ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಮುತ್ಸದ್ದಿಯೇ!

Last Updated 23 ಏಪ್ರಿಲ್ 2018, 19:43 IST
ಅಕ್ಷರ ಗಾತ್ರ

ಟಿ.ಕೆ. ತ್ಯಾಗರಾಜ್ ಅವರ ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಆರ್.ಕೆ. ದಿವಾಕರ ಬರೆದಿರುವ ಪತ್ರದ ಕುರಿತು (ವಾ.ವಾ., ಏ. 18) ಈ ಅಭಿಪ್ರಾಯ.

ಮಹಾತ್ಮ ಗಾಂಧಿ ಮುತ್ಸದ್ದಿಯಲ್ಲ, ಅವರೊಬ್ಬ ಸಂತ ಮತ್ತು ಫಕೀರ ಎಂಬ ದಿವಾಕರ ಅವರ ಅಭಿಪ್ರಾಯ ಭೋಳೆತನದ್ದು.

ಗಾಂಧೀಜಿ ಬರೀ ಸಂತನಾಗಿದ್ದರೆ, ಸುಭಾಷ್‌ ಚಂದ್ರ ಬೋಸ್ ಅವರು ಕಾಂಗ್ರೆಸ್‌ನ ಅಧ್ಯಕ್ಷರಾಗದಂತೆ ತಂತ್ರ ಏಕೆ ರೂಪಿಸುತ್ತಿದ್ದರು? ಕಾಂಗ್ರೆಸ್‌ನ ಪ್ರಾದೇಶಿಕ ಘಟಕಗಳ ಅಧ್ಯಕ್ಷರಲ್ಲಿ ಹೆಚ್ಚಿನವರು ಪಟೇಲ್ ಅವರು ಪ್ರಧಾನಿ ಆಗಲಿ ಎಂದು ಬಯಸಿದರೂ ಅವರೆಲ್ಲರ ಮನವೊಲಿಸಿ ನೆಹರೂ ಅವರನ್ನು ಪ್ರಧಾನಿ ಮಾಡಿದ್ದು ಗಾಂಧೀಜಿಯ ಮುತ್ಸದ್ದಿತನಕ್ಕೆ ನಿದರ್ಶನ. ಅದಕ್ಕೂ ಮೊದಲು ದೇಶದ ವಿಭಜನೆ ತಡೆಯಲು ಪ್ರಧಾನಿ ಪಟ್ಟವನ್ನು ಜಿನ್ನಾಗೆ ನೀಡಲು ಮುಂದಾಗಿದ್ದು ಸಹ ಗಾಂಧೀಜಿಯ ಮುತ್ಸದ್ದಿತನವೇ.

ಆತ್ಮಸಾಕ್ಷಿ ಮತ್ತು ಆತ್ಮಶುದ್ಧಿಯ ರಾಜಕಾರಣದಿಂದ ಎದುರಾಳಿಯ ಪಶುಬಲವನ್ನು ಮಣಿಸಬಹುದೆಂದು ತೋರಿಸಿಕೊಟ್ಟವರು ಗಾಂಧೀಜಿ. ಆದ್ದರಿಂದಲೇ ಅವರು ರಾಜಕಾರಣದಲ್ಲಿ, ರಾಜಕೀಯ ಹೋರಾಟಗಳಲ್ಲಿ ತಮಗೆ ಮಾದರಿ ಎಂದು ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್, ಒಬಾಮ ಮುಂತಾದವರು ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ತಾವೇ ಪಶುಬಲ ಪ್ರದರ್ಶಿಸುತ್ತಾ, ಆತ್ಮಸಾಕ್ಷಿರಹಿತ ರಾಜಕೀಯ ಮಾಡುತ್ತಿದ್ದಾರೆ. ಇಂಥವರ ಉಪವಾಸಗಳಿಗೆ ಬೆಲೆ ಇಲ್ಲ ಎಂದು  ತ್ಯಾಗರಾಜ್ ಹೇಳಿರುವುದು ಸರಿಯಾಗಿಯೇ ಇದೆ.

ಜಿ.ವಿ. ಆನಂದ್, ಬಾಗೇಪಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT