ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಓಟಗಾರರಿಗೆ ಪ್ರೋತ್ಸಾಹಧನ ಪ್ರೊಕ್ಯಾಮ್‌ ಸಂಸ್ಥೆ ನಿರ್ಧಾರ

Last Updated 23 ಏಪ್ರಿಲ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಏಪ್ರಿಲ್‌ 2018ರಿಂದ ಮಾರ್ಚ್‌ 2019ರ ಅವಧಿಯಲ್ಲಿ ನಡೆಯುವ ನಾಲ್ಕು ಪ್ರಮುಖ ಓಟದ ಸ್ಪರ್ಧೆಗಳಲ್ಲಿ ಉತ್ತಮ ಸಾಮರ್ಥ್ಯ ತೋರುವ ಭಾರತದ ಓಟಗಾರರಿಗೆ ಪ್ರೋತ್ಸಾಹಧನ ನೀಡಲು ಪ್ರೋಕ್ಯಾಮ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ನಿರ್ಧರಿಸಿದೆ.

ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ವಿಶ್ವ 10ಕೆ ಓಟ, ನವದೆಹಲಿಯಲ್ಲಿ ಜರುಗುವ ಡೆಲ್ಲಿ ಹಾಫ್‌ ಮ್ಯಾರಾಥಾನ್‌, ಕೋಲ್ಕತ್ತದಲ್ಲಿ ನಿಗದಿಯಾಗಿರುವ 25ಕೆ ಓಟ ಹಾಗೂ 2019ರಲ್ಲಿ ಮುಂಬೈನಲ್ಲಿ ಜರುಗುವ ಮುಂಬೈ ಮ್ಯಾರಾಥಾನ್‌ಗಳಲ್ಲಿ ಅಥ್ಲೀಟ್‌ಗಳು ತೋರುವ ಸಾಧನೆಯ ಆಧಾರದ ಮೇಲೆ ಈ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಧಕರಿಗೆ ಪ್ರೋಕ್ಯಾಮ್‌ ಪದಕ, ಹಾಗೂ ಅಥ್ಲೀಟ್‌ ಕಿಟ್‌ ನೀಡಲಾಗುವುದು ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT