ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಯನ್ನು ತಡೆದ ಬಿಜೆಪಿ ಕಾರ್ಯಕರ್ತರು

ಬಿಜೆಪಿ ‘ಬಿ’ ಫಾರಂ ಪಡೆದ ಸುಂಡಹಳ್ಳಿ ಸೋಮಶೇಖರ್
Last Updated 25 ಏಪ್ರಿಲ್ 2018, 11:19 IST
ಅಕ್ಷರ ಗಾತ್ರ

ಪಾಂಡವಪುರ: ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ‘ಬಿ’ ಫಾರಂ ಪಡೆದಿದ್ದ ಸುಂಡಹಳ್ಳಿ ಸೋಮಶೇಖರ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಲು ಮುಂದಾದ ಘಟನೆ ಚುನಾವಣಾಧಿಕಾರಿಗಳ ಕಚೇರಿ ಮುಂಭಾಗ ಮಂಗಳವಾರ ನಡೆಯಿತು.

ಪಟ್ಟಣದ ಮಿನಿ ವಿಧಾನಸೌಧದ ಚುನಾವಣಾಧಿಕಾರಿ ಕಚೇರಿಗೆ ಬಂದ ಸುಂಡಹಳ್ಳಿ ಸೋಮಶೇಖರ್ ಅವರನ್ನು ಬಿಜೆಪಿ ಕಾರ್ಯಕರ್ತರು ಬಾಗಿಲ ಬಳಿಯೇ ತಡೆದರು. ತಳ್ಳಾಟ ನೂಕಾಟ ನಡೆಯಿತು. ಈ ನಡುವೆ ಮಧ್ಯ ಪ್ರವೇಶಿಸಿದ ಪೊಲೀಸರು ಸುಂಡಹಳ್ಳಿ ಸೋಮಶೇಖರ್‌ ಅವರನ್ನು ಚುನಾವಣಾಧಿಕಾರಿಗಳ ಬಳಿ ಹೋ‌ಗಲು ಅವಕಾಶ ಮಾಡಿಕೊಟ್ಟರು.

ಬಿಜೆಪಿಯಿಂದ ಮಾಜಿ ಶಾಸಕ ಡಿ.ಹಲಗೇಗೌಡರ ಮಗ ಎಚ್.ಮಂಜುನಾಥ್‌ಗೆ ಟಿಕೆಟ್‌ ಘೋಷಿಸಲಾಗಿತ್ತು. ಆದರೆ ಮಂಜುನಾಥ್ ಅವರು ಚುನಾವಣೆಯಿಂದ ದೂರ ಸರಿದಿದ್ದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ.ಮಾ.ರಮೇಶ್‌ ಮತ್ತು ಮುಖಂಡ ಜೆ.ಶಿವಲಿಂಗೇಗೌಡ ಅವರು ಪಕ್ಷದ ಬಿ.ಫಾರಂ ಪಡೆಯಲು ಮುಂದಾಗಿದ್ದರು. ಈ ನಡುವೆ ಮಂಡ್ಯ ತಾಲ್ಲೂಕಿನ ಸುಂಡಹಳ್ಳಿ ಗ್ರಾಮದ ಸೋಮಶೇಖರ್ ‘ಬಿ’ ಫಾರಂ ಪಡೆಯಲು ಯಶಸ್ವಿಯಾದರು. ಇದರಿಂದ ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ.

ಈ ನಡುವೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ.ಮಾ.ರಮೇಶ್‌ ಅವರೂ ನಾಮಪತ್ರ ಸಲ್ಲಿಸಿದರು. ಬೆಂಗಳೂರು ನಿವಾಸಿ ಎಂದು ಹೇಳಲಾಗುವ ತಾಲ್ಲೂಕಿನ ಕಾಡೇನಹಳ್ಳಿ ಗ್ರಾಮದ ದರ್ಶನ್‌ ಎಂಬ ಹೆಸರಿನ ಯುವಕ ನಾಮಪತ್ರ ಸಲ್ಲಿಸಲು ಬಂದಾಗ ರೈತ ಸಂಘದ ಕಾರ್ಯಕರ್ತರು ತಡೆದರು. ಮಧ್ಯ ಪ್ರವೇಶಿಸಿದ ಪೊಲೀಸರು ದರ್ಶನ್‌ ನಾಮಪತ್ರ ಸಲ್ಲಿಸಲು ಅನುವು ಮಾಡಿಕೊಟ್ಟರು.

