ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಆರ್ಸೆನಲ್‌ ಕ್ಲಬ್‌ನಿಂದ ಜಾರಿದ ‘ಮಿನುಗುತಾರೆ’

Last Updated 23 ಏಪ್ರಿಲ್ 2018, 18:41 IST
ಅಕ್ಷರ ಗಾತ್ರ

ಲಂಡನ್‌: ಆರ್ಸೆನಲ್‌ ಫುಟ್‌ಬಾಲ್‌ ತಂಡದ ಕೋಚ್‌ ಹುದ್ದೆಗೆ ಅರ್ಸೆನ್‌ ವೆಂಗರ್‌ ಅವರು ವಿದಾಯ ಹೇಳುವ ನಿರ್ಧಾರದಿಂದ ‘ನಕ್ಷತ್ರವೊಂದು ಜಾರಿದಂತಾಗಿದೆ’ ಎಂದು ಅದೇ ತಂಡದ ಉಪ ಮುಖ್ಯಸ್ಥ ರಾಗಿದ್ದ ಡೇವಿಡ್‌ ಡೀನ್‌ ಬಣ್ಣಿಸಿದ್ದಾರೆ.

‘ವೆಂಗರ್‌ ಅವರು ಕೇವಲ ಆರ್ಸೆನಲ್‌ ಕ್ಲಬ್‌ಗೆ ಕೊಡುಗೆ ನೀಡಿಲ್ಲ. ಬದಲಿಗೆ ವಿಶ್ವ ಫುಟ್‌ ಬಾಲ್‌ ರಂಗಕ್ಕೆ ವಿಶೇಷ ಮೆರುಗು ತಂದುಕೊಟ್ಟಿದ್ದಾರೆ. ನಿಸ್ಸಂಶಯವಾಗಿ ಆರ್ಸೆನಲ್‌ ತಂಡದ ಶ್ರೇಷ್ಠ ಕೋಚ್‌ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ’ ಎಂದು ಡೀನ್‌ ಅಭಿಪ್ರಾಯಪಟ್ಟಿದ್ದಾರೆ. 

‘ಫುಟ್‌ಬಾಲ್‌ ಕ್ರೀಡೆಯ ಮಹತ್ವವನ್ನು ಅವರು ಹೆಚ್ಚಿಸಿದ ರೀತಿ ನಿಜಕ್ಕೂ ಮಾದರಿ. ಅವರ ಪ್ರಾಮಾಣಿಕತೆ, ಕೆಲಸದೆಡೆಗಿನ ಬದ್ಧತೆ, ಆಟಗಾರರೊಂದಿಗಿನ ಸಂಬಂಧ, ಯುವ ಆಟಗಾರರನ್ನು ಬೆಳೆಸಿದ ರೀತಿ...ಹೀಗೆ ಅವರ ಸಾಧನೆಯನ್ನು ಅಳೆಯುವುದು ಸಾಧ್ಯವಿಲ್ಲ.ವೆಂಗರ್‌ ಅವರು ಕೋಚ್‌ ಹುದ್ದೆಗೆ ನೇಮಕರಾಗುವ ಮುನ್ನ ಕ್ಲಬ್‌ಗೆ ಅಷ್ಟೇನೂ ಉತ್ತಮ ಹೆಸರಿರಲಿಲ್ಲ. ಅವರು ಎಲ್ಲವನ್ನೂ ಬದಲಾಯಿಸಿದರು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT