ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ರುಚಿಕರ ಐಸ್ ಕ್ರೀಮ್ ಮತ್ತು ಕುಲ್ಫಿಗಳು

Last Updated 25 ಏಪ್ರಿಲ್ 2018, 13:26 IST
ಅಕ್ಷರ ಗಾತ್ರ

ವೀಳ್ಯದೆಲೆ ಕುಲ್ಫಿ

ಬೇಕಾಗುವ ವಸ್ತುಗಳು: 1 ಲೀಟರ್ ಹಾಲು, 3-4 ಚಮಚ ಹಾಲಿನ ಪುಡಿ, 2 ಏಲಕ್ಕಿ, ಸ್ವಲ್ಪ ಬಾದಾಮಿ, ಳಿ ಚಮಚ ಸೋಂಪು, 3 ವೀಳ್ಯದೆಲೆ, 1 ಚಮಚ ಗುಲ್ಕನ್, 2 ಚಮಚ ಸಕ್ಕರೆ, 1 ಚಮಚ ಪಿಸ್ತಾ ಚೂರುಗಳು.

ಮಾಡುವ ವಿಧಾನ: ವೀಳ್ಯದೆಲೆಯ ತೊಟ್ಟು, ನಾರು ತೆಗೆದು ಸಣ್ಣಗೆ ಚೂರು ಮಾಡಿ ಕುಟ್ಟಾಣಿಗೆ ಹಾಕಿ ಗುದ್ದಿಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಹಾಲು ಹಾಕಿ ಕುದಿಸಿ. ಳಿ ಲೀಟರ್ ಪ್ರಮಾಣಕ್ಕೆ ಹಾಲು ಬಂದಾಗ ಹಾಲಿನ ಪುಡಿ, ಸಕ್ಕರೆ, ಏಲಕ್ಕಿ, ಸೋಂಪು, ಬಾದಾಮಿ, ಪಿಸ್ತಾ ಚೂರು ಹಾಕಿ ಕೆಳಗಿಳಿಸಿ. ಹಾಲು ತಣ್ಣಗಾದ ಮೇಲೆ ಗುಲಕನ್, ವೀಳ್ಯದೆಲೆ ಚೂರು ಹಾಕಿ ಸರಿಯಾಗಿ ಬೆರೆಸಿ. ನಂತರ ಕುಲ್ಫಿ ಮೋಲ್ಡ್ ಯಾ ಗ್ಲಾಸಿಗೆ ಹಾಕಿ ಫ್ರೀಜರ್ ನಲ್ಲಿಡಿ. 2 ಗಂಟೆ ನಂತರ ಐಸ್ ಕ್ರೀಮ್ ಕಡ್ಡಿ ಚುಚ್ಚಿ 6-8 ಗಂಟೆ ಫ್ರಿಜರ್ ನಲ್ಲಿಟ್ಟು ತೆಗೆದರೆ ರುಚಿಯಾದ ವೀಳ್ಯದೆಲೆ ಕುಲ್ಫಿ ಸವಿಯಲು ಸಿದ್ಧ.

ಸೇಬಿನ ಐಸ್ ಕ್ರೀಮ್‌ ಬೇ

ಬೇಕಾಗುವ ವಸ್ತುಗಳು: 2 ಸೇಬು, 4 ಚಮಚ ಸಕ್ಕರೆ ಪುಡಿ, 4 ಕಪ್ ಕಂಡೆನ್ಸ್ಡ್ ಹಾಲು, 2 ಕಪ್ ಹಾಲು.
ಮಾಡುವ ವಿಧಾನ: ಸೇಬು ಹಣ್ಣನ್ನು ತೊಳೆದು, ಸಿಪ್ಪೆ ತೆಗೆದು, ಸಣ್ಣಗೆ ತುಂಡು ಮಾಡಿ. ಅದಕ್ಕೆ ಸಕ್ಕರೆ ಸೇರಿಸಿ ಮಿಶ್ರಣ ತಯಾರಿಸಿ. ಅದನ್ನು 1 ಗಂಟೆ ಫ್ರಿಜರಿನಲ್ಲಿಡಿ. ಬಳಿಕ ಹೊರ ತೆಗೆದು ಮತ್ತೆ ರುಬ್ಬಿದರೆ ಮಿಶ್ರಣ ಮೃದುವಗುತ್ತದೆ. ನಂತರ 4 ಗಂಟೆ ಫ್ರಿಜರಿನಲ್ಲಿಟ್ಟು ಬಳಿಕ ಹೊರ ತೆಗೆದರೆ ರುಚಿಯಾದ ಪೌಷ್ಟೀಕ ಸೇಬಿನ ಐಸ್ ಕ್ರೀಮ್ ಸವಿಯಲು ಸಿದ್ಧ.

ವೀಳ್ಯದೆಲೆ ಮಿಲ್ಕ್ ಶೇಕ್ಬೇ

ಬೇಕಾಗುವ ವಸ್ತುಗಳು: 1-2 ವೀಳ್ಯದೆಲೆ ಚೂರುಗಳೂ, 1 ಸಣ್ಣ ಅಡಿಕೆ ತುಂಡು, 2 ಚಮಚ ಕೆಂಪು ಕಲ್ಲು ಸಕ್ಕರೆ, 2 ಚಮಚ ವೆನಿಲಾ ಐಸ್ ಕ್ರೀಮ್, 1 ಕಪ್ ಹಾಲು.
ಮಾಡುವ ವಿಧಾನ: ವೀಳ್ಯದೆಲೆ ಚೂರುಗಳೂ, ಅಡಿಕೆ ತುಂಡು, ವೆನಿಲಾ ಐಸ್ ಕ್ರೀಮ್, ಸ್ವಲ್ಪ ಹಾಲು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಉಳಿದ ಹಾಲು ಹಾಕಿ ಬೆರೆಸಿ ಗ್ಲಾಸಿಗೆ ಹಾಕಿ ಕುಡಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT