ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಟಿ ಗ್ರಾಮ ಪಂಚಾಯಿತಿ: ವೆಂಕಟೇಶಪ್ಪಗೆ ಅಧ್ಯಕ್ಷಗಾದಿ

Last Updated 23 ಆಗಸ್ಟ್ 2018, 15:49 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಹರಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಆರ್.ವೆಂಕಟೇಶಪ್ಪ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುಳಾ ಆಯ್ಕೆಯಾದರು.

ಒಟ್ಟು 21 ಸದಸ್ಯ ಬಲದ ಗ್ರಾ.ಪಂನಲ್ಲಿ ಜೆಡಿಎಸ್ 6, ಬಿಜೆಪಿ 6 ಹಾಗೂ ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದಾರೆ. ಬಿಜೆಪಿ- ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್‌ ಪಾಳಯಕ್ಕೆ ಅಧ್ಯಕ್ಷಗಾದಿ ಕೈತಪ್ಪಿ ಮುಖಭಂಗವಾಗಿದೆ.

ಹಿಂದಿನ ಅಧ್ಯಕ್ಷೆ ವಿ.ಪವಿತ್ರಾ ಹಾಗೂ ಉಪಾಧ್ಯಕ್ಷೆ ಶೋಭಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷಗಾದಿಗೆ ಜೆಡಿಎಸ್‌ ಪಾಳಯದಿಂದ ವೆಂಕಟೇಶಪ್ಪ ಮತ್ತು ಕಾಂಗ್ರೆಸ್‌ನಿಂದ ಶಿಲ್ಪಾ, ಉಪಾಧ್ಯಕ್ಷಗಾದಿಗೆ ಜೆಡಿಎಸ್‌ನಿಂದ ಸುಹಾಸಿನಿ ಮತ್ತು ಕಾಂಗ್ರೆಸ್ ಪಾಳಯದಿಂದ ಮಂಜುಳಾ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯಲ್ಲಿ ವೆಂಕಟೇಶಪ್ಪ 12 ಮತ ಪಡೆದು ಜಯ ಗಳಿಸಿದರೆ, ಪ್ರತಿಸ್ಪರ್ಧಿ ಶಿಲ್ಪಾ ಅವರು 9 ಮತ ಗಳಿಸಿದರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮಂಜುಳಾ 11 ಮತ ಪಡೆದು ಗೆಲುವು ಸಾಧಿಸಿದರೆ, ಸುಹಾಸಿನಿ 10 ಮತ ಗಳಿಸಿ ಪರಾಭಾವಗೊಂಡರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮುಂಜುನಾಥ್‌ ಚುನಾವಣಾ ಕಾರ್ಯ ನಿರ್ವಹಿಸಿದರು. ಗ್ರಾ.ಪಂ ಸದಸ್ಯರಾದ ಕೆ.ವೈ.ಗಣೇಶ್‌ಗೌಡ, ಬಿ.ಎನ್.ಶಿವಕುಮಾರ್, ಬಾಬು, ನಾಗಲಕ್ಷ್ಮಿ, ಎಂ.ಜಿ.ದೀಪಾ, ಗೋಪಾಲ್, ಸೀನಪ್ಪ, ಪಿ.ಸುಹಾಸಿನಿ, ನಾರಾಯಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT