ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದಗಲ್‌: ಚೆಕ್‌ಪೋಸ್ಟ್‌ನಲ್ಲಿ ಬಿಗಿ ಭದ್ರತೆ

Last Updated 24 ಏಪ್ರಿಲ್ 2018, 11:40 IST
ಅಕ್ಷರ ಗಾತ್ರ

ಮುದಗಲ್: ಬೆಳ್ಳಿಹಾಳ ಹಾಗೂ ಛತ್ತರ ಗ್ರಾಮದ ಬಳಿ ಚೆಕ್‌ಪೋಸ್ಟ್‌ ವ್ಯವಸ್ಥೆ ಮಾಡಲಾಗಿದ್ದು, ಚುನಾವಣಾ ಅಕ್ರಮ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಲಾಗುತ್ತಿದ್ದು, ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದಾಖಲಾತಿ ರಹಿತ ಹಣ ಮತ್ತು ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಯಾವುದೇ ಅಕ್ರಮ ನಡೆಯದಂತೆ ಚೆಕ್‌ಪೋಸ್ಟ್‌ ಸಿಬ್ಬಂದಿ ನಿಗಾ ವಹಿಸಿದ್ದಾರೆ.

ಇಲಕಲ್ ಕಡೆಯಿಂದ ಮುದಗಲ್‌ಗೆ ಬರಲು ಬಾಗಲಕೋಟೆ ಮುಖ್ಯರಸ್ತೆಯ ಕನಸಾವಿ ಕ್ರಾಸ್ ಹತ್ತಿರ ಜಿಲ್ಲೆಯ ಗಡಿ ಸೀಮೆ ಆರಂಭವಾಗುತ್ತದೆ. ಇದೇ ಜಾಗದಲ್ಲಿ ಲಿಂಗಸುಗೂರಿಗೆ ಸೇರಲು ಎರಡು ಒಳ ದಾರಿಗಳು ಆರಂಭವಾಗುತ್ತವೆ. ಕನಸಾವಿ ಕ್ರಾಸ್ ದಿಂದ ಲೆಕ್ಕಿಹಾಳ ಬೊಮ್ಮನಾಳ, ಖೈರವಾಡಗಿ, ಮಾವಿಬಾವಿ ಮೂಲಕ ಲಿಂಗಸುಗೂರು ಸೇರುತ್ತಿದೆ. ಉತ್ತಮ ಸಂಪರ್ಕ ರಸ್ತೆ ಇದೆ. ಇನ್ನೊಂದು ಕನಸಾವಿ ಕ್ರಾಸ್ ದಿಂದ ಕೊಮಲಾಪುರು, ಬ್ಯಾಲಿಹಾಳ, ಹೂನೂರು, ಮಾಕಾಪುರು, ಬನ್ನಿಗೋಳ ಮೂಲಕ ಮುದಗಲ್ ಪಟ್ಟಣಕ್ಕೆ ಸೇರುವ ದಾರಿಗಳಿವೆ. ಅಲ್ಲಿಯೂ ನಿಗಾ ವಹಿಸಲಾಗಿದೆ.

‘ಮುದಗಲ್ ಭಾಗದ ಬೆಳ್ಳಿಹಾಳ ಮತ್ತು ಛತ್ತರ ಗ್ರಾಮದಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಗೆ ಸಮರ್ಪಕ ಭದ್ರತೆ ಇಲ್ಲದಂತಾಗಿದೆ. ರಸ್ತೆ ಪಕ್ಕದಲ್ಲಿ ಬಿದರಿನ ತಟ್ಟಿಹಾಕಿ ಶೆಡ್ಡ್ ನಿರ್ಮಿಸಲಾಗಿದೆ. ಮಳೆ, ಗಾಳಿಗೆ ರಕ್ಷಣೆ ಇಲ್ಲದಂತಾಗಿದೆ.

ಅಲ್ಲಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಚೆಕ್ ಪೊಸ್ಟ್‌ಗಳಲ್ಲಿ ನೇಮಿಸಿದ ಸಿಬ್ಬಂದಿಗೆ ತಪಾಸಣೆ ಸಾಮಗ್ರಿ, ರಕ್ಷಣೆಗೆ ಆಯುಧ ನೀಡಬೇಕು’ ಎಂದು ಸಾರ್ವಜನಿಕರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT