ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 24 ವಿ.ವಿ ಗಳು ನಕಲಿ: ಯುಜಿಸಿ

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಗೋಕಾಕದಲ್ಲಿರುವ ಬಡಗಾಂವಿ ಸರ್ಕಾರ್ ವಿಶ್ವ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ದೇಶದ 24 ವಿಶ್ವವಿದ್ಯಾಲಯಗಳು ನಕಲಿ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಘೋಷಿಸಿದೆ.

‘24 ನಕಲಿ ವಿಶ್ವವಿದ್ಯಾಲಯಗಳು ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಪದವಿಗಳನ್ನು ನೀಡಲು ಇವು ಅರ್ಹವಲ್ಲ ಎಂದು ಈ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ’ ಎಂದು ಯುಜಿಸಿ ತಿಳಿಸಿದೆ. ಇವುಗಳ ‍ಪೈಕಿ ದೆಹಲಿಯಲ್ಲಿಯೇ ಎಂಟು ನಕಲಿ ವಿಶ್ವವಿದ್ಯಾಲಯಗಳಿವೆ.

ನಕಲಿ ವಿ.ವಿ ಗಳು; ಸ್ಥಳ

1  ಬಡಗಾಂವಿ ಸರ್ಕಾರ್ ವಿಶ್ವ ಮುಕ್ತವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆ, ಗೋಕಾಕ, ಬೆಳಗಾವಿ

2 ಮೈಥಿಲಿ ವಿಶ್ವವಿದ್ಯಾಲಯ; ದರಭಂಗಾ, ಬಿಹಾರ

3 ಕಮರ್ಷಿಯಲ್ ವಿಶ್ವವಿದ್ಯಾಲಯ; ದರಿಯಾಗಂಜ್, ದೆಹಲಿ

4 ಯುನೈಟೆಡ್ ನೇಷನ್ಸ್ ವಿಶ್ವವಿದ್ಯಾಲಯ; ದೆಹಲಿ

5 ವಕೇಷನಲ್ ವಿಶ್ವವಿದ್ಯಾಲಯ; ದೆಹಲಿ

6 ಎ.ಡಿ.ಆರ್. ಸೆಂಟ್ರಿಕ್ ಜ್ಯುರಿಡಿಕಲ್ ವಿಶ್ವವಿದ್ಯಾಲಯ; ನವದೆಹಲಿ

7 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ ಆ್ಯಂಡ್ ಎಂಜಿನಿಯರಿಂಗ್; ನವದೆಹಲಿ

8 ವಿಶ್ವಕರ್ಮ ಮುಕ್ತ ವಿಶ್ವವಿದ್ಯಾಲಯ; ನವದೆಹಲಿ

9 ಆಧ್ಯಾತ್ಮಿಕ ವಿಶ್ವವಿದ್ಯಾಲಯ; ನವದೆಹಲಿ

10 ಸೇಂಟ್ ಜಾನ್ ವಿಶ್ವವಿದ್ಯಾಲಯ; ಕೇರಳ

11 ರಾಜಾ ಅರೇಬಿಕ್ ವಿಶ್ವವಿದ್ಯಾಲಯ; ನಾಗಪುರ

12 ಇಂಡಿಯನ್ ಇನ್‌ಸ್ಟಿಟ್ಯುಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್; ಕೋಲ್ಕತ್ತ

13 ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಆ್ಯಂಡ್ ರಿಸರ್ಚ್; ಕೋಲ್ಕತ್ತ

14 ಮಹಿಳಾ ಗ್ರಾಮ ವಿದ್ಯಾಪೀಠ; ಅಲಹಾಬಾದ್

15 ವಾರಾಣಸೇಯ ಸಂಸ್ಕೃತ ವಿಶ್ವವಿದ್ಯಾಲಯ; ದೆಹಲಿ

16 ಗಾಂಧಿ ಹಿಂದಿ ವಿದ್ಯಾಪೀಠ; ಅಲಹಾಬಾದ್

17 ನ್ಯಾಷನಲ್ ಯುನಿವರ್ಸಿಟಿ ಆಫರ್ ಎಲೆಕ್ಟ್ರೊ ಕಾಂಪ್ಲೆಕ್ಸ್ ಹೋಮಿಯೊಪತಿ; ಕಾನ್ಪುರ 

18 ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ; ಅಲಿಗಡ

19 ಉತ್ತರ ಪ್ರದೇಶ ವಿಶ್ವವಿದ್ಯಾಲಯ; ಮಥುರಾ(ಉತ್ತರ ಪ್ರದೇಶ)

20 ಮಹಾರಾಣಾ ‍‍ಪ್ರತಾಪ್ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ; ‍ಪ್ರತಾಪ್‌ಗಡ (ಉತ್ತರ ಪ್ರದೇಶ)

21 ಇಂದ್ರಪ್ರಸ್ಥ ಶಿಕ್ಷಾ ‍ಪರಿಷತ್; ನೋಯಿಡಾ (ಉತ್ತರ ಪ್ರದೇಶ)

22 ನವಭಾರತ್ ಶಿಕ್ಷಾ ಪರಿಷತ್; ರೂರ್ಕೆಲಾ

23 ಉತ್ತರ ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ; ಒಡಿಶಾ

24 ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್; ಪುದುಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT