ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆಗೆ ಪರಿಹಾರ: ವಿದ್ಯಾರ್ಥಿಗಳಿಗೆ ಇನ್ಫೊಸಿಸ್‌ ಸ್ಪರ್ಧೆ

₹5 ಲಕ್ಷ ವಿದ್ಯಾರ್ಥಿ ವೇತನ, ಇಸ್ರೊ ರಾಕೆಟ್ ಉಡಾವಣೆ ವೀಕ್ಷಣೆ
Last Updated 23 ಆಗಸ್ಟ್ 2018, 16:44 IST
ಅಕ್ಷರ ಗಾತ್ರ

ಬೆಂಗಳೂರು: ಅಪೌಷ್ಟಿಕತೆ ನಿವಾರಣೆಗೆ ಪರಿಹಾರ ಕಂಡು ಹಿಡಿಯುವ ಹೈಸ್ಕೂಲ್‌ ಮತ್ತು ಪಿಯು ವಿದ್ಯಾರ್ಥಿಗಳಿಗೆ ₹ 5 ಲಕ್ಷ ವಿದ್ಯಾರ್ಥಿ ವೇತನದ ಜತೆಗೆ ಇಸ್ರೊ ರಾಕೆಟ್‌ ಉಡಾವಣೆ ವೀಕ್ಷಣೆಯನ್ನೂ ವೀಕ್ಷಿಸಬಹುದು !

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಸಂಶೋಧನಾ ಪ್ರವೃತ್ತಿಯನ್ನು ಪ್ರೇರೇಪಿಸಲು ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನವು ನ್ಯೂಯಾರ್ಕ್‌ ಅಕಾಡೆಮಿ ಆಫ್‌ ಸೈನ್ಸಸ್‌ (ಎನ್‌ವೈಎಎಸ್‌) ಜತೆ ಸೇರಿ ಸಂಶೋಧನಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಗಭಿರ್ಣಿಯರಲ್ಲಿ ಮತ್ತು 5 ವರ್ಷದವರೆಗಿನ ಮಕ್ಕಳಲ್ಲಿ ಅಪೌಷ್ಟಿಕತೆಗೆ ಪರಿಹಾರ ಕಂಡು ಹಿಡಿಯಬೇಕು. ಇದರಲ್ಲಿ 13 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಏಕಾಂಗಿಯಾಗಿ ಅಥವಾ ಆರು ಜನ ಸೇರಿಕೊಂಡು ತಂಡವಾಗಿ ಸಂಶೋಧನೆ ಕೈಗೊಳ್ಳಬಹುದು ಎಂದು ಇನ್ಫೊಸಿಸ್ ವಿಜ್ಞಾನ ಪ್ರತಿಷ್ಠಾನದ ಟ್ರಸ್ಟಿ ಮೋಹನ್‌ದಾಸ್‌ ಪೈ ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಜಾಗತಿಕ ವೇದಿಕೆ ವಿಜ್ಞಾನದ ಪ್ರತಿಭಾ ಪ್ರದರ್ಶನಕ್ಕೆ ಅನುಕೂಲವಾಗಲಿದೆ. ಇದರಲ್ಲಿ 1000 ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶವಿದೆ. ಸೆಪ್ಟೆಂಬರ್‌ 10 ರಿಂದ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಶೇ 35 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ಈ ಮಕ್ಕಳು ತಮ್ಮ ಜೀವಮಾನವಿಡೀ, ಅನಾರೋಗ್ಯದಿಂದಲೇ ಬಳಲುತ್ತಾರೆ. ಅವರ ವೃತ್ತಿ ಜೀವನ ಮತ್ತು ಆರ್ಥಿಕ ಉತ್ಪಾದಕತೆ ಭವಿಷ್ಯದ ಮೇಲೂ ಅಡ್ಡ ಪರಿಣಾಮ ಬೀರಬಹುದು. ಅಪೌಷ್ಟಿಕತೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದೇ ಸ್ಪರ್ಧೆಯ ಮುಖ್ಯ ಉದ್ದೇಶ ಎಂದು ಮೋಹನ್‌ದಾಸ್‌ ಪೈ ತಿಳಿಸಿದರು.

ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತವನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾಗುವ ತಂಡದ ಪ್ರತಿಯೊಬ್ಬ ವಿದ್ಯಾರ್ಥಿಗೂ ₹ 5 ಲಕ್ಷ ವಿದ್ಯಾರ್ಥಿ ವೇತನ ಸಿಗಲಿದೆ. ಮಾಹಿತಿಗೆ www.infosys-science-foundation.com ಸಂಪರ್ಕಿಸಬಹುದು. nyas.org/infosyssciennefondation ಇಲ್ಲಿ ಹೆಸರು ನೋಂದಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT