ಜಿಲ್ಲಾಡಳಿತ ಹಮ್ಮಿಕೊಂಡಿರುವ ಆಂದೋಲನಕ್ಕೆ ಚಾಲನೆ; ಮತದಾನ ಜಾಗೃತಿ ಕಾರ್ಯಕ್ರಮ

ನನ್ನ ಮತ ಖಾತ್ರಿ- ಯುವಜನರಿಂದ ಸಹಿ

ಭಯವಿಲ್ಲದೇ, ಧರ್ಮ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗದೇ ಮುಕ್ತವಾಗಿ ನಮ್ಮ ಮತ ಚಲಾಯಿಸುತ್ತೇವೆ.

ಬೆಳಗಾವಿ: ಭಯವಿಲ್ಲದೇ, ಧರ್ಮ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗದೇ ಮುಕ್ತವಾಗಿ ನಮ್ಮ ಮತ ಚಲಾಯಿಸುತ್ತೇವೆ.

– ಹೀಗೆ ಘೋಷಿಸಿ ಒಬ್ಬೊಬ್ಬರಾಗಿ ಸಹಿ ಮಾಡುತ್ತಿದ್ದಂತೆ ನೆರೆದ್ದಿದವರಿಂದ ಚಪ್ಪಾಳೆಗಳ ಸುರಿಮಳೆಯಾಯಿತು. ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್ ಕೂಡ ಸಹಿ ಮಾಡುವ ಮೂಲಕ ಸಹಿ ಆಂದೋಲನಕ್ಕೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ‘ನನ್ನ ನೆರಳು ನನ್ನ ಮೇಲೆ-ನನ್ನ ಮತ ನನ್ನ ಹಕ್ಕು’ ವಿಶೇಷ ಕಾರ್ಯಕ್ರಮವು ಮತದಾನದ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಇದಕ್ಕೂ ಮುನ್ನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಐಕಾನ್ ವಿಮಲಾಬಾಯಿ ಕದಂ ಅವರನ್ನು ಸತ್ಕರಿಸಲಾಯಿತು.

ದೇಶದ ಹಿತಕ್ಕಾಗಿ ಮತ ಚಲಾಯಿಸಿ: ಆರ್‌. ರಾಮಚಂದ್ರನ್ ಮಾತನಾಡಿ, ‘ವೈಯಕ್ತಿಕ ಸೇವೆ-ಸೌಲಭ್ಯ ಪಡೆಯಲು ಬ್ಯಾಂಕ್‌ ಮತ್ತು ರೇಷನ್ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವ ನಾವು ದೇಶದ ಹಿತಕ್ಕಾಗಿ ಸಾಲಿನಲ್ಲಿ ನಿಂತು ಕಡ್ಡಾಯವಾಗಿ ಮತ ಚಲಾಯಿಸಬೇಕು. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರ ಸಹಭಾಗಿತ್ವವು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಗೆ ಅತ್ಯಗತ್ಯವಾಗಿದೆ. ಹೀಗಾಗಿ, ಎಲ್ಲ ಮಹಿಳೆಯರೂ ತಪ್ಪದೇ ಮತ ಚಲಾಯಿಸಬೇಕು’ ಎಂದು ತಿಳಿಸಿದರು.

‘ಮತದಾನ ನಮ್ಮ ಪವಿತ್ರ ಹಕ್ಕು. ಇದನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು’ ಎಂದು ಎಸ್. ಜಿಯಾವುಲ್ಲಾ ಹೇಳಿದರು.

ಜಿಲ್ಲಾ ಪಂಚಾಯ್ತಿ ಬಳಿಯಿಂದ ಆರಂಭವಾದ ರ‍್ಯಾಲಿ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ನಡೆಯಿತು. ಅಲ್ಲಿ ಮಾನವ ಸರಪಳಿ ರಚಿಸಿ ಮತದಾನದ ಮಹತ್ವ ಸಾರಲಾಯಿತು.

‘ನನ್ನ ಮತ ನನ್ನ ಹಕ್ಕು, ಮತದಾನ ಮಹಾದಾನ-ಐದು ವರ್ಷ ಸಮಾಧಾನ, ನನ್ನ ಮತ ನನ್ನ ಭವಿಷ್ಯ, ಮಾಡ ತಂಗಿ ಮತದಾನ-ದೇಶಕ್ಕಿದೆ ವರದಾನ, ಪ್ರತಿಶತ ಮತದಾನ-ಉತ್ತಮ ಸಮಾಜ ನಿರ್ಮಾಣ’ ಹೀಗೆ ಹಲವು ಘೋಷಣೆಗಳನ್ನು ವಿದ್ಯಾರ್ಥಿಗಳು ಹಾಕಿದರು.

ಜಿಲ್ಲಾ ಸ್ವೀ‍ಪ್‌ ಐಕಾನ್‌ ವಿಮಲಾಬಾಯಿ ಕದಂ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎ.ಎಲ್. ಪಾಟೀಲ, ಕಾಲೇಜಿನ ಉಪನ್ಯಾಸಕರು ಹಾಗೂ ಜಿಲ್ಲಾ ಪಂಚಾಯ್ತಿ ಸಿಬ್ಬಂದಿ ಭಾಗವಹಿಸಿದ್ದರು.

 

Comments
ಈ ವಿಭಾಗದಿಂದ ಇನ್ನಷ್ಟು
ಚುರುಕುಗೊಂಡ ಕೃಷಿ ಚಟುವಟಿಕೆ

ಸವದತ್ತಿ
ಚುರುಕುಗೊಂಡ ಕೃಷಿ ಚಟುವಟಿಕೆ

26 May, 2018
ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ

ಬೆಳಗಾವಿ
ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ

26 May, 2018

ಬೆಳಗಾವಿ
‘ನಿಫಾ’ ವೈರಾಣು ಸೋಂಕು: ಕಟ್ಟೆಚ್ಚರ

ಕೇರಳ ಹಾಗೂ ಮಂಗಳೂರಿನಲ್ಲಿ ‘ನಿಫಾ’ ವೈರಾಣು ಸೋಂಕು ಕಂಡುಬಂದಿದ್ದರಿಂದ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ವಿಶೇಷವಾಗಿ ಬಾವಲಿಗಳು ಹೆಚ್ಚಾಗಿ ವಾಸವಿರುವ ಖಾನಾಪುರದಲ್ಲಿ ಹೆಚ್ಚು ಜಾಗೃತಿ ವಹಿಸಲಾಗಿದೆ....

26 May, 2018
ಗರ್ಭಪಾತಕ್ಕೆ ಸಿಗಲಿದೆ ಐರ್ಲೆಂಡ್‌ ಬೆಂಬಲ

ಬೆಳಗಾವಿ
ಗರ್ಭಪಾತಕ್ಕೆ ಸಿಗಲಿದೆ ಐರ್ಲೆಂಡ್‌ ಬೆಂಬಲ

26 May, 2018

ಬೆಳಗಾವಿ
ರಾಜ್ಯ ಸರ್ಕಾರವನ್ನು ಟೀಕಿಸಿದ ಇನ್‌ಸ್ಪೆಕ್ಟರ್‌!

ಬೆಳಗಾವಿಯ ಜಿಲ್ಲಾ ಅಪರಾಧ ಪತ್ತೆ ದಳದ ಇನ್‌ಸ್ಪೆಕ್ಟರ್‌ ಉದ್ದಪ್ಪ ಕಟ್ಟಿಕರ್‌ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌...

26 May, 2018