ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ಕ್ಕೆ ಸೃಷ್ಟಿ ವಿಶ್ವ ಸುವರ್ಣ ಉತ್ಸವ

Last Updated 23 ಏಪ್ರಿಲ್ 2018, 19:19 IST
ಅಕ್ಷರ ಗಾತ್ರ

ಬೆಂಗಳೂರು: ಸೃಷ್ಟಿ ನೃತ್ಯ ಸಂಸ್ಥೆಗೆ 50 ವರ್ಷವಾದ ಹಾಗೂ ಅದರ ನಿರ್ದೇಶಕರಾದ ಎ.ವಿ. ಸತ್ಯನಾರಾಯಣ ಅವರಿಗೆ 70 ವರ್ಷವಾದ ಸ್ಮರಾರ್ಥ ‘ಸೃಷ್ಟಿ ವಿಶ್ವ ಸುವರ್ಣ ಸಂಗೀತ, ನೃತ್ಯ, ನಾಟಕ ಉತ್ಸವ’ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯನಾರಾಯಣ, ‘ಇದೇ 29ಕ್ಕೆ ಈ ಉತ್ಸವ ಆರಂಭವಾಗುತ್ತದೆ.  2019ರ ಆಗಸ್ಟ್‌ 3ರಂದು ನನ್ನ ಜನ್ಮದಿನದಂದು ಮುಕ್ತಾಯವಾಗುತ್ತದೆ. 50 ದಿನಗಳಲ್ಲಿ 70 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮೊದಲ ಹಂತದಲ್ಲಿ 9 ದಿನಗಳ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

‘ನಗರದಲ್ಲಿ 5 ದಿನಗಳು ಕಾರ್ಯಕ್ರಮ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಹೊರನಾಡು, ಶೃಂಗೇರಿಯಲ್ಲಿ ನೃತ್ಯ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಮೇ 3ರಂದು ಮೊದಲ ಹಂತದ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ಈ ವೇಳೆ ಪದ್ಮಶ್ರೀ ಕಲಾಮಂಡಲಂ ಗೋಪಿ ಅವರಿಗೆ ರಾಷ್ಟ್ರೀಯ ನೃತ್ಯ ಸಾಧಕ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ₹50,000 ನಗದು ಹಾಗೂ ಫಲಕವನ್ನು ಒಳಗೊಂಡಿದೆ’ ಎಂದರು.

‘ಎರಡನೇ ಹಂತದ ಕಾರ್ಯಕ್ರಮ ನವರಾತ್ರಿಯಲ್ಲಿ ಯೋಜಿಸಿದ್ದು, 9 ದಿನಗಳ ಡಾಂಡಿಯಾ ಉತ್ಸವ ನಡೆಯಲಿದೆ. ನಂತರ ದೆಹಲಿ ಹಾಗೂ ಗೋವಾದಲ್ಲಿ ಉತ್ಸವ ಹಮ್ಮಿಕೊಂಡಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT