ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 24–8–1968

Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಜೆಕೊಸ್ಲೊವಾಕಿಯ ಬಗ್ಗೆ ಭಾರತದ ನಿಲುವು: ಲೋಕಸಭೆಯಲ್ಲಿ ಉಗ್ರ ವಿರೋಧ

ನವದೆಹಲಿ, ಆ. 23– ಜೆಕೊಸ್ಲೊವಾಕಿಯದಲ್ಲಿ ರಷ್ಯ ಹಾಗೂ ವಾರ್ಸಾ ಕೌಲುಕೂಟದ ಇತರ ರಾಷ್ಟ್ರಗಳು ಸಶಸ್ತ್ರ ಆಕ್ರಮಣ ನಡೆಸಿದುದನ್ನು ಖಂಡಿಸುವ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಏಳು ರಾಷ್ಟ್ರಗಳು ಮಂಡಿಸಿದ ನಿರ್ಣಯದ ಮೇಲೆ ಭಾರತದ ಪ್ರತಿನಿಧಿ ಮತ ಚಲಾಯಿಸದಿದ್ದುದನ್ನು ಕಮ್ಯೂನಿಸ್ಟ್ ಪಕ್ಷ ಬಿಟ್ಟು ಉಳಿದೆಲ್ಲ ವಿರೋಧ ಪಕ್ಷಗಳು ಇಂದು ಲೋಕಸಭೆಯಲ್ಲಿ ಕೋಪೋದ್ರೇಕದಿಂದ ಖಂಡಿಸಿದವು.

ರಾಜ್ಯದ ಮುಖ್ಯ ಕಾರ್ಯದರ್ಶಿ ಆರ್.ಎನ್. ವಾಸುದೇವ್

ಬೆಂಗಳೂರು, ಆ. 23– ಬೆಂಗಳೂರು ಡಿವಿಜನಲ್ ಕಮಿಷನರ್ ಶ್ರೀ ಆರ್.ಎನ್. ವಾಸುದೇವ್ (54) ರವರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇವರು ನಾಳೆ ಮಧ್ಯಾಹ್ನ ಅಧಿಕಾರ ವಹಿಸಿಕೊಳ್ಳುವರು.

ಕೇಂದ್ರ ಜಾಗೃತಾ ಕಮೀಷನರ್ಶ್ರೀ ನಿಟ್ಟೂರ್ ನಿವೃತ್ತಿ

ನವದೆಹಲಿ, ಆ. 23– 65 ವರ್ಷ ವಯಸ್ಸಾಗಿರುವ ಕೇಂದ್ರ ಜಾಗೃತಾ ಕಮೀಷನರ್ ಶ್ರೀ ನಿಟ್ಟೂರು ಶ್ರೀನಿವಾಸ ರಾವ್ ಅವರು ಇಂದು ತಮ್ಮ ಅಧಿಕಾರದಿಂದ ನಿವೃತ್ತರಾದರು.

ಸಂತಾನಂ ಸಮಿತಿ ಶಿಫಾರಸುಗಳ ಪ್ರಕಾರ ಅವರು ಪ್ರಥಮ ಜಾಗೃತಾ ಕಮೀಷನರ್ ಆಗಿದ್ದರು.

ನಿರುದ್ಯೋಗಿ ಎಂಜಿನಿಯರ್: ಮೈಸೂರಿನ ವಿಕ್ರಮ

ನವದೆಹಲಿ, ಆ. 23– ಮೈಸೂರು ರಾಜ್ಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ 1967ನೇ ಡಿಸೆಂಬರ್ 31ರವರೆಗೆ ಅಧಿಕ ಸಂಖ್ಯೆಯ ನಿರುದ್ಯೋಗಿಗಳು ದಾಖಲಾಗಿದ್ದಾರೆ. ಇವರ ಸಂಖ್ಯೆ 5861.

ಅಖಿಲ ಭಾರತ ನಿರುದ್ಯೋಗಿ ಎಂಜಿನಿಯರುಗಳ ಸಂಖ್ಯೆ 40538.

ಈ ವಿಷಯವನ್ನು ಗೃಹಖಾತೆ ಉಪ ಸಚಿವ ರಾಮಸ್ವಾಮಿ ಇಂದು ಲೋಕಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT