ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

Last Updated 23 ಏಪ್ರಿಲ್ 2018, 11:36 IST
ಅಕ್ಷರ ಗಾತ್ರ

ಹೈದರಾಬಾದ್‌: ನಟ ಮಹೇಶ್‌ ಬಾಬು ಅಭಿನಯದ ‘ಭರತ್ ಅನೆ ನೇನು’ ಚಿತ್ರ ಕಳೆದ ಶುಕ್ರವಾರ (ಏ.20)ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

ಚಿತ್ರ ಈವರೆಗೆ ₹100 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.

ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದು, ಡಿ.ವಿ.ವಿ. ದಾನಯ್ಯ ಹಣ ಹೂಡಿದ್ದಾರೆ. ಉಳಿದಂತೆ ಮಹೇಶ್ ಬಾಬು, ಕೈರಾ ಅಡ್ವಾಣಿ, ಪ್ರಕಾಶ್ ರಾಜ್, ಶರತ್ ಕುಮಾರ್, ದೇವರಾಜ್, ಸಿತಾರಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ, ‘ಕಮರ್ಶಿಯಲ್ ಚಿತ್ರದಲ್ಲಿ ಸ್ಥಳೀಯ ಆಡಳಿತದ ಸಮಸ್ಯೆಗಳನ್ನು ತೋರಿಸಲು  ಸಾಕಷ್ಟು ಶ್ರಮಬೇಕಾಗುತ್ತದೆ. ನಿಮ್ಮ ಉತ್ತಮ ಪ್ರಯತ್ನಕ್ಕೆ ಅಭಿನಂದನೆಗಳು. ಜತೆಗೆ ಚಿತ್ರದಲ್ಲಿ ಪತ್ರಿಕಾಗೋಷ್ಠಿಯ ದೃಶ್ಯ ಅದ್ಭುತವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ನಟ ಜ್ಯೂನಿಯರ್‌ ಎನ್‌ಟಿಆರ್‌ ಚಿತ್ರದ ಬಗ್ಗೆ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT