ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಲಾಸ್ಟಿಕ್‌ ಹಾವಳಿ: ಶೀಘ್ರ ಕ್ರಮ’

ವಕೀಲರ ಸಂಘದಲ್ಲಿ ಭೂಮಿ ಉಳಿಸಿ ದಿನಾಚರಣೆ
Last Updated 24 ಏಪ್ರಿಲ್ 2018, 6:35 IST
ಅಕ್ಷರ ಗಾತ್ರ

ಬಳ್ಳಾರಿ:  ‘ನಗರದಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್‌ ಕಸ ಕಂಡುಬರುತ್ತಿದ್ದು,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ ತಿಳಿಸಿದರು.

ನಗರದ ವಕೀಲರ ಭವನದಲ್ಲಿ ಇಲಾಖೆಯು ಮಂಡಳಿಯ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ‘ಭೂಮಿ ಉಳಿಸಿ’ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

‘ಪ್ಲಾಸ್ಟಿಕ್‌ನಿಂದ ಭೂಮಿಯನ್ನು ರಕ್ಷಿಸಿ ಎಂಬುದು ಈ ಬಾರಿ ಭೂಮಿ ಉಳಿಸಿ ದಿನಾಚರಣೆಯ ಧ್ಯೇಯವಾಕ್ಯ. ಇಡೀ ವಿಶ್ವದಲ್ಲಿ ಪ್ಲಾಸ್ಟಿಕ್‌ ಕಸವು ಜೀವ ಸಂಕುಲವನ್ನು ಕೊಲ್ಲುತ್ತಿದೆ. ಅದಕ್ಕೆ ಆಧುನಿಕ ಜೀವನಶೈಲಿಯೇ ಕಾರಣ’ ಎಂದು ಅವರು ಅಭಿಪ್ರಾಯಪಟ್ಟರು.

‘ನಿಗದಿತ ಮಾನದಂಡ ಮೀರಿದ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುತ್ತಿರುವುದು, ಎಲ್ಲ ಪ್ಲಾಸ್ಟಿಕ್‌ ಕಸವನ್ನು ಸಮರ್ಪಕ ವಿಲೇವಾರಿ ಮಾಡದೇ ಇರುವುದು ನಗರದಲ್ಲಿ ಎದ್ದು ಕಾಣುವ ಸಮಸ್ಯೆ. ಈ ಬಗ್ಗೆ ಪಾಲಿಕೆ ಮತ್ತು ಮಂಡಳಿಯೊಂದಿಗೆ ಚರ್ಚಿಸಲಾಗುವುದು’ ಎಂದರು.

ಅತಿ ಆಸೆ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಬಿ.ಸಿ.ಬಿರಾದಾರ, ‘ಮಾನವ ತನ್ನ ದುರಾಸೆಗಳಿಂದ ಭೂಮಿ ಹಾಗೂ ಕಾಡನ್ನು ದುರ್ಬಳಕೆ ಮಾಡಿಕೊಂಡಿದ್ದು ಅದರ ದುಷ್ಪರಿಣಾಮಗಳನ್ನು ಎಲ್ಲರೂ ಎದುರಿಸುತ್ತಿದ್ದೇವೆ. ತಾಯಿ ಸಮಾನವಾದ ಭೂಮಿಯ ಸಂರಕ್ಷಣೆ ಎಲ್ಲರ ತುರ್ತು ಹೊಣೆ’ ಎಂದು ಪ್ರತಿಪಾದಿಸಿದರು.

ಸಾಮಾಜಿಕ ಅರಣ್ಯ ಅಧಿಕಾರಿ ಡಾ.ಮಾಲತಿ ಪ್ರಿಯ ರಮೇಶ, ‘ಕಾಡು ಎಂದರೆ ಎಲ್ಲೋ ದೂರದಲ್ಲಿರುವ ಮರಗಳ ಗುಂಪು ಎಂಬುದು ಸೀಮಿತ ತಿಳಿವಳಿಕೆ. ನಮ್ಮ ನಡುವೆಯೇ ದಟ್ಟ ಮರಗಳನ್ನು ಬೆಳೆಸಿದರೆ ಅದೂ ಕಾಡಿನ ಪ್ರತಿರೂಪ. ಅಂಥ ವಾತಾವರಣನ್ನು ನಿರ್ಮಿಸುವ ಕೆಲಸ ನಿರಂತರವಾಗಿ ನಡೆಯುಬೇಕು’ ಎಂದರು.

ನ್ಯಾಯಾಧೀಶರಾದ ಖಾಸಿಂ ಚೂರಿಖಾನ್, ರಾಜಸೋಮಶೇಖರ, ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್, ಪರಿಸರ ಅಧಿಕಾರಿ ದೊಡ್ಡನಾಣಯ್ಯ, ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬದರಿನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT