ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದು ಸವದಿ ನಾಮಪತ್ರ ಸಲ್ಲಿಕೆ

ತೇರದಾಳ ವಿಧಾನಸಭಾ ಕ್ಷೇತ್ರ: ಸಿದ್ದು ಸವದಿ ವಿಶ್ವಾಸ
Last Updated 25 ಏಪ್ರಿಲ್ 2018, 6:37 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳೂ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ವಿಜಯಶಾಲಿಗಳಾಗಲಿದ್ದಾರೆ ಎಂದು ತೇರದಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ತಿಳಿಸಿದರು.

ಮಂಗಳವಾರ ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ನಾಮಪತ್ರ ಸಲ್ಲಿಸಲು ಜಮಖಂಡಿಗೆ ತೆರಳುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರ ದಲ್ಲಿದ್ದಾಗ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನಗಂಡು ಜಿಲ್ಲೆಯ ಜನತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಶಾಲಿಯಾದರೆ, ತೇರದಾಳ ಮತಕ್ಷೇತ್ರದಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳ ಅಂತರದಿಂದ ವಿಜಯವನ್ನು ಸಾಧಿಸಲಿದೆ ಎಂದರು.

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅಂದಾಜು ಹತ್ತು ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು, ಬಿಜೆಪಿ ಪಕ್ಷದ ಮುಖಂಡರು ಮತ್ತು ಅಭಿಮಾನಿಗಳು ಭಾವಹಿಸಲಿದ್ದಾರೆ ಎಂದು ಸವದಿ ತಿಳಿಸಿದರು.

ಬೃಹತ್‌ ಮೆರವಣಿಗೆ: ಜಮಖಂಡಿಗೆ ನಾಮಪತ್ರ ಸಲ್ಲಿಸಲಿಕ್ಕೆ ತೆರಳುವ ಸಂದರ್ಭದಲ್ಲಿ ಸ್ಥಳೀಯ ಈಶ್ವರಲಿಂಗ ಮೈದಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸವದಿ ತೆರೆದ ವಾಹನದಲ್ಲಿ ಸ್ಥಳೀಯ ನೂಲಿನ ಗಿರಣಿಯವರೆಗೆ ತೆರಳಿದರು.ನಂತರ ಅಲ್ಲಿಂದ ವಾಹನಗಳಲ್ಲಿ ಹುನ್ನೂರವರೆಗೆ ತೆರಳಿ ಅಲ್ಲಿಂದ ಮತ್ತೆ ಪಾದಯಾತ್ರೆಯ ಮೂಲಕ ಮಿನಿವಿಧಾನ ಸೌಧಕ್ಕೆ ಆಗಮಿಸಿ ಮಧ್ಯಾಹ್ನ 12.30ಕ್ಕೆ ನಾಮ ಪತ್ರ ಸಲ್ಲಿಸಿದರು.

ಎತ್ತಿನ ಬಂಡಿಯಲ್ಲಿ ಸವದಿ ದಂಪತಿಗಳು:

ಹುನ್ನೂರದಿಂದ ಜಮಖಂಡಿಯ ಮಿನಿವಿಧಾನ ಸೌಧಕ್ಕೆ ನಾಮಪತ್ರ ಸಲ್ಲಿಸಲು ಸಿದ್ದು ಸವದಿ ಎತ್ತಿನ ಬಂಡಿಯಲ್ಲಿ ಬಂದು ಗಮನ ಸೆಳೆದರು. ಅವರ ಪತ್ನಿ, ಬಸನಗೌಡ ಪಾಟೀಲ, ದೇವಲ ದೇಸಾಯಿ, ಡಾ.ಪಿ.ವಿ.ಪಟ್ಟಣ ಸೇರಿದಂತೆ ಅನೇಕರು ಇದ್ದರು.

ಬನಹಟ್ಟಿಯಿಂದ ಜಮಖಂಡಿ ಯವರೆಗೆ 14 ಕಿ.ಮೀ ದಾರಿಯುದ್ದಕ್ಕೂ ದ್ವಿಚಕ್ರ, ರಿಕ್ಷಾಗಳು, ಟಂಟಂಗಳ , ಕಾರು, ಟ್ರ್ಯಾಕ್ಸ್‌ಗಳ ಸಾಲುಗಳು ಕಂಡು ಬಂದಿತು. ಬಿಜೆಪಿ ಮುಖಂಡರಾದ ಭೀಮಶಿ ಮಗದುಮ್‌, ಮಹಾದೇವಪ್ಪ ಹಟ್ಟಿ, ಪರಶುರಾಮ ಬಸವ್ವಗೋಳ, ಮನೋಹರ ಶಿರೋಳ, ದುಂಡಪ್ಪ ಮಾಚಕನೂರ, ಗೋವಿಂದ ಡಾಗಾ, ಸಿದ್ದನಗೌಡ ಪಾಟೀಲ, ರಾಮಣ್ಣ ಭದ್ರನ್ನವರ, ಸುರೇಶ ಚಿಂಡಕ, ಸುರೇಶ ಕೋಲಾರ, ಕಣೆಪ್ಪ ಹಾರೂಗೇರಿ, ರಾಜು ಬಾಣಕಾರ, ರಾಜು ಅಂಬಲಿ, ಸಂಜಯ ತೆಗ್ಗಿ, ಶಿವು ಗುಂಡಿ, ಶಿವಾನಂದ ಗಾಯಕವಾಡ, ಮಹಾವೀರ ಭಿಲವಡಿ, ಯಲ್ಲಪ್ಪ ತಳವಾರ, ಶ್ರೀಕಾಂತ ವಾಗ್ಮೋರೆ, ಕುಮಾರ ಕದಮ, ಪುಂಡಲಿಕ ಪಾಲಭಾವಿ, ಇಸಾಕ್‌ ಸವದಿ, ಬಾಬಾಗೌಡ ಪಾಟೀಲ, ಹರ್ಷವರ್ಧನ ಪಟವರ್ಧನ, ಚಿದಾನಂದ ಹೊರಟ್ಟಿ, ಮೀನಾಕ್ಷಿ ಸವದಿ, ಶೈಲಜಾ ಹೊಸಕೋಟಿ, ವೈಷ್ಣವಿ ಬಾಗೇವಾಡಿ, ಅನುರಾಧಾ ಹೊರಟ್ಟಿ, ಸವಿತಾ ನಂದಗೊಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT