ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಬಿಳಿಯಲ್ಲೂ ಬಣ್ಣದ ನೆನಪುಗಳು

Last Updated 23 ಏಪ್ರಿಲ್ 2018, 20:24 IST
ಅಕ್ಷರ ಗಾತ್ರ

ರಾಜ್‌ ಅಂದ್ರೆ ಕನ್ನಡತನ, ಕನ್ನಡಿಗರ ಗುರುತು ಎಂಬಂತಾಗಿದ್ದು 80ರ ದಶಕದಲ್ಲಿ. 1983ರಲ್ಲಿ ನರನಾಡಿಗಳಲ್ಲಿ ಕನ್ನಡತನವನ್ನೇ ತುಂಬಿಕೊಂಡಿದ್ದ ಮುತ್ತಣ್ಣ ಅಂದು ರಕ್ತದಾನ ಮಾಡಿದರು. ರಕ್ತದಾನಕ್ಕೆ ಪ್ರೇರಣೆಯನ್ನೂ ನೀಡಿದರು. ವಿಧಾನಸೌಧದ ಮುಂದೆ ನಿಂತು, ಕನ್ನಡಿಗರ ಧ್ವನಿಯಾಗಿ ಮಾತನಾಡಿದಾಗ ಇಡೀ ಕರ್ನಾಟಕವೇ ಕಿವಿಯಾಗಿತ್ತು. 1984ರಲ್ಲಿ ಮೋದಿ ಆಸ್ಪತ್ರೆಯ ಆರಂಭೋತ್ಸವಕ್ಕೆ ರಾಜ್‌ ಮತ್ತು ಪಾರ್ವತಮ್ಮ ಜೋಡಿ ಹೋಗಿ, ಕಣ್ಣಿನ ಆರೋಗ್ಯ, ದೃಷ್ಟಿಯ ಮಹತ್ವವನ್ನು ಹೇಳಿ, ನೇತ್ರಚಿಕಿತ್ಸಾಶಿಬಿರಕ್ಕೆ ಚಾಲನೆ ನೀಡಿದ್ದರು. ರಾಜಣ್ಣನ ನಂತರವೂ ಅವರ ಕಂಗಳು ನಮ್ಮನ್ನೆಲ್ಲ ನೋಡುತ್ತಿವೆಯಲ್ಲ! ನೇತ್ರದಾನದ ಮಹತ್ವದ ಬಗ್ಗೆ ಕಣ್ತೆರೆಸಿದವರು ಅವರು. ರಾಜಕುಮಾರ್‌ ಹೆಸರಿನೊಂದಿಗೆ ಕರ್ನಾಟಕ ರತ್ನ ಬೆಸೆದಿದ್ದು 1992ರಲ್ಲಿ. ಎಸ್‌. ಎಂ. ಕೃಷ್ಣ, ರಾಜ್ಯಪಾಲ ಖುರ್ಷಿದ್‌ ಅಲಂ ಖಾನ್‌, ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಆ ಕ್ಷಣದಲ್ಲಿ ಅವರೊಟ್ಟಿಗೆ ಇದ್ದರು. ಚಿತ್ರ ಕಪ್ಪುಬಿಳುಪಾಗಿದ್ದರೂ ರಾಜಣ್ಣನ ಬದುಕಿನ ಬಣ್ಣಗಳೇ ಹಲವು.

**

1983ರ ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಕ್ತದಾನ ಮಾಡಿದ ರಾಜ್‌ಕುಮಾರ್‌

**

1984ರ ಏಪ್ರಿಲ್‌ 24ರಂದು ಮೋದಿ ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ

**

1992ರಲ್ಲಿ ರಾಜ್‌ ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ. ಎಸ್‌.ಎಂ.ಕೃಷ್ಣ, ಆಗಿನ ರಾಜ್ಯಪಾಲ ಖುರ್ಷಿದ್‌ ಅಲಾಂ ಖಾನ್‌, ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಇದ್ದಾರೆ.

**

1983ರ ರಾಜ್ಯೋತ್ಸವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಸೇರಿದ್ದ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಡಾ. ರಾಜ್‌ ಕುಮಾರ್‌

**

ಕನ್ನಡ ಧ್ವಜ ಹಿಡಿದಿರುವ ರಾಜ್‌

**

ರಾಜ್‌ಕುಮಾರ್, ಎನ್‌ಟಿಆರ್ ಮತ್ತು ನಾಗೇಶ್ವರ ರಾವ್

**

ಶಿವಾಜಿ ಗಣೇಶನ್, ಎಂಜಿಆರ್ ಮತ್ತು ರಾಜ್‌ಕುಮಾರ್

**

2009ರಲ್ಲಿ ರಾಜ್‌ಕುಮಾರ್ ನೆನಪಿನಲ್ಲಿ ಜಿಪಿಒ ಅಂಚೆಚೀಟಿ ಬಿಡುಗಡೆ ಮಾಡಿದಾಗ...

**

ಮೊಮ್ಮಗಳ (ಪುನೀತ್ ರಾಜ್‌ಕುಮಾರ್ ಮಗಳು) ಜತೆ ತಾತ–ಅಜ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT