ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬೆಲೆಗೆ ರೇಷ್ಮೆ ಸೀರೆ: ಕಾರ್ಮಿಕರ ಪ್ರತಿಭಟನೆ

ನಷ್ಟ ಭರ್ತಿಗೆ ಒತ್ತಾಯ; ಕಾರ್ಖಾನೆ ಉಳಿಸಲು ಆಗ್ರಹ
Last Updated 23 ಆಗಸ್ಟ್ 2018, 18:05 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಇಲ್ಲಿನ ರೇಷ್ಮೆ ನೇಯ್ಗೆ ಕಾರ್ಖಾನೆ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.

ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ಮಾಡುವುದರಿಂದ ಕಾರ್ಖಾನೆಗೆ ಉಂಟಾಗುವ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.‌

ರಿಯಾಯಿತಿ ದರದಲ್ಲಿ ಸೀರೆ ಮಾರಾಟಕ್ಕೆ ವಿರೋಧ ಇಲ್ಲ. ಆದರೆ, ಇದರಿಂದ ಉಂಟಾಗುವ ಕೋಟ್ಯಂತರ ರೂಪಾಯಿ ನಷ್ಟವನ್ನು ತುಂಬಿಕೊಡಬೇಕು ಎಂದು ಆಗ್ರಹಿಸಿದರು.

‘2004ರ ವರೆಗೂ ಕಾರ್ಖಾನೆ ನಷ್ಟದಲ್ಲಿದ್ದು, ಉಳಿಯುವುದೇ ಕಷ್ಟಕರವಾಗಿತ್ತು. ಕಾರ್ಮಿಕರು ವಿವಿಧ ಆರ್ಥಿಕ ಸವಲತ್ತುಗಳನ್ನು ತ್ಯಾಗಮಾಡಿ ಲಾಭದ ಹಳಿಗೆ ಬರುವಂತೆ ನೋಡಿಕೊಂಡಿದ್ದಾರೆ. ಈಗ ₹ 12,400 ಮೌಲ್ಯದ ಸೀರೆಯನ್ನು ₹ 5,000ಕ್ಕೆ ಹಾಗೂ ₹ 9,040 ಮೌಲ್ಯದನ್ನು ₹ 4,500ಕ್ಕೆ ನೀಡುವುದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಸರ್ಕಾರ ಈ ಹಣವನ್ನು ಮೊದಲು ನೀಡಬೇಕು. ನಂತರ, ಗ್ರಾಹಕರಿಗೆ ಸೀರೆ ಮಾರಾಟ ಮಾಡಬೇಕು’ ಎಂದು ಎಐಟಿಯುಸಿ ಉಪಾಧ್ಯಕ್ಷ ಎಂ.ಕಾಳಪ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT