ಶುಕ್ರವಾರ, 19 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ್‌ ದತ್‌ ಜೀವನಚರಿತ್ರೆ ‘ಸಂಜು’ ಟೀಸರ್‌ ಬಿಡುಗಡೆ

Last Updated 24 ಏಪ್ರಿಲ್ 2018, 10:14 IST
ಅಕ್ಷರ ಗಾತ್ರ

ಬೆಂಗಳೂರು: ಸಂಜಯ್‌ ದತ್‌ ಜೀವನವನ್ನಾಧರಿಸಿದ ಸಂಜು ಸಿನಿಮಾದ ಟೀಸರ್‌ ಮಂಗಳವಾರ ಬಿಡುಗಡೆಯಾಗಿದೆ.

ಒನ್‌ ಮ್ಯಾನ್‌...ಮೆನಿ ಲೈವ್ಸ್‌ ಅಡಿ ಬರಹ ಹೊಂದಿರುವ ಸಂಜು ಸಿನಿಮಾದಲ್ಲಿ ರಣಬೀರ್‌ ಕಪೂರ್‌ ಥೇಟ್‌ ಸಂಜಯ ದತ್‌ ತದ್ರೂಪಿಯಂತೆ ಕಾಣುತ್ತಾರೆ. ಬದುಕಿನ ವಿವಿಧ ಮಜಲುಗಳಲ್ಲಿ ಸಂಜರ್‌ ದತ್‌ ಅವತಾರಗಳನ್ನು ಟೀಸರ್‌ನಲ್ಲಿ ಸ್ಫುಟವಾಗಿ ಪೋಣಿಸಲಾಗಿದೆ.

ರಣಬೀರ್‌ ಸಂಜಯ್‌ ದತ್‌ ಪಾತ್ರದಲ್ಲಿ ಹಾಗೂ ಸಂಜಯ್‌ ದತ್‌ ಅವರ ಪತ್ನಿ ಮಾನ್ಯತಾ ದತ್‌ ಪಾತ್ರದಲ್ಲಿ ದಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್‌ ಹಿರಾನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಿನಿಮಾದೊಂದಿಗೆ ಹಗರಣ, ನೋವು, ಜೈಲು, ಟೀಕೆ,...ಹೀಗೆ ಸಂಜತ್‌ ದತ್‌ ಅವರ ಕಾಣದ ಮುಖಗಳು ಇಲ್ಲಿ ತೆರೆದುಕೊಳ್ಳುತ್ತವೆ. ಏ.27ರಂದು ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದ್ದು, ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.

ಅನುಷ್ಕಾ ಶರ್ಮಾ, ಸೋನಮ್‌ ಕಪೂರ್‌, ಪರೇಶ್‌ ರಾವಲ್‌, ಬೊಮನ್‌ ಇರಾನಿ, ಮನಿಷಾ ಕೊಯಿರಾಲಾ ಸೇರಿ ಹಲವು ಪ್ರಮುಖ ಕಲಾವಿದರ ಅಭಿನಯವಿದೆ. ಸಿನಿಮಾ ಬಿಡುಗಡೆ ಜೂನ್‌ 29ಕ್ಕೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT