ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನ ಮೇಲೆ ನರೇಂದ್ರ ಮೋದಿ ಟ್ಯಾಟೂ

Last Updated 25 ಏಪ್ರಿಲ್ 2018, 15:56 IST
ಅಕ್ಷರ ಗಾತ್ರ

ಬೆಂಗಳೂರು: ನೆಚ್ಚಿನ ರಾಜಕೀಯ ನಾಯಕ, ಸಿನಿಮಾ ನಟ–ನಟಿಯರ ಅಭಿಮಾನ ತೋರಿಸಿಕೊಳ್ಳಲು ಅಭಿಮಾನಿಗಳು ನಾನಾ ಕಸರತ್ತು ಮಾಡುತ್ತಾರೆ. ಇಲ್ಲೊಬ್ಬ ಅಭಿಮಾನಿ ತನ್ನ ಬೆನ್ನ ಮೇಲೆ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನೇ ಹಚ್ಚೆ ಹಾಕಿಸಿಕೊಂಡು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾನೆ.

ರಾಯಾಚೂರು ಜಿಲ್ಲೆ ದೇವದುರ್ಗ ಮೂಲದ ಬಸವರಾಜ್‌ ಮಡಿವಾಳ್‌ಗೆ ಮೋದಿ ಆಂದರೆ ಅಚ್ಚುಮೆಚ್ಚು. ಅವರ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬೆನ್ನಿನ ಮೇಲೆ ನಾಯಕನ ಭಾವಚಿತ್ರ ಹಾಕಿಸಿಕೊಂಡಿದ್ದಾನೆ. ಅಂದಹಾಗೆ ಈ ಮೋದಿ ಅವರ ಮುಖಭಾವವನ್ನು ಯಥಾವತ್ತಾಗಿ ಬಸವರಾಜ್‌ ಅವರ ಬೆನ್ನ ಮೇಲೆ ಸುಂದರವಾಗಿ ಹಚ್ಚೆ ಹಾಕಿದ ಕೀರ್ತಿ ಬೆಂಗಳೂರು ರಾಜಾಜಿನಗರದ ಹಚ್ಚೆ ಕಲಾವಿದ ಶಂಕರ್ ಅವರದ್ದು.

‘ಈ ಚಿತ್ರ ಬಿಡಿಸಲು 15 ತಾಸುಗಳನ್ನು ವ್ಯಯಿಸಿದ್ದೇನೆ. ಹನುಮಾನ್‌ ಜಯಂತಿ, ಮಹಾವೀರ ಬುದ್ಧ ಜಯಂತಿಯ ಪ್ರಯುಕ್ತ ಭಾವಚಿತ್ರಗಳನ್ನು ಹಾಕಿದ್ದೆ. ಇತ್ತೀಚೆಗೆ ತಂದೆ –ತಾಯಿ ಭಾವಚಿತ್ರಗಳಿಗೆ ಬೇಡಿಕೆ ಹೆಚ್ಚಿದೆ’ ಎಂದು ಹೇಳುತ್ತಾರೆ ಶಂಕರ್‌.

ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿ ಸ್ವಾಗತ್ ಟ್ಯಾಟೂ ಸ್ಟುಡಿಯೊ ಇಟ್ಟುಕೊಂಡಿರುವ ಶಂಕರ್, ಈಗಾಗಲೇ ನಟರಾದ ಪುನೀತ್, ಸುದೀಪ್, ಯಶ್, ದರ್ಶನ್, ಉಪೇಂದ್ರ ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್ಪಿ ರವಿ ಡಿ. ಚನ್ನಣ್ಣನವರ್ ಅವರ ಚಿತ್ರಗಳನ್ನು ಅಭಿಮಾನಿಗಳ ದೇಹದ ಮೇಲೆ ಹಚ್ಚೆ ರೂಪದಲ್ಲಿ ಹಾಕಿದ್ದಾರೆ.

ಶಂಕರ್‌ ಹಾಕಿರುವ ಟ್ಯಾಟೊ ಚಿತ್ರಗಳು, ವಿಡಿಯೊವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಂಕರ್ ಸಂಪರ್ಕ ಸಂಖ್ಯೆ: 97399 60999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT