ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಮಳೆ

ಹಾರಿದ ಮನೆಗಳ ಚಾವಣಿ: ಕುಸಿದ ಗೋಡೆ, ಬಡಿದ ಸಿಡಿಲು
Last Updated 23 ಏಪ್ರಿಲ್ 2018, 6:51 IST
ಅಕ್ಷರ ಗಾತ್ರ

ಚಾಮರಾಜನಗರ: ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಭಾನುವಾರ ಸುರಿದ ಮಳೆಗೆ ಜಿಲ್ಲೆಯ ಕೆಲವೆಡೆ ಮನೆಗಳ ಚಾವಣಿ ಹಾರಿ ಹೋದರೆ ಮತ್ತೆ ಕೆಲವೆಡೆ ಸಿಡಿಲು ಬಡಿದು ಹಾನಿ ಸಂಭವಿಸಿತು. ನಗರದ ರಸ್ತೆಗಳೆಲ್ಲ ಜಲಾವೃತಗೊಂಡು ಸಾರ್ವಜನಿಕರು ಪರದಾಡಿದರು.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

ಚಾಮರಾಜನಗರದ ಪುಣುಜನೂರು ಸುತ್ತಮುತ್ತ 16 ಮಿ.ಮೀ, ಕಾಗಲವಾಡಿಯಲ್ಲಿ 28 ಮಿ.ಮೀ, ಮಲ್ಲಯ್ಯನಪುರದಲ್ಲಿ 14, ಪುಟ್ಟೇಗೌಡನಹುಂಡಿಯಲ್ಲಿ 4.5, ಯರಗನಹಳ್ಳಿಯಲ್ಲಿ 8.5, ಯಳಂದೂರು ತಾಲ್ಲೂಕಿನ ಗುಂಬಳ್ಳಿಯಲ್ಲಿ 9.5 ಮಿ.ಮೀನಷ್ಟು ಮಳೆಯಾಗಿದೆ. ಬಿರುಗಾಳಿಯ ವೇಗ ಗಂಟೆಗೆ 14 ಕಿ.ಮೀಗೂ ಅಧಿಕ ಇತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT