ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯದಲ್ಲಿ ಚೀನಾಗೆ ಮೋದಿ

ಚೀನಾ–ಭಾರತ ಬಾಂಧವ್ಯಕ್ಕೆ ಹೊಸ ಮೈಲಿಗಲ್ಲು ನಿರೀಕ್ಷೆ
Last Updated 23 ಏಪ್ರಿಲ್ 2018, 5:21 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದ ವುಹಾನ್‌ ನಗರದಲ್ಲಿ ಇದೇ 27 ಮತ್ತು 28ರಂದು ನಡೆಯಲಿರುವ ಅನೌಪಚಾರಿಕ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಾತುಕತೆ ನಡೆಸಲಿದ್ದಾರೆ.

‘ಈ ಶೃಂಗಸಭೆಯಲ್ಲಿ ಮಹತ್ವದ ಒಪ್ಪಂದ ಆಗುವ ಬಗ್ಗೆ ನಿರೀಕ್ಷೆ ಇಲ್ಲ. ಬದಲಿಗೆ ಉಭಯ ನಾಯಕರ ಈ ಭೇಟಿ ಎರಡೂ ದೇಶಗಳ ಬಾಂಧವ್ಯದಲ್ಲಿ ಹೊಸ
ಮೈಲುಗಲ್ಲಾಗಲಿದೆ. ದ್ವಿಪಕ್ಷೀಯ ಹಾಗೂ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಪರಸ್ಪರ ವಿಚಾರಗಳ ವಿನಿಮಯಕ್ಕೆ ಇದೊಂದು ಅವಕಾಶವಾಗಲಿದೆ. ಹಲವು ವಿವಾದಗಳು ಮತ್ತು ಭಿನ್ನತೆಗಳ ನಡುವೆಯೂ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಉಭಯ ನಾಯಕರು ಶ್ರಮಿಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿ ಅವರ ನಾಲ್ಕನೇ ಚೀನಾ ಭೇಟಿ ಇದಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT