ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾಂಗ್ರೆಸ್‌ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ

ದೊಡ್ಡನಗೌಡ ಪಾಟೀಲ, ಅಮರೇಗೌಡ ಬಯ್ಯಾಪುರ ನಾಮಪತ್ರ ಸಲ್ಲಿಕೆ
Last Updated 24 ಏಪ್ರಿಲ್ 2018, 10:54 IST
ಅಕ್ಷರ ಗಾತ್ರ

ಕುಷ್ಟಗಿ: ಈ ಕ್ಷೇತ್ರದ ವಿಧಾನಸಭಾ ಚುನಾವಣೆ ಕಾವು ಪಡೆದುಕೊಳ್ಳುತ್ತಿದ್ದು ಸೋಮವಾರ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಪಟ್ಟಣದಲ್ಲಿ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ಬಿಜೆಪಿ ಅಭ್ಯರ್ಥಿಯಾಗಿ ದೊಡ್ಡನಗೌಡ ಪಾಟೀಲ ಈ ಹಿಂದೆ ಎರಡು ನಾಮಪತ್ರ ಸಲ್ಲಿಸಿದ್ದರೆ ಸೋಮವಾರ ಮೂರನೇ ಬಾರಿ ನಾಮಪತ್ರ ಸಲ್ಲಿಸಿದರು.

ಅದೇ ರೀತಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಅಮರೇಗೌಡ ಬಯ್ಯಾಪುರ ಸೋಮವಾರ ಎರಡನೇ ಬಾರಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಿಲಾರಟ್ಟಿಯ ಬಾಲಪ್ಪ ಯಾದವ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಪಕ್ಷದಿಂದ ಪ್ರಭಾಕರಗೌಡ ಅಮ್ಮಣ್ಣವರ ನಾಮಪತ್ರ ಸಲ್ಲಿಸಿದರು ಚುನಾವಣಾಧಿಕಾರಿ ಪಿ.ಬಿ.ಪ್ರಶಾಂತ್‌, ಸಹಾಯಕ ಚುನಾವಣಾಧಿಕಾರಿ
ಎಚ್‌.ವಿಶ್ವನಾಥ್‌ ನಾಮಪತ್ರ ಸ್ವೀಕರಿಸಿದರು.

ಮೆರವಣಿಗೆ: ತಮ್ಮ ಬಲಾಬಲ ಪ್ರದರ್ಶನಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರತ್ಯೇಕ ಮೆರವಣಿಗೆ ಆಯೋಜಿಸಿದ್ದವು. ಅಡವಿರಾಯ ದೇವಸ್ಥಾನದಿಂದ ಬಿಜೆಪಿ ಮೆರವಣಿಗೆ ಮತ್ತು ಬುತ್ತಿಬಸವೇಶ್ವರ ದೇವಸ್ಥಾನದಿಂದ ಕಾಂಗ್ರೆಸ್‌ ಪಾದಯಾತ್ರೆ ಹಮ್ಮಿಕೊಂಡಿದ್ದವು. ಪೊಲೀಸ್‌ ಮೂಲಗಳ ಪ್ರಕಾರ ತಲಾ ಅಂದಾಜು ಹದಿನೈದು ಸಾವಿರ ಸಂಖ್ಯೆಯಲ್ಲಿ ಎರಡೂ ಪಕ್ಷಗಳಿಗೆ ಸೇರಿದ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಸೇರಿದ ಜನ ಪಾಲ್ಗೊಂಡಿದ್ದರು. ಬೆಂಬಲಿಗರನ್ನು ಕರೆಯಿಸುವುದಕ್ಕೆ ಎರಡೂ ಪಕ್ಷಗಳು ವಾಹನಗಳ ವ್ಯವಸ್ಥೆ ಕಲ್ಪಿಸಿದ್ದವು. ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಬಂದವರಿಗೆ ಕೇವಲ ಕುಡಿಯುವ ನೀರಿನ ವ್ಯವಸ್ಥೆ ಮಾತ್ರ ಕಲ್ಪಿಸಲಾಗಿತ್ತು.

ಹರಸಾಹಸ: ಏಕಕಾಲದಲ್ಲಿ ಎರಡೂ ಪಕ್ಷಗಳ ಮೆರವಣಿಗೆ ಆರಂಭಗೊಂಡಿದ್ದರಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸುವಲ್ಲಿ ಪೊಲೀಸರು ಹರಸಾಹಸ ನಡೆಸ ಬೇಕಾ ಯಿತು.

ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಬಂದ ಕಾರಣ ಅನೇಕ ತಾಸುಗಳವರೆಗೆ ವಾಹನ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದರು. ಮದುವೆ, ಆಸ್ಪತ್ರೆ ಮತ್ತಿತರ ಕಾರಣಗಳಿಗಾಗಿ ವಾಹನಗಳು, ಸರ್ಕಾರಿ, ಖಾಸಗಿ ಬಸ್‌ಗಳಲ್ಲಿ ಬಂದಿದ್ದ ಸಾರ್ವಜನಿಕರು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದರಿಂದ ಪರದಾಡಿದರು.

ಭಾರಿ ಸಂಖ್ಯೆ ಜನರು ಬಂದಿದ್ದರಿಂದ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಜನಸಂದಣಿ ಕಂಡುಬಂದರೆ ಪಕ್ಷಗಳ ಬಾವುಟಗಳು ರಾರಾಜಿಸಿದವು. ಅಭ್ಯರ್ಥಿಗಳ ಪರ ವಾಗಿ ಪ್ರಚಾರ ವಾಹನ ಭರಾಟೆ ಜೋರಾಗಿತ್ತು. ಬಿಸಿಲು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ
ಕುಣಿದು ಕುಪ್ಪಳಿಸುತ್ತಿದ್ದುದು ಕಂಡುಬಂದಿತು.

ಮದ್ಯ ಮಾರಾಟ ಜೋರು: ಸಾರ್ವಜನಿಕ ಸ್ಥಳಗಳಲ್ಲಿರುವ ಮದ್ಯದ ಅಂಗಡಿಗಳಲ್ಲಿ ಪಕ್ಷದ ಶಾಲು ಹೊಂದಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ಕಂಡುಬಂದರು. ಮದ್ಯದ ವ್ಯಾಪಾರ ಭರ್ಜರಿ ಯಾಗಿತ್ತು. ಮಾರಾಟಕ್ಕೆ ಮಾತ್ರ ಪರವಾನಗಿ ಇದ್ದರೂ ಸ್ಥಳದಲ್ಲಿ ಮದ್ಯ ಸೇವನೆಗೆ ಅಂಗಡಿಯವರು ಅವಕಾಶ ಕಲ್ಪಿಸಿ ನಿಯಮ ಉಲ್ಲಂಘಿಸಿ ದರು ಚುನಾವಣಾ ಸಂಚಾರ ದಳದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು ಎಂದು ಸಾರ್ವಜನಿಕರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT