ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಹೊತ್ತಿ ಉರಿದರೂ ಮತ್ತೊಮ್ಮೆ ಪ್ರಧಾನಿ ಆಗುವುದೇ ಮೋದಿ ಚಿಂತೆ: ರಾಹುಲ್‌ ಗಾಂಧಿ

Last Updated 23 ಏಪ್ರಿಲ್ 2018, 12:45 IST
ಅಕ್ಷರ ಗಾತ್ರ

ನವದೆಹಲಿ: ದಲಿತರ ಹಕ್ಕುಗಳು ಹಾಗೂ ಮಹಿಳೆಯರ ಸುರಕ್ಷತೆ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನ ‘ಸಂವಿಧಾನ ರಕ್ಷಿಸಿ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶವೇ ಹೊತ್ತಿ ಉರಿದರೂ, ಬಾಲಕಿಯರ ಮೇಲೆ ಅತ್ಯಾಚಾರ ನಡೆದರೂ, ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳು ಅಪಾಯ ಸ್ಥಿತಿ ತಲುಪಿದರೂ, ಮೋದಿ ಮಾತ್ರ ಮತ್ತೊಮ್ಮೆ ಪ್ರಧಾನಿ ಆಗುವ ಕುರಿತು ಆಸಕ್ತಿವಹಿಸಿದ್ದಾರೆ’ ಎಂದು ಟೀಕಿಸಿದರು.

‘ಈ ಸರ್ಕಾರದಿಂದ ಸಂಸತ್‌ ಕಾರ್ಯಸ್ಥಗಿತಗೊಂಡಿದೆ, ಸುಪ್ರೀಂ ಕೋರ್ಟ್ ತತ್ತರಿಸಿ ಹೋಗಿದೆ. ನೀರವ್‌ ಮೋದಿ ಹಗರಣ ಸೇರಿ ಹಲವು ವಿಚಾರಗಳನ್ನು 15 ನಿಮಿಷ ಮಾತನಾಡಲು ನನಗೆ ಅವಕಾಶ ಮಾಡಿಕೊಟ್ಟರೆ, ಮೋದಿ ಅಲ್ಲಿ ನಿಲ್ಲುವುದಿಲ್ಲ’ ಎಂದರು.

ಆರ್‌ಎಸ್‌ಎಸ್‌ ಸಿದ್ಧಾಂತದಲ್ಲಿ ನಂಬಿಕೆ ಇರುವವರೇ ಹೆಚ್ಚಾಗಿ ಸರ್ಕಾರಿ ಸಂಸ್ಥೆಗಳಲ್ಲಿ ತುಂಬಿದ್ದಾರೆ ಎಂದು ಆರೋಪಿಸಿದರು.

</p><p>ಉನ್ನಾವೋದಲ್ಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರು ಭಾಗಿಯಾಗಿರುವ ಆರೋಪದ ಕುರಿತು ಪ್ರಸ್ತಾಪಿಸಿ, ‘ಬೇಟಿ ಬಚಾವೋ, ಬೇಟಿ ಪಡಾವೋ’  ಘೋಷಣೆ ಈಗ ಬಿಜೆಪಿ ಮತ್ತು ಬಿಜೆಪಿ ನಾಯಕರಿಂದ ಬೇಟಿ ಬಚಾವೋ(ಹೆಣ್ಣು ಮಕ್ಕಳನ್ನು ರಕ್ಷಿಸಿ) ಆಗಿದೆ ಎಂದು ಟೀಕಿಸಿದರು.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT