ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿ’

ಉದ್ಯೋಗ ಸೃಷ್ಟಿ, ಉತ್ತಮ ಆಡಳಿತ, ರೈತರ ಪರವಾದ ಯೋಜನೆಗಳಿಗೆ ಜೆಡಿಎಸ್‌ ಬೆಂಬಲಿಸಲು ಆಗ್ರಹ
Last Updated 24 ಏಪ್ರಿಲ್ 2018, 11:44 IST
ಅಕ್ಷರ ಗಾತ್ರ

ಕನಕಪುರ: ಜಾತ್ಯತೀತ ಜನತದಳದ ಅಭ್ಯರ್ಥಿ ನಾರಾಯಣಗೌಡ ಕುಟುಂಬ ಸಮೇತರಾಗಿ, ಅಪಾರ ಬೆಂಬಲಿಗ ರೊಂದಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.

ಚುನಾವಣೆಯ ಪ್ರಕ್ರಿಯೆಯ ಪ್ರಾರಂಭದಿಂದಲೂ ಕ್ಷೇತ್ರದಲ್ಲಿದಲ್ಲಿ ಡಿ.ಎಂ. ವಿಶ್ವನಾಥ್‌ ಅಭ್ಯರ್ಥಿಯೆಂದೇ ಹೇಳಲಾಗುತ್ತಿತ್ತು. ಆದರೆ, ಅಂತಿಮ ವೇಳೆಗೆ ವಿಶ್ವನಾಥ್‌ ಬದಲಾಗಿ ನಾರಾಯಣಗೌಡ ಅವರಿಗೆ ಪಕ್ಷವು ಬಿ. ಫಾರಂ ನೀಡಿತ್ತು.

ನಾರಾಯಣಗೌಡರು ಧರ್ಮಪತ್ನಿ ಲಕ್ಷ್ಮೀ ಹಾಗೂ ಪಕ್ಷದ ಮುಖಂಡರೊಂದಿಗೆ ಕೆಂಕೇರಮ್ಮ ದೇವಿ, ಕಲ್ಲಹಳ್ಳಿ ಶ್ರೀನಿವಾಶ, ದೇಗುಲಮಠ ಮತ್ತು ಮರಳೇಗವಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಎತ್ತಿನಗಾಡಿಯಲ್ಲಿ ಮೆರವಣಿಗೆಯ ಮೂಲಕ ಬೆಂಬಲಿಗ ರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಬಿ.ಜೆ. ಉಮೇಶ್‌ ಅವರಿಗೆ ಸುಮಾರು 2 ಗಂಟೆಗೆ ಎರಡು ನಾಮಪತ್ರಗಳನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಪತ್ನಿ ಲಕ್ಷ್ಮೀ ನಾರಾಯಣಗೌಡ, ವಕೀಲರಾದ ಮುತ್ತೇಗೌಡ, ದೇವುರಾವ್‌ ಜಾದವ್‌, ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ. ನಾಗರಾಜು ಅಭ್ಯರ್ಥಿ ಜತೆಗಿದ್ದರು. ಬಹುಜನ ಸಮಾಜ ಪಕ್ಷದ ಪ್ರಮುಖ ಮುಖಂಡರು ನಾರಾಯಣಗೌಡರ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ನಾರಾಯಣಗೌಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು 5 ವರ್ಷಗಳ ಅವಧಿಯಲ್ಲಿ ರೈತ ವಿರೋಧಿಯಾಗಿ ನಡೆದುಕೊಂಡಿದೆ. ಕಾಂಗ್ರೆಸ್‌ನ ದುರಾಡಳಿತದಿಂದ ರೋಸಿಹೋಗಿರುವ ಜನತೆ ಈ ಬಾರಿ ಬದಲಾವಣೆಯನ್ನು ಬಯಸಿ ರೈತ ಪರವಾದ ಕುಮಾರಣ್ಣನ ಸರ್ಕಾರವನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ ಎಂದರು.

‘ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ರೈತನ ಮಗನಾದ ನನಗೆ ದೇವೇಗೌಡರು ಮತ್ತು ಕುಮಾರಣ್ಣ ಅಭಿಮಾನದಿಂದ ಟಿಕೆಟ್‌ ನೀಡಿದ್ದಾರೆ. ಅವರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಕುಮಾರಣ್ಣ ತಮ್ಮ ಆಡಳಿತ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಿ ದ್ದಾರೆ. ಮುಂದೆ ಅವರ ಸರ್ಕಾರದಲ್ಲಿ ಉದ್ಯೋಗ ಸೃಷ್ಟಿ, ಉತ್ತಮ ಆಡಳಿತ, ರೈತರ ಪರವಾದ ಯೋಜನೆಗಳನ್ನು ಜಾರಿಗೊಳಿಸುವ ಸಮೃದ್ಧ ಕರ್ನಾ ಟಕವನ್ನು ಮುನ್ನಡೆಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT