ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೋಪಕಾರದ ಗುಣ ಬೆಳೆಸಿಕೊಳ್ಳಿ: ಈಶ್ವರೀಯ ವಿಶ್ವವಿದ್ಯಾಲಯದ ಪ್ರಭಾರ ಸಂಚಾಲಕಿ ಉಷಾ

Last Updated 23 ಆಗಸ್ಟ್ 2018, 13:06 IST
ಅಕ್ಷರ ಗಾತ್ರ

ಬೀದರ್: ‘ಸತ್ಕರ್ಮಗಳು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತವೆ. ಆದ್ದರಿಂದ ಪ್ರತಿಯೊಬ್ಬರು ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಭಾರ ಸಂಚಾಲಕಿ ಉಷಾ ತಿಳಿಸಿದರು.

ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದಲ್ಲಿ ರಕ್ಷಾ ಬಂಧನ ಪ್ರಯುಕ್ತ ಸಹೋದರರಿಗೆ ರಾಖಿ ಕಟ್ಟಿ ಮಾತನಾಡಿದರು.

‘ಮಾನವನು ತನ್ನ ವಿಲಾಸಿ ಜೀವನಕ್ಕಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಕೇರಳ ಹಾಗೂ ಕೊಡಗಿನಲ್ಲಿಯ ನೈಸರ್ಗಿಕ ವಿಕೋಪಕ್ಕೆ ಮಾನವನ ದುಷ್ಕೃತ್ಯವೇ ಕಾರಣವಾಗಿದೆ’ ಎಂದು ಹೇಳಿದರು.

ರವೀಂದ್ರ ಸ್ವಾಮಿ ಮಾತನಾಡಿ, ‘ಸಂಸಾರದ ಜಂಜಡದಲ್ಲಿರುವ ಪ್ರತಿಯೊಬ್ಬರು ಒತ್ತಡದಲ್ಲಿ ಮುಳುಗುವುದು ಸಹಜ. ಆದರೆ, ಸಂಸಾರಿಯಾಗಿದ್ದುಕೊಂಡೇ ಪಾರಮಾರ್ಥ ಸಾಧನೆ ಮಾಡುವುದು ಮನುಷ್ಯ ಧರ್ಮ. ನಾವು ಮಾಡುವ ಕರ್ಮಗಳಿಗೆ ಪ್ರತಿಯಾಗಿ ಭಗವಂತನು ಫಲ ನೀಡುತ್ತಾನೆ’ ಎಂದರು.

ಪ್ರಭಾಕರ, ಜಗದೀಶ, ಮಾರುತಿ, ರೇಣುಕಾ, ಮಹಾನಂದಾ, ಶ್ವೇತಾ, ಶೀತಲ ಪಾಂಚಾಳ ಇದ್ದರು. ಮಂಗಲಾ ಸ್ವಾಗತಿಸಿದರು. ವಿಜಯಲಕ್ಷ್ಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT