ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ ಜಾಗೃತಿ

Last Updated 25 ಏಪ್ರಿಲ್ 2018, 10:14 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಜೆಪಿ ನಗರದ ಅಂಗನವಾಡಿ ಕೇಂದ್ರದಲ್ಲಿ ಮತದಾನದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊರರೋಗಿಗಳು ಚೀಟಿ ಮಾಡಿಸುವಲ್ಲಿ ನಿರ್ವಾಹಕಿ, ಮೇ 12ಕ್ಕೆ ಚುನಾವಣೆ ಇದೆ. ಮತದಾನ ಕಡ್ಡಾಯವಾಗಿ ಮಾಡಿರಿ ಎಂದು ಹೇಳುವುದರ ಜತೆಗೆ ಚೀಟಿಯಲ್ಲಿ ಮೊಹರು ಸಹ ಹಾಕಿರುವ ಚೀಟಿ ನೀಡುತ್ತಿದ್ದಾರೆ.

ಜೆಪಿ ನಗರದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೆರೆದಿದ್ದ ನಾಗರಿಕರು, ಮಹಿಳೆಯರಿಗೆ ಮತದಾನದ ಬಗೆಗೆ ಜಾಗೃತಿ ಮೂಡಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಶಿಲ್ಪಾ, ನಾಗಮ್ಮ, ಎಚ್. ಈರಮ್ಮ ಮಾತನಾಡಿ, ಮತದಾನ ಮಾಡಿದರೆ ನಮ್ಮ ಕರ್ತವ್ಯ ನಿಭಾಯಿಸಿದಂತಾಗಿ, ನಮ್ಮ ಹಕ್ಕಿಗಾಗಿ ಆಯ್ಕೆಯಾದವರನ್ನು ಕೇಳಲು ಅಧಿಕಾರ ಬರುವುದು ಎಂದರು.
ಶೈಲಜಾ, ಲಕ್ಷ್ಮಿದೇವಿ ಸಜ್ಜನ್, ಶಶಿಕಲಾ ಗೋಡೆ ಸೇರಿದಂತೆ ವಾರ್ಡ್‌ನ ನಾಗರಿಕರು, ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT