ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರನ್ನು ಬೆಂಬಲಿಸಲಿ?

Last Updated 24 ಏಪ್ರಿಲ್ 2018, 16:40 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ಹಾದಿ ದುರ್ಗಮವಾಗಿದೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕಾಂಗ್ರೆಸ್ ಮತ್ತು ಸೋಷಲಿಸ್ಟ್‌ ಪಕ್ಷಗಳ ನಡುವೆ ಹಣಾಹಣಿ ನಡೆದಿತ್ತು. ಈಗ ಅನೇಕ ಪಕ್ಷಗಳಿವೆ. ಆದರೂ ಬಡ ಬೋರೇಗೌಡನ ಬದುಕು ಸುಧಾರಿಸಿಲ್ಲ.

ಒಂದೆಡೆ ಅರ್ಹತೆಯನ್ನು ಹಿಂದಿಕ್ಕುವ ಮೀಸಲಾತಿ, ಇನ್ನೊಂದೆಡೆ ವಂಶಪಾರಂಪರ್ಯ ಆಡಳಿತ. ರಾಜಕಾರಣಿಗಳು ಕೋಟ್ಯಧೀಶರಾದರೇ ವಿನಾ, ದೇಶದ ಸ್ಥಿತಿ ಸುಧಾರಿಸಿಲ್ಲ. ಚುನಾವಣೆಯಲ್ಲಿ ‘ಗೆಲ್ಲುವ ಕುದುರೆಗೆ ಮಾತ್ರ ಟಿಕೆಟ್’, ಅಂದರೆ ಅವರಿಗೆ ಇದೊಂದು ರೇಸು ಅಷ್ಟೆ! ಕುಟುಂಬದ ಇಬ್ಬಿಬ್ಬರಿಗೆ ಸೀಟು, ಸಿಕ್ಕವರಿಗೆ ಸೀರುಂಡೆ– ಸಿಗದವರ ಹ್ಯಾಪ ಮೋರೆ, ಕಣ್ಣೀರ ಕೋಡಿ. ನೀವೇ ಹೇಳಿ ನಾವು ಯಾರನ್ನು ಬೆಂಬಲಿಸುವುದು?

ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT