ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ ಕಾಂಗ್ರೆಸ್‌ನ ಭದ್ರ ಕೋಟೆ: ಮಾನೆ

Last Updated 23 ಏಪ್ರಿಲ್ 2018, 9:44 IST
ಅಕ್ಷರ ಗಾತ್ರ

ಹಾನಗಲ್: ‘ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ, ಹಾನಗಲ್‌ ಕಾಂಗ್ರೆಸ್‌ನ ಭದ್ರ ನೆಲೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿದರು.

ಭಾನುವಾರ ಇಲ್ಲಿನ ಮಖಬೂಲಿಯಾ ನಗರದಲ್ಲಿ ಹಾನಗಲ್‌ ನಗರ ಘಟಕದ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ನಾನು ಹೊರಗಿನವನು ಅಲ್ಲ, ಈ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸದಸ್ಯ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತದಾರರು ನನಗೆ ಶಕ್ತಿ ತುಂಬಬೇಕು, ಸಿದ್ದರಾಮಯ್ಯ ಆಡಳಿತ ಜನಮೆಚ್ಚುಗೆ ಪಡೆದಿದೆ, ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಬರಲಿದೆ’ ಎಂದು ವಿಶ್ವಾವ ವ್ಯಕ್ತಪಡಿಸಿದರು.

‘ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ ಎಂಬ ಗೊಂದಲ ಪಕ್ಷದ ಕಾರ್ಯಕರ್ತರಲ್ಲಿ ಇದೆ. ಎರಡು ದಿನಗಳಿಂದ ಹಲವು ವದಂತಿಗಳು ಹಬ್ಬಿಕೊಳ್ಳುತ್ತಿವೆ, ಇದೇ 24 ರಂದು ನಾನು ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಇದೆಲ್ಲದಕ್ಕೂ ತೆರೆ ಬೀಳಲಿದೆ’ ಎಂದರು.

‘ಶಾಸಕ ಮನೋಹರ ತಹಸೀಲ್ದಾರ್‌ ಅವರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಯಲಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಸ್ಥಳೀಯ ನಾಯಕರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗೊಂದಲ, ವದಂತಿಗಳಿಂದ ಪಕ್ಷಕ್ಕೆ ಹಾನಿ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಎಂ.ಕೆ.ಹುಬ್ಬಳ್ಳಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಮುಖಂಡರಾದ ವೈ.ಎಫ್‌.ಕಿತ್ತೂರ, ಬಿ.ಶಿವಪ್ಪ, ಸತೀಶ ದೇಶಪಾಂಡೆ, ದಾನಪ್ಪ ಗಂಟೇರ, ಎಂ.ಎಂ.ವೆಂಕಟಾಪೂರ, ರಾಜು ಗುಡಿ, ವೀರೇಶ ಬೈಲವಾಳ ಇದ್ದರು.

**

ಪ್ರತಿಸ್ಪರ್ಧಿ ಪ್ರಬಲ ಎಂಬ ಕಾರಣಕ್ಕೆ ಎದೆಗುಂದಲಾರೆ, ಯಾವುದಕ್ಕೂ ಜಗ್ಗುವುದಿಲ್ಲ, ಗಂಡುಮೆಟ್ಟಿದ ನಾಡಿನವರು ನಾನು, ವಿರೋಧಿಗಳಿಗೆ ಅಂಜಿ ಓಡಿ ಹೋಗುವುದಿಲ್ಲ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಘಟನೆ ಬಲಿಷ್ಠವಾಗಿದೆ, ಗೆಲುವು ನಿಶ್ಚಿತ
ಶ್ರೀನಿವಾಸ ಮಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT