ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಿನಿಮಾದ ಹೆಸರೇ ‘ಗುಡ್‌ ಬೈ’

Last Updated 23 ಆಗಸ್ಟ್ 2018, 9:34 IST
ಅಕ್ಷರ ಗಾತ್ರ

ವಿದಾಯ ಹೇಳುವಾಗ ‘ಗುಡ್‌ ಬೈ’ ಎಂದು ಹೇಳುವುದು ರಿವಾಜು. ಆದರೆ ಆ ಪತ್ರಕಾಗೋಷ್ಠಿಯಲ್ಲಿ ಎಲ್ಲರಿಗೂ ಪ್ರಾರಂಭದಲ್ಲಿಯೇ ಗುಡ್‌ ಬೈ ಹೇಳಲಾಯ್ತು! ಹೇಳುವುದು ಅನಿವಾರ್ಯವೂ ಆಗಿತ್ತು. ಯಾಕೆಂದರೆ ಆ ಸಿನಿಮಾದ ಹೆಸರೇ ‘ಗುಡ್‌ ಬೈ’!

ಕೌರವ ವೆಂಕಟೇಶ್‌ ಸಾವಿರಕ್ಕೂ ಹೆಚ್ಚು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದವರು. ಅವರೀಗ ವಿ. ರವಿಚಂದ್ರನ್‌ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಉತ್ಸಾಹದಲ್ಲಿದ್ದಾರೆ. ಇದೇನು ಹಲವು ದಶಕಗಳಿಂದ ಚಿತ್ರರಂಗದಲ್ಲಿರುವ ರವಿಚಂದ್ರನ್ ಅವರನ್ನು ಕೌರವ ವೆಂಕಟೇಶ್ ಪರಿಚಯಿಸುವ ಅಗತ್ಯ ಇದೆಯಾ ಎಂದು ಹುಬ್ಬೇರಿಸಬೇಡಿ. ಕೌರವ ವೆಂಕಟೇಶ್‌ ಅವರ ಮಗನ ಹೆಸರೂ ವಿ. ರವಿಚಂದ್ರನ್‌. ಅವರೀಗ ಪರಿಚಯಿಸಯಹೊರಟಿರುವುದು ತಮ್ಮ ಮಗನನ್ನೇ.

ನಾಯಕನಾಗಿಯಷ್ಟೇ ಅಲ್ಲ, ನಿರ್ದೇಶಕನಾಗಿಯೂ ರವಿಚಂದ್ರನ್‌, ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ‘ಗುಡ್‌ ಬೈ’ ಚಿತ್ರದ ಕಥೆ ಬರೆದು ನಿರ್ದೇಶಿಸುತ್ತಿರುವುದೂ ಅವರೇ.

‘ಮಗನನ್ನು ಎಲ್ಲ ಬಗೆಯಿಂದ ಸಜ್ಜುಗೊಳಿಸಿಯೇ ಚಿತ್ರರಂಗಕ್ಕೆ ತರುತ್ತಿದ್ದೇನೆ. ಜನರು ನನಗೆ ನೀಡಿದಷ್ಟೇ ಪ್ರೀತಿಯ ಸ್ವಾಗತವನ್ನು ಅವನಿಗೂ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು ಕೌರವ ವೆಂಕಟೇಶ್‌. ಈ ಚಿತ್ರಕ್ಕೆ ಅವರೇ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

‘ಇದು ಅಕ್ಕ– ತಮ್ಮನ ನಡುವಿನ ಭಾವನಾತ್ಮಕ ಸಂಬಂಧದ ಕುರಿತಾದ ಕಥೆ. ಒಂದು ಮರ್ಡರ್‌ ಮಿಸ್ಟರಿಯ ಅಂಶವನ್ನೂ ಒಳಗೊಂಡಿದೆ. ಜನರಿಗೆ ಹೊಸ ಸಂದೇಶ ನೀಡುತ್ತಿದ್ದೇವೆ. ಪ್ರೀತಿ, ಆ್ಯಕ್ಷನ್‌, ಸಾಹಸ ಎಲ್ಲವೂ ಇದೆ’ ಎಂದ ರವಿಚಂದ್ರನ್‌, ‘ನಾನು ತಂದೆಯ ಕೆಲಸವನ್ನು ನೋಡಿಯೇ ನಿರ್ದೇಶನದ ಕೌಶಲಗಳನ್ನು ಕಲಿತಿದ್ದೇನೆ’ ಎಂದೂ ಹೇಳಿದರು.

ಮೋನಿಷಾ ಥಾಮಸ್‌ ಎಂಬ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ತಾಯಿ ರಮಾದೇವಿ ವೆಂಕಟೇಶ್ ಅವರೇ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಜಯಪ್ರಕಾಶ್‌ ಎನ್ನುವವರು ಸಿಬಿಐ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.

ಇದೇ ವಾರ (ಆಗಸ್ಟ್ 24) ‘ಗುಡ್‌ ಬೈ’ ಚಿತ್ರ ತೆರೆಗೆ ‘ಹಾಯ್‌ ಹಾಯ್‌’ ಹೇಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT