ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಗೀರಥ ಸಾಧನೆ ಅನುಕರಣೀಯ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗೀರಥ ಜಯಂತಿ ಆಚರಣೆ
Last Updated 23 ಏಪ್ರಿಲ್ 2018, 10:08 IST
ಅಕ್ಷರ ಗಾತ್ರ

ಕಾರವಾರ: ‘ತಮ್ಮ ಪೂರ್ವಜರಿಗೆ ಸದ್ಗತಿ ದೊರಕಿಸಿಕೊಡುವುದಕ್ಕಾಗಿ ದೇವಗಂಗೆಯನ್ನೇ ಭೂಲೋಕಕ್ಕೆ ತರಲು ಮಹರ್ಷಿ ಭಗೀರಥ ಮಾಡಿದ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕಪಿಲ ಮಹರ್ಷಿ ಕೋಪಾಗ್ನಿಗೆ ತುತ್ತಾಗಿ ಬೂದಿಯಾದ ಪೂರ್ವಜರಿಗೆ ಸದ್ಗತಿ ದೊರಕಿಸಿಕೊಡಲು ಅವರು ನಡೆಸಿದ ನಿರಂತರ ಪ್ರಯತ್ನ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಕೈಗೊಂಡ ಕೆಲಸವನ್ನು ಮಧ್ಯದಲ್ಲೇ ಕೈಬಿಡದೆ, ಭಗೀರಥನಂತೆ ಗುರಿ ಸಾಧಿಸಬೇಕು’ ಎಂದರು.

‘ಭಗೀರಥರು ಕೇವಲ ಒಂದು ಸಮುದಾಯಕ್ಕೆ ಸೇರಿದ ನಾಯಕರಲ್ಲ. ಎಲ್ಲ ವರ್ಗದವರೂ ಅವರ ಆದರ್ಶ ಪಾಲಿಸಬೇಕು. ತಳಸಮುದಾಯಗಳ ಯುವಜನ ವಿದ್ಯಾವಂತರಾಗಬೇಕು. ಉನ್ನತ ಹುದ್ದೆ ಅಲಂಕರಿಸಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಮಾತನಾಡಿ, ‘ಭಗೀರಥ ಮಾಡಿರುವುದು ಸ್ವಾರ್ಥ ಸಾಧನೆಯಲ್ಲ. ಅವರು ದೇವಗಂಗೆಯನ್ನು ಭೂಮಿಗೆ ಹರಿಸುವ ಮೂಲಕ ಇಂದಿನ ಮನು ಕುಲಕ್ಕೆ ಸಮೃದ್ಧಿಯನ್ನೇ ತಂದಿದ್ದಾರೆ’ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪಾರ ಮಹಿಳೆಯರು ಪೂರ್ಣಕುಂಭ ಹೊತ್ತು ಜಯಂತ್ಯುತ್ಸವದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT