ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಾಳ ವೇಗನ್‌ ಮೇನಿಯಾ

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮೇನಾ ಸುವಾರಿ ಗೊತ್ತಾ? ಅಮೆರಿಕದ ರೂಪದರ್ಶಿ. ಕಳೆದ ವರ್ಷದಿಂದ ವೇಗನ್‌ ಆದವರು. ಪ್ರಾಣಿಜನ್ಯ ಉತ್ಪನ್ನಗಳನ್ನು ನಿರಾಕರಿಸಿದವರು. ಕೇವಲ ಊಟದಲ್ಲಿ ಮಾತ್ರವಲ್ಲ. ಉಡುಗೆ ತೊಡುಗೆಗಳಲ್ಲೂ ಪ್ರಾಣಿ ಜನ್ಯ ಉತ್ಪನ್ನಗಳನ್ನು ಬಳಸುವುದಿಲ್ಲವೆಂದು ಪಣತೊಟ್ಟವರು.

ಜೀವನದ 38 ವರ್ಷಗಳನ್ನು ಮಾಂಸವುಂಡು ಬೆಳೆದಿದ್ದೇನೆ. ಚರ್ಮದ ಬ್ಯಾಗು, ಜ್ಯಾಕೆಟ್‌, ಶೂಗಳನ್ನು ಧರಿಸಿ ಮೆರೆದಿದ್ದೇನೆ. ಅದ್ಯಾಕೊ ವೇಗನ್‌ ಆಗಬೇಕೆನಿಸಿತು. ಮೊದಮೊದಲು ಕಷ್ಟವಾಗಿತ್ತು. ಅಭ್ಯಾಸವಾದಂತೆ ನೈಸರ್ಗಿಕವಾಗಿದ್ದರೆ ಅದೆಷ್ಟು ಚೆನ್ನ ಎನಿಸಿತು. ಈಗ ಅದೇ ಅಭ್ಯಾಸವಾಗಿದೆ. ಆಹಾರ ಅಭ್ಯಾಸಕ್ಕೆ ಮಾತ್ರ ಸೀಮಿತಗೊಳಿಸುವ ಎಂದುಕೊಂಡಿದ್ದೆ. ಆದರೆ ಒಮ್ಮೆ ಹೆಗಲಿಗೆ ಹಾಕಿಕೊಂಡ ಚೀಲ ನೋಡಿದಾಗ ಮೃತಪ್ರಾಣಿಯ ಚರ್ಮವೇಕೆ ನನ್ನ ಜೋಳಿಗೆಯಾಗಿದೆ ಎನಿಸಿತು.

ಅದೇ ಕೊನೆ. ಅಂದಿನಿಂದ ಫರ್‌ ಇರುವ ಶೂ, ಸ್ಕಾರ್ಫ್‌, ಶಾಲುಗಳನ್ನಾಗಲೀ, ಲೆದರ್‌ನ ಜಾಕೆಟ್‌, ಶೂ, ಬ್ಯಾಗುಗಳನ್ನಾಗಲಿ ಬಳಸುವುದು ನಿಲ್ಲಿಸಿದೆ. ನನ್ನ ನಂಬಿ, ಇದರಿಂದ ಬದುಕು ಒಂಚೂರು ಬದಲಾಗಿಲ್ಲ. ಹಗುರವಾಗಿದೆಯೆನಿಸುತ್ತದೆ. ಆರಾಮಾಗಿರುವೆ ಎನಿಸುತ್ತದೆ.

ಯೋಗ ಮತ್ತು ಪ್ರಾಣಾಯಾಮಗಳು ಈಗ ಬದುಕಿನ ಭಾಗವೇ ಆಗಿವೆ. ಹಾಗಂತ ಕಸರತ್ತು ಮಾಡುವುದು ನಿಲ್ಲಿಸಿಲ್ಲ. ಅದೂ ಮಾಡುತ್ತಿರುವೆ. ಆದರೆ ನನ್ನ ವಯಸ್ಸು ಮಾತ್ರ ಎಲ್ಲೋ ಸ್ಥಗಿತಗೊಂಡಿರುವಂತೆ ಆರೋಗ್ಯವಂತಳಾಗಿದ್ದೇನೆ. ವೇಗನ್‌ ಆದ ನಂತರದ ಬದಲಾವಣೆಯೆಂದರೆ ಆರೋಗ್ಯದ ಶಾಂತಿ ಮನಸೊಳಗಿದ್ದರೆ, ಕಾಂತಿ ಹೊರಗೆ ಹೆಚ್ಚುತ್ತಲೇ ಇದೆ’ ಎನ್ನುವ ಮೇನಾ ಸುವಾರಿ ವೇಗನ್‌ ಆಗಿ ಈಗಿನ್ನೂ ಹತ್ತು ತಿಂಗಳಷ್ಟೆ!

**

ಮೆನಾ ಸುವಾರಿ ಅಂಗಸೌಷ್ಟವ

ಜನ್ಮದಿನ: ಫೆ.13, 1979 (39 ವರ್ಷ)

ಎತ್ತರ: 5.4

ತೂಕ: 48 ಕೆ.ಜಿ.

ದೇಹದ ಸುತ್ತಳತೆ: 34–26–36

ಕೂದಲು: ಹೊಂಬಣ್ಣ

ಕಣ್ಣು: ನೀಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT