧ್ಯಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT