ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನ್ ಪೂವಣ್ಣ ಹ್ಯಾಟ್ರಿಕ್ ಗೋಲು

Last Updated 25 ಏಪ್ರಿಲ್ 2018, 9:52 IST
ಅಕ್ಷರ ಗಾತ್ರ

ನಾಪೊಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯ ಮಂಗಳವಾರದ ಪಂದ್ಯಗಳಲ್ಲಿ ನುಚ್ಚಿಮಣಿಯಂಡ, ಪುಚ್ಚಿಮಂಡ, ಪಾಡೆಯಂಡ, ಪಾಲೆಯಂಡ, ಮದ್ರೀರ, ಚಂದುರ, ಪಟ್ರಪಂಡ, ಮುರುವಂಡ ನಾಗಂಡ, ಪೊರ್ಕೋವಂಡ, ಕೀತಿಯಂಡ ಹಾಗೂ ಕುಂಡ್ಯೋಳಂಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಮೈದಾನ ಒಂದರಲ್ಲಿ ನಡೆದ ಪಾಲೆಯಂಡ ಮತ್ತು ಮೂವೇರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಪಾಲೆಯಂಡ ತಂಡವು ಮೂವೇರ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು. ಪಾಲೆಯಂಡ ತಂಡದ ಪರ ಸೂರಿ ಸುಬ್ಬಯ್ಯ ಎರಡು ಹಾಗೂ ರಾಬಿನ್ ದೇವಯ್ಯ ಒಂದು ಗೋಲು ಗಳಿಸಿದರು.

ಎರಡನೇ ಪಂದ್ಯದಲ್ಲಿ ಮದ್ರೀರ ತಂಡವು ಬಡ್ಡೀರ ತಂಡದ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು. ಮದ್ರೀರ ತಂಡದ ಮದ್ರೀರ ಹರೀನ್ ಅಯ್ಯಪ್ಪ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಮೂರನೇ ಪಂದ್ಯವು ಪೋರ್ಕೋವಂಡ ಮತ್ತು ಚಂದುರ ತಂಡಗಳ ನಡುವೆ ನಡೆಯಿತು. ಚಂದುರ ತಂಡವು 3-0 ಗೋಲಿನಿಂದ ಜಯ ಸಾಧಿಸಿತು. ಚಂದುರ ತಂಡದ ಪರ ಪ್ರಧಾನ್ ಪೂವಣ್ಣ ಹ್ಯಾಟ್ರಿಕ್ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಮುರುವಂಡ ತಂಡವು ಮುಂಡಚಾಡೀರ ತಂಡವನ್ನು 5-0 ಗೋಲಿನಿಂದ ಮಣಿಸಿತು. ಈ ಪಂದ್ಯದಲ್ಲಿ ಮುರುವಂಡ ತಂಡದ ಅಣ್ಣಯ್ಯ 3, ತನುಶ್ 1, ಶಶಾಂಕ್ 1 ಗೋಲು ಗಳಿಸಿ ಭರ್ಜರಿ ಗೆಲುವಿಗೆ ಕಾರಣರಾದರು.

ಕೀತಿಯಂಡ ತಂಡವು ಮಂದೆಯಂಡ ತಂಡದ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿತು. ಕೀತಿಯಂಡ ದೇವಯ್ಯ 1 ಗೋಲು ಹೊಡೆದರು. ನಾಗಂಡ ತಂಡವು ಚೇನಿರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ನಾಗಂಡ ಪರ ರೋಶನ್ 2, ದಿವಿನ್ 1 ಗೋಲು ಬಾರಿಸಿದರು.

ಎರಡನೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ನುಚ್ಚಿಮಣಿಯಂಡ ತಂಡವು ಕಂಬೇಯಂಡ ತಂಡದ ವಿರುದ್ಧ ಸೆಣೆಸಾಟ ನಡೆಸಿತು. ನಿಗದಿತ ಅವಧಿಯಲ್ಲಿ ಆಟಗಾರರು ಯಾವುದೇ ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್‌ನಲ್ಲಿ ನುಚ್ಚಿಮಣಿಯಂಡ ತಂಡವು 5-4 ಗೋಲಿನಿಂದ ಜಯಸಾಧಿಸಿತು.

ಎರಡನೆಯ ಪಂದ್ಯದಲ್ಲಿ ಪುಚ್ಚಿಮಂಡ ತಂಡವು ಚಂಗೇಟಿರ ತಂಡವನ್ನು 1-0 ಗೋಲಿನಿಂದ ಮಣಿಸಿತು. ಕುತೂಹಲದಿಂದ ಕೂಡಿದ ಆಟದಲ್ಲಿ ಸುಬ್ಬಯ್ಯ ಗೋಲು ಹೊಡೆಯುವ ಮೂಲಕ ಪುಚ್ಚಿಮಂಡ ತಂಡದ ಗೆಲುವಿಗೆ ಕಾರಣರಾದರು.