‘ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಮತದಾರರಲ್ಲಿ ಗೊಂದಲ ಮೂಡಿಸಲು ಜೆಡಿಎಸ್‌ನ ಕೆಲವರು ‘ದರ್ಶನ್‌’  ಹೆಸರಿನ ಯುವಕನನ್ನು ಕರೆತಂದು ನಾಮಪತ್ರ ಸಲ್ಲಿಸುತ್ತಿದ್ದಾರೆ’ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಈ ಯುವಕನಿಗೆ ಅಡ್ಡಿ ಮಾಡಿದ್ದರು.

‘ದರ್ಶನ್‌’ಗೆ ಅಡ್ಡಿ ಪಡಿಸಿದ ರೈತ ಸಂಘ

ಬೆಂಗಳೂರು ನಿವಾಸಿ ಎಂದು ಹೇಳಲಾಗುವ ತಾಲ್ಲೂಕಿನ ಕಾಡೇನಹಳ್ಳಿ ಗ್ರಾಮದ ದರ್ಶನ್‌ ಎಂಬ ಹೆಸರಿನ ಯುವಕ ನಾಮಪತ್ರ ಸಲ್ಲಿಸಲು ಬಂದಾಗ ರೈತ ಸಂಘದ ಕಾರ್ಯಕರ್ತರು ತಡೆದರು. ಮಧ್ಯ ಪ್ರವೇಶಿಸಿದ ಪೊಲೀಸರು ದರ್ಶನ್‌ ನಾಮಪತ್ರ ಸಲ್ಲಿಸಲು ಅನುವು ಮಾಡಿಕೊಟ್ಟರು.

‘ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಮತದಾರರಲ್ಲಿ ಗೊಂದಲ ಮೂಡಿಸಲು ಜೆಡಿಎಸ್‌ನ ಕೆಲವರು ‘ದರ್ಶನ್‌’  ಹೆಸರಿನ ಯುವಕನನ್ನು ಕರೆತಂದು ನಾಮಪತ್ರ ಸಲ್ಲಿಸುತ್ತಿದ್ದಾರೆ’ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಈ ಯುವಕನಿಗೆ ಅಡ್ಡಿ ಮಾಡಿದ್ದರು.

ಪಾಂಡವಪುರ: ‘ಪೂರ್ವ ಸಿದ್ಧತೆಯಿಲ್ಲದ ಕಾರಣ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್‌ ಘೋಷಿಸಿದ್ದ ಬಿಜೆಪಿ ವರಿಷ್ಠರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ, ಬಿಜೆಪಿ ಮುಖಂಡ ಎಚ್.ಮಂಜುನಾಥ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಯಾವುದೇ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಬೇಕಾದರೆ ಕನಿಷ್ಠ 1 ವರ್ಷದ ಪೂರ್ವ ಸಿದ್ಧತೆ ಬೇಕಾಗುತ್ತದೆ. ಈ ಕಾರಣದಿಂದ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ನನ್ನ ತಂದೆ ಮಾಜಿ ಶಾಸಕ ದಿ.ಡಿ.ಹಲಗೇಗೌಡ ಅವರು ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದವರು. ನಾವು ಎಸ್‌.ಎಂ.ಕೃಷ್ಣ ಅವರ ಬೆಂಬಲಿಗರು. ಕೃಷ್ಣ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ನಾನು ಕೂಡ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪಟ್ಟಣದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆದಾಗ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನ‌ಮ್ಮ ಮನೆಗೆ ಭೇಟಿ ನೀಡಿ ಬಿಜೆಪಿಗೆ ಆಹ್ವಾನಿಸಿದ್ದರು. ಅದರಂತೆ ಬಿಜೆಪಿಗೆ ಸೇರಿದ್ದೆ. ಆದರೆ ನಾನು ಮೇಲುಕೋಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ’ ಎಂದು ಅವರು ತಿಳಿಸಿದರು.

‘ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರೂ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಮತ್ತು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT