ಮ್ಯಾಡಿಸನ್‌ ಓಪನ್‌ ಸ್ಕ್ವಾಷ್‌ ಟೂರ್ನಿ

ಸೆಂಥಿಲ್‌ ಕುಮಾರ್‌ಗೆ ಪ್ರಶಸ್ತಿ

ಅಮೋಘ ಆಟ ಆಡಿದ ಭಾರತದ ವೇಲವನ್‌ ಸೆಂಥಿಲ್‌ಕುಮಾರ್‌, ಅಮೆರಿಕದಲ್ಲಿ ನಡೆದ ಮ್ಯಾಡಿಸನ್‌ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ವೇಲವನ್‌ ಅವರು ಪಿಎಸ್‌ಎ ವಿಶ್ವ ಟೂರ್‌ನಲ್ಲಿ ಗೆದ್ದ ಚೊಚ್ಚಲ ಟ್ರೋಫಿ ಇದಾಗಿದೆ.

ವೇಲವನ್‌ ಸೆಂಥಿಲ್‌ಕುಮಾರ್‌

ಚೆನ್ನೈ: ಅಮೋಘ ಆಟ ಆಡಿದ ಭಾರತದ ವೇಲವನ್‌ ಸೆಂಥಿಲ್‌ಕುಮಾರ್‌, ಅಮೆರಿಕದಲ್ಲಿ ನಡೆದ ಮ್ಯಾಡಿಸನ್‌ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ವೇಲವನ್‌ ಅವರು ಪಿಎಸ್‌ಎ ವಿಶ್ವ ಟೂರ್‌ನಲ್ಲಿ ಗೆದ್ದ ಚೊಚ್ಚಲ ಟ್ರೋಫಿ ಇದಾಗಿದೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ವೇಲವನ್‌ 7–11, 13–11, 12–10, 11–4ರಲ್ಲಿ ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್‌ ಐಸೆಲ್‌ ಅವರನ್ನು ಸೋಲಿಸಿದರು. ಈ ಹೋರಾಟ 57 ನಿಮಿಷ ನಡೆಯಿತು.

ಮೊದಲ ಗೇಮ್‌ನಲ್ಲಿ ಮುಗ್ಗರಿಸಿದ ವೇಲವನ್‌, ಎರಡನೇ ಗೇಮ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿದರು. ಮೂರು ಮತ್ತು ನಾಲ್ಕನೇ ಗೇಮ್‌ಗಳಲ್ಲೂ ಮೋಡಿ ಮಾಡಿದ ಭಾರತದ ಆಟಗಾರ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಮೊದಲ ಸುತ್ತಿನ ಹೋರಾಟದಲ್ಲಿ ಸೆಂಥಿಲ್‌, ಸ್ಪೇನ್‌ನ ಆಟಗಾರ ಬರ್ನಾಟ್‌ ಜೆಯುಮ್‌ಗೆ ಆಘಾತ ನೀಡಿದ್ದರು. ಬರ್ನಾಟ್‌ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಮಾರ್ಕ್‌ ಫುಲ್ಲರ್‌ ವಿರುದ್ಧ ಗೆದ್ದಿದ್ದ ಸೆಂಥಿಲ್‌, ಸೆಮಿಫೈನಲ್‌ನಲ್ಲಿ ಭಾರತದ ಆದಿತ್ಯ ಜಗತಾಪ್‌ ಅವರನ್ನು ಸೋಲಿಸಿದ್ದರು. ವೇಲವನ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 255ನೇ ಸ್ಥಾನದಲ್ಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ರಶೀದ್‌ ಖಾನ್‌ನನ್ನು ನಾವು ಬಿಟ್ಟುಕೊಡುವುದಿಲ್ಲ: ಪ್ರಧಾನಿ ಮೋದಿಗೆ ಆಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ ಟ್ವೀಟ್‌

ಐಪಿಎಲ್‌ – 2018
ರಶೀದ್‌ ಖಾನ್‌ನನ್ನು ನಾವು ಬಿಟ್ಟುಕೊಡುವುದಿಲ್ಲ: ಪ್ರಧಾನಿ ಮೋದಿಗೆ ಆಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ ಟ್ವೀಟ್‌

26 May, 2018
ಚಿನ್ನ ಗೆಲ್ಲುವ ಗುರಿ: ಕಮವೊರೊರ್‌

ವಿಶ್ವ 10ಕೆ ಓಟ
ಚಿನ್ನ ಗೆಲ್ಲುವ ಗುರಿ: ಕಮವೊರೊರ್‌

26 May, 2018

ಫುಟ್‌ಬಾಲ್ ಆಟಗಾರ
ಇಬ್ಬರೊಂದಿಗೆ ವಿವಾಹವಾಗಲಿರುವ ರೊನಾಲ್ಡಿನೊ

ಬ್ರೆಜಿಲ್‌ನ ಹಿರಿಯ ಫುಟ್‌ಬಾಲ್ ಆಟಗಾರ ರೊನಾಲ್ಡಿನೊ ಅವರು ತಮ್ಮ ಇಬ್ಬರು ಪ್ರೇಯಸಿಯರಾದ ಪ್ರಿಸಿಲ್ಲಾ ಕೊಲ್ಹೊ ಮತ್ತು ಬಿಟ್ರಿಜ್ ಸೌಜಾ ಅವರ ಒಂದೇ ದಿನ ಮದುವೆಯಾಗಲಿದ್ದಾರೆ! ...

26 May, 2018
ಫೈನಲ್‌ಗೆ ಸನ್‌ರೈಸರ್ಸ್‌ ಹೈದರಾಬಾದ್‌

ಎರಡನೇ ಕ್ವಾಲಿಫೈಯರ್‌
ಫೈನಲ್‌ಗೆ ಸನ್‌ರೈಸರ್ಸ್‌ ಹೈದರಾಬಾದ್‌

26 May, 2018

ಬ್ಯಾಡ್ಮಿಂಟನ್‌
ಚೀನಾಗೆ ಆಘಾತ ನೀಡಿದ ಥಾಯ್ಲೆಂಡ್‌

ಥಾಯ್ಲೆಂಡ್‌ನ ಮಹಿಳಾ ತಂಡದವರು ಶುಕ್ರವಾರ ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.

26 May, 2018