ಮೂರನೇ ಪಂದ್ಯದಲ್ಲಿ ಪಾಡೇಯಂಡ ತಂಡವು ಮಂಡಂಗಡ ತಂಡವನ್ನು 4-1 ಗೋಲಿನಿಂದ ಸೋಲಿಸಿತು. ಪಾಡೇಯಂಡ ತಂಡದ ಪರ ಸಂತೋಷ್ ಅಯ್ಯಪ್ಪ 2, ಮಂದಣ್ಣ 1, ವರುಣ್ 1 ಗೋಲು ಗಳಿಸಿದರೆ, ಮಂಡಂಗಡ ಪರ ವಿಕ್ಕಿ ಮಂದಣ್ಣ 1 ಗೋಲು ಬಾರಿಸಿದರು.

ಐದನೇ ಪಂದ್ಯದಲ್ಲಿ ಪಟ್ರಪಂಡ ತಂಡವು ಅಪ್ಪಚಟ್ಟೋಳಂಡ ತಂಡವನ್ನು 2-1 ಗೋಲಿನಿಂದ ಸೋಲಿಸಿ
ಮುಂದಿನ ಹಂತಕ್ಕೆ ಪ್ರವೇಶಿಸಿತು. ಪಟ್ರಪಂಡ ಪರ ವಿತಾ ಗಣಪತಿ 2 ಗೋಲು ಬಾರಿಸಿದರೆ, ಅಪ್ಪಚಟ್ಟೋಳಂಡ ಪರ ಯಾನ್ ಬೋಪಣ್ಣ 1 ಗೋಲು ಬಾರಿಸಿದರು.

ಕುಂಡ್ಯೋಳಂಡ ಮತ್ತು ಕೋಳೇರ ತಂಡದ ನಡುವೆ ನಡೆದ ಪಂದ್ಯದಲ್ಲಿ ಕುಂಡ್ಯೋಳಂಡ ತಂಡವು ಕೋಳೇರ ತಂಡವನ್ನು 2-1 ಗೋಲಿನಿಂದ ಮಣಿಸಿತು. ಕುಂಡ್ಯೋಳಂಡ
ಪ್ರಫುಲ್ ಪೊನ್ನಪ್ಪ, ಲಂಚನ್ ಚಿಣ್ಣಪ್ಪ ಗೋಲು ಹೊಡೆದರೆ, ಕೋಳೇರ ಪರ ಮಿಲನ್ ಮಾಚಯ್ಯ 1 ಗೋಲು ಬಾರಿಸಿದರು.

ಮೈದಾನ 2 ರಲ್ಲಿ ನಡೆಯಬೇಕಾಗಿದ್ದ, ಮಣವಟ್ಟೀರ ಮತ್ತು ಬಯವಂಡ ತಂಡಗಳ ಪಂದ್ಯವನ್ನು ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದರು.

ಮೈದಾನ 1

4ಬೆಳಿಗ್ಗೆ 9ಕ್ಕೆ ಕೇಕಡ - ಚೋಯಮಾಡಂಡ

410ಕ್ಕೆ ಮಂಡೇಟಿರ - ಅಜ್ಜಮಡ

411ಕ್ಕೆ ತೆಕ್ಕಡ - ಚಂಬಂಡ

4ಮಧ್ಯಾಹ್ನ 12ಕ್ಕೆ ಐಚೆಟ್ಟೀರ - ತೀತಿರ

41ಕ್ಕೆ ಕುಲ್ಲೇಟಿರ - ಮುಕ್ಕಾಟಿರ (ಬೇತ್ರಿ)

ಮೈದಾನ 2

4ಬೆಳಿಗ್ಗೆ 9ಕ್ಕೆ ಮೂಕಳಮಡ - ಮಲ್ಲಂಗಡ

410ಕ್ಕೆ ಮುಕ್ಕಾಟಿರ - ಕುಟ್ಟೇಟಿರ

411ಕ್ಕೆ ಬಲ್ಯಮಂಡ - ಅಪ್ಪಾರಂಡ

4ಮಧ್ಯಾಹ್ನ 12ಕ್ಕೆ ಕಂಜಿತಂಡ - ಪಟ್ಟಚೆರುವಂಡ

41ಕ್ಕೆ ಮೇರಿಯಂಡ - ಕೊಂಗೇಟಿರ

42ಕ್ಕೆ ಬೌವೇರಿಯಂಡ - ಚೆರಿಯಪ್ಪಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT